
ಇಂದು ಅಹಮದಾಬಾದ್ನ ನಮೋ ಸ್ಟೇಡಿಯಂನಲ್ಲಿ ನಡೆದ 62ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಹೈದರಾಬಾದ್ ತಂಡವನ್ನು 34 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಇಂದು ಹೊಸ ಜೆರ್ಸಿಯೊಂದಿಗೆ ಬಂದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ತಂಡದ ಪರ ಶುಭ್ಮನ್ ಗಿಲ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಮಿಂಚಿದರು. 189 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ಈ ಬಾರಿಯೂ ಮೊದಲ ತಂಡವಾಗಿ ಪ್ಲೇಆಫ್ ಅನ್ನು ಖಚಿತಪಡಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 34 ರನ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಕ್ಲಾಸೆನ್ ಜೊತೆ ಹೋರಾಟ ನೀಡಿದ ಭುವಿ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು
ಹೈದರಾಬಾದ್ ತಂಡದ ಪರ ಮಾರ್ಕರ್ಡೆ 12 ರನ್ ಹಾಗೂ ಫಾರೂಕಿ 1 ರನ್ ಗಳಿಸಿ ಆಡುತ್ತಿದ್ದಾರೆ.
ಹೈದರಾಬಾದ್ ಗೆಲುವಿಗೆ 6 ಎಸೆತಗಳಲ್ಲಿ 42 ರನ್ ಅಗತ್ಯವಿದೆ.
19 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 147/9
ಹೈದರಾಬಾದ್ ತಂಡದ ಪರ ಭುವನೇಶ್ವರ್ 17 ಹಾಗೂ ಮಾರ್ಕಂಡೆ 1 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಗೆಲುವಿಗೆ 12 ಎಸೆತಗಳಲ್ಲಿ 53 ರನ್ ಅಗತ್ಯವಿದೆ. 18 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 136/8
ಹೆನ್ರಿಕ್ ಕ್ಲಾಸೆನ್ ಔಟಾಗಿದ್ದಾರೆ. ಮೊಹಮ್ಮದ್ ಶಮಿ ಬೌಲಿಂಗ್ನಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ನೀಡಿ ಕ್ಲಾಸೆನ್ ಔಟಾದರು. ಇದರೊಂದಿಗೆ ಹೈದರಾಬಾದ್ ತಂಡದ ಎಂಟನೇ ವಿಕೆಟ್ ಪತನಗೊಂಡಿದೆ.
ಹೆನ್ರಿಕ್ ಕ್ಲಾಸೆನ್ – 64 ರನ್, 44 ಎಸೆತಗಳು 4×4 3×6
16ನೇ ಓವರ್ ಬೌಲ್ ಮಾಡಿದ ತೇವಾಟಿಯಾ 12 ರನ್ ಬಿಟ್ಟುಕೊಟ್ಟರು
ಈ ಓವರ್‌ನಲ್ಲಿ 2 ಬೌಂಡರಿ ಬಿಟ್ಟುಕೊಟ್ಟರು
16 ಓವರ್ ಅಂತ್ಯಕ್ಕೆ 123/7
14ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಕ್ಲಾಸೆನ್ ಅರ್ಧಶತಕ ಪೂರೈಸಿದರು.
ಕ್ಲಾಸೆನ್ ಏಕಾಂಗಿ ಹೋರಾಟ ಮುಂದುವರೆಸಿದ್ದು, ಹೈದರಾಬಾದ್ ಗೆಲುವು ಇವರ ಆಟದ ಮೇಲೆ ನಿಂತಿದೆ.
14 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 104/7
ರಶೀದ್ ಬೌಲ್ ಮಾಡಿದ 14ನೇ ಓವರ್‌ನ 2ನೇ ಎಸೆತವನ್ನು ಭುವಿ ಬೌಂಡರಿಗಟ್ಟಿದರು. ಇದರೊಂದಿಗೆ ಹೈದರಾಬಾದ್ ಶತಕ ಪೂರೈಸಿದೆ.
ನೂರ್ ಅಹ್ಮದ್ ಬೌಲ್ ಮಾಡಿದ 13ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸೆನ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದರು. ಆ ನಂತರದ ಎಸೆತದಲ್ಲೂ ಬೌಂಡರಿ ಬಂತು.
