ILT20: ಬಲಿಷ್ಠ ತಂಡವನ್ನು ಪ್ರಕಟಿಸಿದ ನೈಟ್ ರೈಡರ್ಸ್
Abu Dhabi Knight Riders squad: ಇಂಗ್ಲೆಂಡ್ನ ಸ್ಪೋಟಕ ಆಟಗಾರ ಜಾನಿ ಬೈರ್‌ಸ್ಟೋವ್, ಐರ್ಲೆಂಡ್ನ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್, ಕಾಲಿನ್ ಇಂಗ್ರಾಮ್, ರವಿ ರಾಂಪಾಲ್ ಸೇರಿದಂತೆ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ.
UAE T20 League: ಯುಎಇನಲ್ಲಿ ನಡೆಯಲಿರುವ ಹೊಸ ಟಿ20 ಲೀಗ್ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿಯು ಹೊಸ ತಂಡವನ್ನು ಘೋಷಿಸಿದೆ. ಈ ಲೀಗ್‌ನಲ್ಲಿ ಅಬು ಧಾಬಿ ನೈಟ್ ರೈಡರ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಸ್ಟಾರ್ ಆಟಗಾರರೇ ದಂಡೇ ಇರುವುದು ವಿಶೇಷ. ಅದರಲ್ಲೂ ಐಪಿಎಲ್ನಲ್ಲಿ ಕೆಕೆಆರ್ ಪರ ಆಡುತ್ತಿರುವ ಆ್ಯಂಡ್ರೆ ರಸೆಲ್ ಹಾಗೂ ಸುನೀಲ್ ನರೈನ್ ಅಬು ಧಾಬಿ ನೈಟ್ ರೈಡರ್ಸ್ ತಂಡದಲ್ಲೂ ಕಾಣಿಸಿಕೊಂಡಿದ್ದಾರೆ.
ಈ ಹೊಸ ಲೀಗ್‌ನಲ್ಲಿ ಒಂದು ತಂಡವು 18 ಆಟಗಾರರನ್ನು ಆಯ್ಕೆ ಮಾಡಬೇಕು. ಅದರಲ್ಲಿ 4 ಆಟಗಾರರು ಯುಎಇ ಪರ ಆಡುವ ಆಟಗಾರರಾಗಿಬೇಕೆಂದು ನಿಯಮವಿದೆ. ಅದರಂತೆ ಇದೀಗ ಅಬು ಧಾಬಿ ತಂಡವು ಒಟ್ಟು 14 ವಿದೇಶಿ ಆಟಗಾರರನ್ನು ಪ್ರಕಟಿಸಿದ್ದು, ಇನ್ನುಳಿದ ನಾಲ್ವರನ್ನು ಆಯ್ಕೆ ಮಾಡಬೇಕಿದೆ.
ಈ ತಂಡದಲ್ಲಿ ರಸೆಲ್ ಹಾಗೂ ನರೈನ್ ಹೊರತಾಗಿ ಇಂಗ್ಲೆಂಡ್ನ ಸ್ಪೋಟಕ ಆಟಗಾರ ಜಾನಿ ಬೈರ್‌ಸ್ಟೋವ್, ಐರ್ಲೆಂಡ್ನ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್, ಕಾಲಿನ್ ಇಂಗ್ರಾಮ್, ರವಿ ರಾಂಪಾಲ್ ಸೇರಿದಂತೆ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಂತೆ ಅಬು ಧಾಬಿ ನೈಟ್ ರೈಡರ್ಸ್ ತಂಡ ಈ ಕೆಳಗಿನಂತಿದೆ.
ಅಬು ಧಾಬಿ ನೈಟ್ ರೈಡರ್ಸ್ ತಂಡ: ಸುನಿಲ್ ನರೈನ್ (ವೆಸ್ಟ್ ಇಂಡೀಸ್), ಆಂಡ್ರೆ ರಸೆಲ್ (ವೆಸ್ಟ್ ಇಂಡೀಸ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್), ಲಹಿರು ಕುಮಾರ (ಶ್ರೀಲಂಕಾ), ಚರಿತ್ ಅಸಲಂಕಾ (ಶ್ರೀಲಂಕಾ), ಕಾಲಿನ್ ಇಂಗ್ರಾಮ್ (ದಕ್ಷಿಣ ಆಫ್ರಿಕಾ), ಅಕೆಲ್ ಹೊಸೈನ್ (ವೆಸ್ಟ್ ಇಂಡೀಸ್), ಸೀಕ್ಕುಗೆ ಪ್ರಸನ್ನ (ಶ್ರೀಲಂಕಾ), ರವಿ ರಾಂಪಾಲ್ (ವೆಸ್ಟ್ ಇಂಡೀಸ್), ರೇಮನ್ ರೈಫರ್ (ವೆಸ್ಟ್ ಇಂಡೀಸ್), ಕೆನ್ನಾರ್ ಲೆವಿಸ್ (ವೆಸ್ಟ್ ಇಂಡೀಸ್), ಅಲಿ ಖಾನ್ (ಅಮೆರಿಕ), ಬ್ರಾಂಡನ್ ಗ್ಲೋವರ್ (ನೆದರ್ಲ್ಯಾಂಡ್ಸ್).
IPL ಫ್ರಾಂಚೈಸಿಯ ಮೂರು ತಂಡಗಳು:
ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ. ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಮುಂಬೈ ಇಂಡಿಯನ್ಸ್), ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ (ಡೆಲ್ಲಿ ಕ್ಯಾಪಿಟಲ್ಸ್) ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.
ಅಂದರೆ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೂರು ತಂಡಗಳು ಯುಎಇ ಟಿ20 ಲೀಗ್‌ನಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಈ ಹಿಂದೆ ಐಪಿಎಲ್ ತಂಡಗಳ ಖರೀದಿಗೆ ಪೈಪೋಟಿ ನಡೆಸಿದ್ದ ಅದಾನಿ ಗ್ರೂಪ್ ಹಾಗೂ ಲ್ಯಾನ್ಸರ್ ಕ್ಯಾಪಿಟಲ್ ಇದೀಗ ಯುಎಇ ಟಿ20 ಲೀಗ್‌ನಲ್ಲಿ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.