GT vs PBKS: ಇಂದಿನ ಪಂದ್ಯದಲ್ಲಿ ಯಾರು ಗೆದ್ದರೆ ಆರ್​ಸಿಬಿಗೆ ಸಹಾಯ ಆಗಲಿದೆ?: ಇಲ್ಲಿದೆ ನೋಡಿ

| Updated By: Vinay Bhat

Updated on: May 03, 2022 | 9:45 AM

RCB, IPL 2022; ಐಪಿಎಲ್​ನಲ್ಲಿಂದು ಗುಜರಾತ್ ಟೈಟಾನ್ಸ್ ಹಾಗೂ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿ ಆಗಲಿದೆ. ಹಾಗಾದ್ರೆ ಉಭಯ ತಂಡಗಳ ಸುದ್ದಿ ಏನಿದೆ?, ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೆ ಆರ್​​ಸಿಬಿಗೆ ಸಹಕಾರಿ ಆಗಲಿದೆ ಎಂಬುದನ್ನು ನೋಡೋಣ.

GT vs PBKS: ಇಂದಿನ ಪಂದ್ಯದಲ್ಲಿ ಯಾರು ಗೆದ್ದರೆ ಆರ್​ಸಿಬಿಗೆ ಸಹಾಯ ಆಗಲಿದೆ?: ಇಲ್ಲಿದೆ ನೋಡಿ
GT vs PBKS and RCB
Follow us on

ಐಪಿಎಲ್ 2022 ರಲ್ಲಿಂದು ಬಹುಮುಖ್ಯ ಪಂದ್ಯ ನಡೆಯಲಿದೆ. ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್​​ ಅಕಾಡೆಮಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ (GT vs PBKS) ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದ್ದು ಗೆದ್ದರೆ ಹಾರ್ದಿಕ್‌ ಪಾಂಡ್ಯ (Hardik Pandya) ಬಳಗ ಬಹುತೇಕ ಪ್ಲೇ ಆಫ್​ಗೆ ಲಗ್ಗೆಯಿಟ್ಟಂತೆ. ಇನ್ನೊಂದೆಡೆ ಪಂಜಾಬ್‌ ಹಾದಿ ಕಠಿಣಗೊಳ್ಳಲಿದ್ದು ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸಲಿದೆ. ಗುಜರಾತ್ ಆಡಿದ ಒಂಬತ್ತು ಪಂದ್ಯಗಳ ಪೈಕಿ ಸೋತಿದ್ದು ಒಂದರಲ್ಲಿ ಮಾತ್ರ. 16 ಅಂಕ ಹೊಂದಿದೆ. ರನ್‌ರೇಟ್‌ +0.377. ಇನ್ನೂ 5 ಪಂದ್ಯಗಳನ್ನುಆಡಲಿದೆ. ಪಂಜಾಬ್‌ ಕಿಂಗ್ಸ್‌ 9 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಜಯಿಸಿದೆ. ಪಂಜಾಬ್‌ಗೆ ಇಲ್ಲಿ ಗೆಲ್ಲಲೇ ಬೇಕು. ಅಷ್ಟೇ ಅಲ್ಲ, ಮುಂದಿನೆಲ್ಲ ಪಂದ್ಯಗಳಲ್ಲೂ ಜಯ ಸಾಧಿಸುತ್ತ ಹೋಗಬೇಕಿದೆ. ಹಾಗಾದ್ರೆ ಉಭಯ ತಂಡಗಳ ಸುದ್ದಿ ಏನಿದೆ?, ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೆ ಆರ್​​ಸಿಬಿಗೆ (RCB) ಸಹಕಾರಿ ಆಗಲಿದೆ ಎಂಬುದನ್ನು ನೋಡೋಣ.

ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ ಗುಜರಾತ್ ಬಲಿಷ್ಠವಾಗಿದೆ. ಗೆಲುವಿನ ಲಯದಲ್ಲಿರುವ ಟೈಟಾನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ. ತಂಡದಲ್ಲಿರುವ ವೃದ್ದಿಮಾನ್ ಸಾಹಾ, ಶುಭ್ಮನ್ ಗಿಲ್‌, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್‌ ಅವರೆಲ್ಲ ಒತ್ತಡವನ್ನು ಮೀರಿ ನಿಂತ ಆಟಗಾರರೆಂಬುದನ್ನು ಸಾಬೀತುಪಡಿಸಿದ್ದಾರೆ. ಪಂದ್ಯವನ್ನು ಫಿನಿಶ್ ಮಾಡುವ ಆಟಗಾರರ ದಂಡೇ ತಮಡದಲ್ಲಿದೆ. ನಾಯಕ ಹಾರ್ದಿಕ್ ಯಾವ ಕ್ರಮಾಂಕದಲ್ಲೂ ಬ್ಯಾಟ್‌ ಬೀಸಲು ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಗುಜರಾತ್‌ ಬೌಲಿಂಗ್‌ ತೀರಾ ಘಾತಕವೇನಲ್ಲ, ಆದರೆ ಸಂಘಟಿತ ಪ್ರದರ್ಶನ ನೀಡುತ್ತಿದೆ. ಮೊಹಮ್ಮದ್ ಶಮಿ, ಲೂಕಿ ಫ‌ರ್ಗ್ಯುಸನ್‌, ಸಂಗ್ವಾನ್‌, ಅಲ್ಜೆರಿ ಜೋಸೆಫ್ ಪ್ರಮುಖ ವೇಗಿಗಳು. ರಶೀದ್‌ ಖಾನ್‌ ವಿಕೆಟ್ ಕೀಳುವಂತಹ ಮೊದಲಿನ ಚಾರ್ಮ್ ಹೊಂದಿಲ್ಲವಾದರೂ ಕಂಟ್ರೋಲ್ ಮಾಡುತ್ತಿದ್ದಾರೆ.

