ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವಿಶ್ವಕಪ್ನ ವೇಗದ ಶತಕ ವೀರ..!
Kevin O'Brien Announces Retirement: 37 ವರ್ಷದ ಕೆವಿನ್ ಐರ್ಲೆಂಡ್ ಪರ 3 ಟೆಸ್ಟ್, 153 ಏಕದಿನ ಮತ್ತು 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 5850 ರನ್ ಹಾಗೂ 172 ವಿಕೆಟ್‌ಗಳನ್ನು ಪಡೆದಿದ್ದಾರೆ.
Kevin O’Brien Announces Retirement: ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ ಐರ್ಲೆಂಡ್ ಆಲ್ರೌಂಡರ್ ಕೆವಿನ್ ಒ’ಬ್ರಿಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಐರ್ಲೆಂಡ್ ಪರ 16 ವರ್ಷಗಳ ಕಾಲ ಆಡಿದ್ದ ಕೆವಿನ್ ತಮ್ಮ ನಿವೃತ್ತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೂಲಕ ನನ್ನ ವೃತ್ತಿಜೀವನಕ್ಕೆ ವಿದಾಯ ಹೇಳಲು ಬಯಸಿದ್ದೆ. ಆದರೆ ಕಳೆದ ವರ್ಷ ವಿಶ್ವಕಪ್ ನಂತರ ನಾನು ಐರ್ಲೆಂಡ್‌ನ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಿವೃತ್ತಿ ನೀಡಲು ಮುಂದಾಗಿದ್ದಾನೆ ಎಂದು ಕೆವಿನ್ ಒ’ಬ್ರಿಯಾನ್ ತಿಳಿಸಿದ್ದಾರೆ.
2011 ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅತೀ ವೇಗದ ಶತಕ ಸಿಡಿಸಿ ಕೆವಿನ್ ಒ’ಬ್ರಿಯಾನ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಇಂಗ್ಲೆಂಡ್ ವಿರುದ್ಧ ನಡೆದ ಆ ಪಂದ್ಯದಲ್ಲಿ ಒ’ಬ್ರಿಯಾನ್ ಕೇವಲ 50 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಶತಕದ ನೆರವಿನಿಂದ ಅಂದು ಐರ್ಲೆಂಡ್ 5 ಎಸೆತಗಳು ಬಾಕಿ ಇರುವಂತೆಯೇ 328 ರನ್ಗಳನ್ನು ಚೇಸ್ ಮಾಡಿ ಇಂಗ್ಲೆಂಡ್ ವಿರುದ್ದ ಜಯ ಸಾಧಿಸಿದ್ದು ವಿಶೇಷ. ಇಂದಿಗೂ ಏಕದಿನ ವಿಶ್ವಕಪ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕೆವಿನ್ ಒಬ್ರಿಯಾನ್ ಹೆಸರಿನಲ್ಲಿದೆ.
37 ವರ್ಷದ ಕೆವಿನ್ ಐರ್ಲೆಂಡ್ ಪರ 3 ಟೆಸ್ಟ್, 153 ಏಕದಿನ ಮತ್ತು 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 5850 ರನ್ ಹಾಗೂ 172 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಹಲವು ಲೀಗ್ಗಳಲ್ಲೂ ಐರ್ಲೆಂಡ್‌ನ ಆಟಗಾರ ಕಾಣಿಸಿಕೊಂಡಿದ್ದರು. ಇದಾಗ್ಯೂ ಐಪಿಎಲ್ನಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ.
ಇಂದು ನಾನು 16 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ದೇಶಕ್ಕಾಗಿ 389 ಪಂದ್ಯಗಳನ್ನು ಆಡಿದ್ದೇನೆ. ನಾನು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ನನ್ನ ವೃತ್ತಿಜೀವನವನ್ನು ಮುಗಿಸಲು ಆಶಿಸಿದ್ದೆ. ಆದರೆ ಕಳೆದ ವರ್ಷದ ವಿಶ್ವಕಪ್‌ನಿಂದ ಐರಿಶ್ ತಂಡಕ್ಕೆ ಆಯ್ಕೆಯಾಗಿಲ್ಲ. ಆಯ್ಕೆದಾರರು ಮತ್ತು ಮ್ಯಾನೇಜ್‌ಮೆಂಟ್ ಅವರ ದೃಷ್ಟಿ ಬೇರೆಡೆಯತ್ತ ಇದೆ.
Thanks ☘️ pic.twitter.com/E4335nE8ls
— Kevin O’Brien (@KevinOBrien113) August 16, 2022
ನಾನು ಐರ್ಲೆಂಡ್‌ಗಾಗಿ ಆಡುವ ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ. ಪಿಚ್‌ನಲ್ಲಿ ಅನೇಕ ಸ್ನೇಹಿತರು ಸಿಕ್ಕಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದ ವೇಳೆ ನನಗೆ ಅನೇಕ ಸಂತೋಷದ ನೆನಪುಗಳು ಸಿಕ್ಕಿವೆ. ಈಗ ನನ್ನ ಜೀವನ ಮತ್ತು ನನ್ನ ವೃತ್ತಿಜೀವನದ ಮುಂದಿನ ಹಂತದಲ್ಲಿದೆ. ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಐರ್ಲೆಂಡ್‌ನಲ್ಲಿ ನನ್ನ ಸ್ವಂತ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಲು ಬಯಸಿದ್ದೇನೆ ಎಂದು ನಿವೃತ್ತಿ ಘೋಷಣೆಯಲ್ಲಿ 37 ವರ್ಷದ ಕೆವಿನ್ ಒಬ್ರಿಯಾನ್ ಬರೆದುಕೊಂಡಿದ್ದಾರೆ.
Published On - 3:28 pm, Tue, 16 August 22