Global T20 Canada 2023: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾನುವಾರ (ಆಗಸ್ಟ್ 6) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸರ್ರೆ ಜಾಗ್ವಾರ್ಸ್ ಮತ್ತು ಮಾಂಟ್ರಿಯಲ್ ಟೈಗರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ವ್ಯಾಂಕೋವರ್ ನೈಟ್ಸ್ ತಂಡವನ್ನು 38 ರನ್ಗಳಿಂದ ಸೋಲಿಸಿ ಸರ್ರೆ ಜಾಗ್ವಾರ್ಸ್ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಿದೆ.
ಮತ್ತೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಬ್ರಾಂಪ್ಟನ್ ವುಲ್ವ್ಸ್ ವಿರುದ್ಧ 9 ವಿಕೆಟ್ಗಳಿಂದ ಗೆದ್ದು ಮಾಂಟ್ರಿಯಲ್ ಟೈಗರ್ಸ್ 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಿತು. ಅಲ್ಲದೆ ಎರಡನೇ ಕ್ವಾಲಿಫೈಯರ್ನಲ್ಲಿ ವ್ಯಾಂಕೋವರ್ ನೈಟ್ಸ್ ವಿರುದ್ಧ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿ ಮಾಂಟ್ರಿಯಲ್ ಟೈಗರ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಅದರಂತೆ ಭಾನುವಾರ ಬ್ರಾಂಪ್ಟನ್ನಲ್ಲಿ ನಡೆಯಲಿರುವ ಗ್ಲೋಬಲ್ ಟಿ20 ಲೀಗ್ ಫೈನಲ್ ಪಂದ್ಯದಲ್ಲಿ ಸರ್ರೆ ಜಾಗ್ವಾರ್ಸ್ ಹಾಗೂ ಮಾಂಟ್ರಿಯಲ್ ಟೈಗರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.
ಮಾಂಟ್ರಿಯಲ್ ಟೈಗರ್ಸ್ ತಂಡ: ಮುಹಮ್ಮದ್ ವಸೀಮ್, ಕ್ರಿಸ್ ಲಿನ್ (ನಾಯಕ), ಶ್ರೀಮಂತ ವಿಜೆರತ್ನೆ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಶೆರ್ಫೇನ್ ರುದರ್‌ಫೋರ್ಡ್, ದೀಪೇಂದ್ರ ಸಿಂಗ್ ಐರಿ, ಆಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್‌ವೈಟ್, ಅಯಾನ್ ಅಫ್ಜಲ್ ಖಾನ್, ಅಬ್ಬಾಸ್ ಅಫ್ರಿದಿ, ಕಲೀಮ್ ಸನಾ, ಜಹೀರ್ ಖಾನ್ , ಅಕಿಫ್ ರಾಜಾ, ಅನೂಪ್ ಚಿಮಾ, ಭೂಪೇಂದ್ರ ಸಿಂಗ್.
ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ
ಸರ್ರೆ ಜಾಗ್ವಾರ್ಸ್ ತಂಡ: ಮೊಹಮ್ಮದ್ ಹ್ಯಾರಿಸ್, ಜತೀಂದರ್ ಸಿಂಗ್, ಲಿಟ್ಟನ್ ದಾಸ್(ವಿಕೆಟ್ ಕೀಪರ್), ಪರ್ಗತ್ ಸಿಂಗ್, ಇಫ್ತಿಕಾರ್ ಅಹ್ಮದ್(ನಾಯಕ), ಅಯಾನ್ ಖಾನ್, ಮ್ಯಾಥ್ಯೂ ಫೋರ್ಡ್, ದಿಲ್ಲನ್ ಹೇಲಿಗರ್, ಸಂದೀಪ್ ಲಾಮಿಚಾನೆ, ಸ್ಪೆನ್ಸರ್ ಜಾನ್ಸನ್, ಅಮ್ಮರ್ ಖಾಲಿದ್, ಮೊಹಮ್ಮದ್ ವಾಸಿಂ ಪಟೇಲ್, ಜೂನಿಯರ್, ಶೀಲ್ ಪಟೇಲ್ ಕೈರವ್ ಶರ್ಮಾ, ಅಲೆಕ್ಸ್ ಹೇಲ್ಸ್, ಬೆನ್ ಕಟಿಂಗ್, ಸನ್ನಿ ಮಾಥರು, ಬರ್ನಾರ್ಡ್ ಸ್ಕೋಲ್ಟ್ಜ್.
Published On - 5:42 pm, Sun, 6 August 23