Shreyas Iyer: ಸತತ 5 ಸೋಲುಗಳ ಬಳಿಕ ಗೆಲುವು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು ಕೇಳಿ

ಇತ್ತ ಪಂಜಾಬ್ ಗೆ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಸದೃಢವಾಗಿಲ್ಲ. ಕಳೆದ ಪಂದ್ಯದಲ್ಲಿ ಸೋತಿರುವ ಪಂಜಾಬ್​ಗೆ ಇಂದು ಗುಜರಾತ್ ಕಠಿಣ ಸವಾಲಾಗಲಿದೆ. ಸಿಕ್ಕ ಅವಕಾಶಗಳನ್ನು ಕೈಚೆಲ್ಲುತ್ತಿರುವ ಜಾನಿ ಬೇರ್‌ಸ್ಟೋ ಬದಲಿಗೆ ಒಡೆನ್ ಸ್ಮಿತ್ ವಾಪಸಾಗುವ ನಿರೀಕ್ಷೆಯಿದ್ದು, ರಿಷಿ ಧವನ್ ಅಥವಾ ಹರ್‌ಪ್ರೀತ್ ಬ್ರಾರ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ. ನಾಯಕ ಮಯಾಂಕ್ ಅಗರ್ವಾಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಪಂಜಾಬ್ ಮದ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್, ಭಾನುಕಾ ರಾಜಪಕ್ಷ ಅವರಂತಾ ಆಟಗಾರರು ಸ್ಪೋಟಕ ಪ್ರದರ್ಶನ ನಿಡುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಡೆಯುವುದು ಸ್ಪಷ್ಟವಾಗಿದೆ. ಬೌಲಿಂಗ್‌ನಲ್ಲಿ ರಿಷಿ ಧವನ್‌ ಟ್ರಂಪ್‌ಕಾರ್ಡ್‌ ಆಗಿದ್ದಾರೆ. ಜತೆಗೆ ರಬಾಡ, ಸಂದೀಪ್‌ ಶರ್ಮ, ಆರ್ಷದೀಪ್‌, ರಾಹುಲ್‌ ಚಹರ್‌ ಉತ್ತಮ ನಿಯಂತ್ರಣ ಸಾಧಿಸಿದರೆ ಪಂಜಾಬ್ ಗೆಲುವು ಅಸಾಧ್ಯವಲ್ಲ.

ಯಾರು ಗೆದ್ದರೆ ಆರ್​ಸಿಬಿಗೆ ಸಹಾಯ:

ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದರೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ತುಂಬಾನೆ ಸಹಕಾರಿ ಆಗಲಿದೆ. ಏಕೆಂದರೆ ಗುಜರಾತ್ ತಂಡ ಈಗಾಗಲೇ ಆಡಿದ 9 ಪಂದ್ಯಗಳಿಂದ 16 ಅಂಕ ಸಂಪಾದಿಸಿ ಪ್ಲೇ ಆಫ್ ಅನ್ನು ಖಚಿತ ಪಡಿಸಿದೆ. ಆದರೆ, ಇತ್ತ ಪಂಜಾಬ್ ಆಡಿದ 9 ಪಂದ್ಯಗಳಲ್ಲಿ 4 ಗೆಲುವು 5 ಸೋಲಿನೊಂದಿಗೆ 8 ಅಂಕ ಪಡೆದುಕೊಂಡಿದೆ. ಆರ್​ಸಿಬಿ ತಂಡ ಆಡಿದ 10 ಪಂದ್ಯಗಳಲ್ಲಿ 5 ಗೆಲುವು 5 ಸೋಲಿನೊಂದಿಗೆ 10 ಪಾಯಿಂಟ್​​ನಲ್ಲಿದೆ. ಇಂದಿನ ಪಂದ್ಯದಲ್ಲಿ ಎಲ್ಲಾದರು ಪಂಬಾಜ್ ಗೆದ್ದರೆ ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿಗಿಂತ ಮೇಲಿನ ಸ್ಥಾನ ಪಡೆದುಕೊಳ್ಳುವುದು ಖಚಿತ. ಹೀಗಾಗಿ ಗುಜರಾತ್ ತಂಡ ಗೆದ್ದರೆ ಡುಪ್ಲೆಸಿಸ್ ಪಡೆಗೆ ಯಾವುದೇ ಹಿನ್ನಡೆ ಆಗುವುದಿಲ್ಲ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 am, Tue, 3 May 22