ಹೈದರಾಬಾದ್ ತಂಡದ ಪರ ಭುವನೇಶ್ವರ್ 5 ಹಾಗೂ ಕ್ಲಾಸೆನ್ 39 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ – 80/7
ಒಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಮಾರ್ಕೊ ಯಾನ್ಸನ್ ಔಟಾದರು. ಮೋಹಿತ್ ಶರ್ಮಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪಾಂಡ್ಯ ಯಾನ್ಸನ್ ಕ್ಯಾಚ್ ಹಿಡಿದರು.
ಮಾರ್ಕೊ ಜಾನ್ಸನ್ – 3 ರನ್, 6 ಎಸೆತಗಳು
ಮೋಹಿತ್ ಶರ್ಮಾ ಎಸೆದ ಮೊದಲ ಓವರ್ನಲ್ಲೇ ಹೈದರಾಬಾದ್ 2 ವಿಕೆಟ್ ಕಳೆದುಕೊಂಡಿತ್ತು. ಸನ್ವೀರ್ 7 ರನ್ ಮತ್ತು ಅಬ್ದುಲ್ ಸಮಲ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 7 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ – 50/6
ಸನ್ವೀರ್ ಸಿಂಗ್ ಔಟಾಗಿದ್ದಾರೆ. ಏಳನೇ ಓವರ್‌ನ ಮೊದಲ ಎಸೆತದಲ್ಲಿ ಸನ್ವೀರ್ ಸಿಂಗ್ ಕ್ಯಾಚ್ ನೀಡಿ ಔಟಾದರು.
ಸನ್ವೀರ್ ಸಿಂಗ್ – 7 ರನ್, 6 ಎಸೆತಗಳು
ಹೈದರಾಬಾದ್ ಪವರ್ ಪ್ಲೇ ಮುಗಿದಿದ್ದು, ಈ 6 ಓವರ್‌ಗಳಲ್ಲಿ ತಂಡ 4 ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದೆ.
ಹೈದರಾಬಾದ್ 4ನೇ ವಿಕೆಟ್ ಪತನವಾಗಿದೆ.
ಶಮಿ ಬೌಲ್ ಮಾಡಿದ 5ನೇ ಓವರ್‌ನ ಮೊದಲ ಎಸೆತದಲ್ಲಿ ಏಡೆನ್ ಮಾರ್ಕ್ರಾಮ್ ಕ್ಯಾಚಿತ್ತು ಔಟಾದರು.
ಇದರೊಂದಿಗೆ ಶಮಿ ಈ ಪಂದ್ಯದಲ್ಲಿ 3ನೇ ವಿಕೆಟ್ ಕಬಳಿಸಿದ್ದಾರೆ.
ಯಶ್ ದಯಾಳ್ ಬೌಲ್ ಮಾಡಿದ 4ನೇ ಓವರ್‌ನ ಮೊದಲ ಎಸೆತದಲ್ಲೇ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
4 ಓವರ್ ಅಂತ್ಯಕ್ಕೆ 29/3
ಮೂರನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ತ್ರಿಪಾಠಿ ಔಟಾದರು. ಮೊಹಮ್ಮದ್ ಶಮಿ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ರಾಹುಲ್ ತ್ರಿಪಾಠಿ – 1 ರನ್, 2 ಎಸೆತಗಳು
ಹೈದರಾಬಾದ್ ತಂಡದ ಎರಡನೇ ವಿಕೆಟ್ ಪತನಗೊಂಡಿದೆ. ಅಭಿಷೇಕ್ ಶರ್ಮಾ ಔಟಾಗಿದ್ದಾರೆ. ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರನ್ನು ಯಶ್ ದಯಾಳ್ ಔಟ್ ಮಾಡಿದರು.
ಅಭಿಷೇಕ್ ಶರ್ಮಾ – 5 ರನ್, 5 ಎಸೆತಗಳು, 1×4
ಹೈದರಾಬಾದ್‌ಗೆ ಉತ್ತಮ ಆರಂಭ ಸಿಕ್ಕಿಲ್ಲ. ಮೊಹಮ್ಮದ್ ಶಮಿ ಮೊದಲ ಓವರ್‌ನ ಐದನೇ ಎಸೆತದಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಅವರನ್ನು ಔಟ್ ಮಾಡಿದರು. ಎರಡನೇ ಎಸೆತದಲ್ಲಿ ಅನ್ಮೋಲ್‌ಪ್ರೀತ್ ಕ್ಯಾಚ್ ಕೂಡ ಕೈಬಿಡಲಾಯಿತು.
