Viral Video: ಲಿವಿಂಗ್​ಸ್ಟೋನ್ ಭರ್ಜರಿ ಶಾಟ್: ಒಂದೇ ಕೈಯಲ್ಲಿ ರಾಕೆಟ್ ಸಿಕ್ಸ್​

The Hundred: ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ನೀಡಿದ 146 ರನ್ ಗಳ ಗುರಿಯನ್ನು ಬೆನ್ನತ್ತಿದ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡಕ್ಕೆ ಲಿವಿಂಗ್ ಸ್ಟೋನ್ ಹಾಗೂ ನಾಯಕ ಮೊಯಿನ್ ಅಲಿ ಆಸರೆಯಾದರು.

Viral Video: ಲಿವಿಂಗ್​ಸ್ಟೋನ್ ಭರ್ಜರಿ ಶಾಟ್: ಒಂದೇ ಕೈಯಲ್ಲಿ ರಾಕೆಟ್ ಸಿಕ್ಸ್​
Liam Livingstone
TV9kannada Web Team

| Edited By: Zahir PY

Aug 16, 2022 | 4:24 PM

ಇಂಗ್ಲೆಂಡ್​ನ ಹೊಡಿಬಡಿ ದಾಂಡಿಗ ಲಿಯಾಮ್ ಲಿವಿಂಗ್​ಸ್ಟೋನ್ ಅವರ ಬ್ಯಾಟಿಂಗ್ ಅಬ್ಬರ ಹೇಗಿರುತ್ತೆ ಎಂಬುದನ್ನು ಐಪಿಎಲ್​ ನೋಡಿದವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಏಕೆಂದರೆ ಲಾಂಗ್​ ಶಾಟ್​ಗಳಿಗೆ ಹೆಸರುವಾಸಿಯಾಗಿರುವ ಲಿವಿಂಗ್​ಸ್ಟೋನ್ ಇದೀಗ ದಿ ಹಂಡ್ರೆಡ್ ಲೀಗ್​ನಲ್ಲೂ ಸಿಕ್ಸ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡಕ್ಕೆ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಲಿಯಾಮ್ ಇದೀಗ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್​ಹ್ಯಾಮ್​ ಫೀನಿಕ್ಸ್​ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಸೋಮವಾರ ಎಡ್ಜ್​ಬಾಸ್ಟನ್​ನಲ್ಲಿ ನಡೆದ ಟ್ರೆಂಟ್ ವಿರುದ್ಧದ ಪಂದ್ಯದಲ್ಲೂ ಲಿವಿಂಗ್​ಸ್ಟೋನ್ ಅಬ್ಬರಿಸಿದ್ದರು. 32 ಎಸೆತಗಳನ್ನು ಎದುರಿಸಿದ ಬಲಗೈ ದಾಂಡಿಗ ಅಜೇಯ 51 ರನ್ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ವಿಶೇಷ ಎಂದರೆ ಈ ವೇಳೆ ಲಿವಿಂಗ್​ಸ್ಟೋನ್​ 4 ಭರ್ಜರಿ ಸಿಕ್ಸ್​ಗಳನ್ನು ಸಿಡಿಸಿದ್ದರು. ಅದಲ್ಲೊಂದು ಒಂದೇ ಕೈಯಲ್ಲಿನ ರಾಕೆಟ್ ಸಿಕ್ಸ್​ ಆಗಿತ್ತು.

ಗ್ರೆಗೊರಿ ಎಸೆದ ಫುಲ್-ಟಾಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯವಿರಲಿಲ್ಲ. ದಿಢೀರಣೆ ತೂರಿದ ಬಂದ ಟಾಸ್​ ಬಾಲ್​ ಅನ್ನು ಒಂದೇ ಕೈಯಲ್ಲೇ ಲ್ಯಾಂಗ್ ಆನ್​ನತ್ತ ಬಾರಿಸುವ ಮೂಲಕ ಲಿವಿಂಗ್​ಸ್ಟೋನ್ ಭರ್ಜರಿ ಸಿಕ್ಸ್ ಸಿಡಿಸಿದರು. ಇದೀಗ ಈ ರಾಕೆಟ್ ಸಿಕ್ಸ್​ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ನೀಡಿದ 146 ರನ್ ಗಳ ಗುರಿಯನ್ನು ಬೆನ್ನತ್ತಿದ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡಕ್ಕೆ ಲಿವಿಂಗ್ ಸ್ಟೋನ್ ಹಾಗೂ ನಾಯಕ ಮೊಯಿನ್ ಅಲಿ ಆಸರೆಯಾದರು. ಇಬ್ಬರು ಅರ್ಧಶತಕ ಬಾರಿಸುವ ಮೂಲಕ 14 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada