‘ಮನಾಲಿ ಪ್ರವಾಸದ ಬಳಿಕ HIV ಟೆಸ್ಟ್ ಮಾಡಿಸಿಕೊಂಡಿದ್ದೆ’; ಅದೊಂದು ಘಟನೆ ನೆನೆದ ಶಿಖರ್ ಧವನ್
Shikhar Dhawan: ಶಿಖರ್ ಧವನ್ ಚಿಕ್ಕ ವಯಸ್ಸಿನಲ್ಲಿ ಮೊದಲ ಹಚ್ಚೆ ಹಾಕಿಸಿಕೊಂಡು ಮಾಡಿಕೊಂಡ ಎಡವಟ್ಟಿನಿಂದ ಧೈರ್ಯ ಕಳೆದುಕೊಂಡು ಹೆಚ್ಐವಿ ಟೆಸ್ಟ್ ಮಾಡಿಸಿಕೊಂಡಿದ್ದರ ಬಗ್ಗೆ ಮೌನ ಮುರಿದಿದ್ದಾರೆ.
ಟೀಂ ಇಂಡಿಯಾದ (Team India) ಅತ್ಯಂತ ಸ್ಟೈಲಿಶ್ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆ ಬಂದೊಡನೆ ಅಗ್ರಸ್ಥಾನದಲ್ಲಿ ಬರುವ ಹೆಸರೆಂದರೆ ಅದು ಶಿಖರ್ ಧವನ್ (Shikhar Dhawan). ಈ ಡೆಲ್ಲಿ ಡ್ಯಾಶರ್ ಕ್ರಿಕೆಟ್ ಲೋಕದಲ್ಲಿ ತಮ್ಮದೆಯಾದ ಮ್ಯಾನರಿಸಂ ಹೊಂದಿದ್ದಾರೆ. ಕೂದಲಿದ್ದರೂ, ತಲೆಯನ್ನು ಪೂರ್ಣ ಬೊಳಿಸಿಕೊಂಡು, ಮೀಸೆ ತಿರುವುದರಿಂದ ಹಿಡಿದು ಕ್ಯಾಚ್ ಹಿಡಿದಾಗ ತನ್ನದೇ ಶೈಲಿಯಲ್ಲಿ ತೊಡೆ ತಟ್ಟುವುದು ಸೇರಿದಂತೆ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದರವರೆಗೂ ಧವನ್ ತಂಡದ ಸ್ಟೈಲ್ ಐಕಾನ್ ಆಗಿದ್ದಾರೆ. ಆದಾಗ್ಯೂ, ಇತ್ತೀಚಿನ ಸಂದರ್ಶನವೊಂದರಲ್ಲಿ ಅಚ್ಚರಿಯ ಸಂಗತಿಯನ್ನು ಬಹಿರಂಗಗೊಳಿಸಿರುವ ಶಿಖರ್ ಧವನ್ ಚಿಕ್ಕ ವಯಸ್ಸಿನಲ್ಲಿ ಮೊದಲ ಹಚ್ಚೆ (Tattoo) ಹಾಕಿಸಿಕೊಂಡು ಮಾಡಿಕೊಂಡ ಎಡವಟ್ಟಿನಿಂದ ಧೈರ್ಯ ಕಳೆದುಕೊಂಡು ಹೆಚ್ಐವಿ ಟೆಸ್ಟ್ ಮಾಡಿಸಿಕೊಂಡಿದ್ದರ ಬಗ್ಗೆ ಮೌನ ಮುರಿದಿದ್ದಾರೆ.
ನನ್ನ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೆ
ಆಜ್ ತಕ್‌ಗೆ ನೀಡಿದ ಸಂದರ್ಶನದಲ್ಲಿ ಈ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿರುವ ಶಿಖರ್ ಧವನ್, ನಾನು 14-15 ನೇ ವಯಸ್ಸಿನಲ್ಲಿದ್ದಾಗ ಮೊದಲ ಬಾರಿಗೆ ಮನಾಲಿಗೆ ಹೋಗಿದ್ದೆ. ಆ ವೇಳೆ ಮೊದಲ ಬಾರಿಗೆ ನನ್ನ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೆ. ಸುಮಾರು 3 ರಿಂದ 4 ತಿಂಗಳ ಕಾಲ ಈ ವಿಚಾರವನ್ನು ನಾನು ಮನೆಯವರಿಗೆ ಹೇಳಿಯೇ ಇರಲಿಲ್ಲ. ಆದರೆ ಆ ಬಳಿಕ ಈ ಹಚ್ಚೆ ವಿಚಾರ ನನ್ನ ತಂದೆಗೆ ಹೇಗೋ ಗೊತ್ತಾಗಿ ಹೊಯ್ತು.
Shikhar Dhawan: ಕ್ರಿಕೆಟಿಕ ಶಿಖರ್ ಧವನ್ ರಾಜಕೀಯಕ್ಕೆ ಎಂಟ್ರಿ; ಈ ಬಗ್ಗೆ ಗಬ್ಬರ್ ಹೇಳಿದ್ದೇನು ಗೊತ್ತಾ?
HIV ಟೆಸ್ಟ್ ಮಾಡಿಸಿಕೊಂಡಿದ್ದೆ
ಇದು ಗೊತ್ತಾದ ಬಳಿಕ ನನ್ನ ತಂದೆ ನನಗೆ ಸಾಕಷ್ಟು ಥಳಿಸಿದ್ದರು. ಆ ಹಚ್ಚೆ ಹಾಕಿಸಿಕೊಂಡ ನಂತರ ನನಗೆ ಸ್ವಲ್ಪ ಭಯ ಶುರುವಾಯಿತು. ಏಕೆಂದರೆ ನನಗೆ ಹಚ್ಚೆ ಹಾಕಲು ಬಳಸಿದ್ದ ಈ ಸೂಜಿಯಿಂದ ಅದೆಷ್ಟು ಜನರಿಗೆ ಹಚ್ಚೆ ಹಾಕಿದ್ದರೋ, ಹಚ್ಚೆ ಹಾಕಿಸಿಕೊಂಡವರಿಗೆ ಯಾವ್ಯಾವ ರೋಗವಿತ್ತೊ ಎಂಬ ಭಯ ನನ್ನನ್ನು ಕಾಡಲಾರಂಭಿಸಿತ್ತು. ಹಾಗಾಗಿ ನಾನು ಆಸ್ಪತ್ರೆಗೆ ಹೋಗಿ ನನ್ನ HIV ಟೆಸ್ಟ್ ಮಾಡಿಸಿಕೊಂಡಿದ್ದೆ. ಹೆಚ್ಐವಿ ಟೆಸ್ಟ್ನಲ್ಲಿ ರಿಪೋರ್ಟ್ ನೆಗೆಟಿವ್ ಬಂದ ಮೇಲೆ ನಿರಾಳನಾದೆ ಎಂದಿದ್ದಾರೆ.
ನನ್ನ ಕೈಯಲ್ಲಿ ಶಿವನ ಟ್ಯಾಟೂ
ಇನ್ನು ತಮ್ಮ ದೇಹದ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂಗಳ ಅರ್ಥವನ್ನೂ ಧವನ್ ಬಹಿರಂಗಪಡಿಸಿದ್ದಾರೆ. ನಾನು ಮೊದಲ ಬಾರಿಗೆ ನನ್ನ ಬೆನ್ನಿನ ಮೇಲೆ ಸ್ಕಾರ್ಪಿಯೋ ಚಿತ್ರವನ್ನು ಮೊದಲ ಹಚ್ಚೆಯಾಗಿ ಹಾಕಿಸಿಕೊಂಡೆ. ನಂತರ ನಾನು ಅದರ ಮೇಲೆ ಬೇರೆ ಡಿಸೈನ್ ಕೂಡ ಹಾಕಿಸಿಕೊಂಡಿದ್ದೇನೆ. ನನ್ನ ಕೈಯಲ್ಲಿ ಶಿವನ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದೇನೆ. ನನ್ನ ಕೈ ಮೇಲೆ ಅರ್ಜುನನ ಹಚ್ಚೆ ಕೂಡ ಇದೆ. ಇದಕ್ಕೆ ಪ್ರಮುಖ ಕಾರಣ ಅರ್ಜುನ ಅತ್ಯುತ್ತಮ ಬಿಲ್ಲುಗಾರ. ಹೀಗಾಗಿ ಅವರ ಹಚ್ಚೆಯನ್ನು ಕೈಮೇಲೆ ಹಾಕಿಸಿಕೊಂಡಿದ್ದೇನೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Mon, 27 March 23