20 ಓವರ್‌ಗಳ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ 189 ರನ್‌ಗಳ ಗುರಿ ನೀಡಿದೆ. ತಂಡದ ಪರ ಗಿಲ್ ಚೊಚ್ಚಲ ಶತಕ ಸಿಡಿಸಿದರೆ, ಸುದರ್ಶನ್ 47 ರನ್‌ಗಳ ಕೊಡುಗೆ ನೀಡಿದರು.
ಕೊನೆಯ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಕೊನೆಯ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದರು.ಆದರೆ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರು. ಈ ಓವರ್‌ನಲ್ಲಿ ಭುವನೇಶ್ವರ್ ಗಿಲ್, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದರೆ, ನೂರ್ ಅಹ್ಮದ್ ರನೌಟ್ ಆದರು.
ಶುಭ್ಮನ್ ಗಿಲ್ ಔಟಾಗಿದ್ದಾರೆ. ಭುವಿ ಎಸೆದ 20ನೇ ಓವರ್‌ನ ಮೊದಲ ಎಸೆತದಲ್ಲಿ ಅಬ್ದುಲ್ ಸಮದ್ಗೆ ಗಿಲ್ ಕ್ಯಾಚ್ ನೀಡಿದರು.
ಶುಭಮನ್ ಗಿಲ್ – 101 ರನ್, 58 ಎಸೆತಗಳು 13×4 1×6
ಶುಭ್ಮನ್ ಗಿಲ್ 19ನೇ ಓವರ್‌ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ಶತಕ ಪೂರೈಸಿದರು. ಇದು ಐಪಿಎಲ್‌ನಲ್ಲಿ ಅವರ ಮೊದಲ ಶತಕವಾಗಿದೆ. ಅದೇ ಸಮಯದಲ್ಲಿ ಗುಜರಾತ್ ಟೈಟಾನ್ಸ್ ಪರ ಐಪಿಎಲ್‌ನಲ್ಲಿ ಇದು ಮೊದಲ ಶತಕವಾಗಿದೆ.
ರಾಹುಲ್ ತೆವಾಟಿಯಾ ಔಟಾಗಿದ್ದಾರೆ. ಫಾರೂಕಿ ಬೌಲಿಂಗ್ ಮಾಡಿದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಮಾರ್ಕೊ ಯಾನ್ಸನ್ಗೆ ಕ್ಯಾಚ್ ನೀಡಿದರು.
ಗುಜರಾತ್ ಟೈಟಾನ್ಸ್ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಡೇವಿಡ್ ಮಿಲ್ಲರ್ ಔಟ್ ಆಗಿದ್ದಾರೆ. 17ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಲಾಂಗ್ ಆನ್ ಬೌಂಡರಿಯಲ್ಲಿ ಮಾರ್ಕ್ರಾಮ್ ಅವರಿಗೆ ಕ್ಯಾಚ್ ನೀಡಿದರು.
ಹಾರ್ದಿಕ್ ಪಾಂಡ್ಯ ಔಟಾಗಿದ್ದಾರೆ. ಭುವನೇಶ್ವರ್ ಕುಮಾರ್ ಓವರ್‌ನಲ್ಲಿ ಪಾಂಡ್ಯ, ರಾಹುಲ್ ತ್ರಿಪಾಠಿ ಅವರಿಗೆ ಕ್ಯಾಚ್ ನೀಡಿದರು. ಇದರೊಂದಿಗೆ ಗುಜರಾತ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. 16ನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿಕೆಟ್ ಉರುಳಿತು.
ಗುಜರಾತ್ ನ ಎರಡನೇ ವಿಕೆಟ್ ಪತನಗೊಂಡಿದೆ. ಸಾಯಿ ಸುದರ್ಶನ್ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡಿದ್ದಾರೆ. 15ನೇ ಓವರ್‌ನ ಮೊದಲ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು.
12ನೇ ಓವರ್‌ನಲ್ಲಿ ಬೌಂಡರಿಗಳ ಮಳೆ ಸುರಿಯಿತು
ಅಭಿಷೇಕ್ ಎಸೆದ 3ನೇ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದ ಗಿಲ್, 5ನೇ ಎಸೆತವನ್ನು ಬೌಂಡರಿ ಬಾರಿಸಿದರು
12 ಓವರ್ ಅಂತ್ಯಕ್ಕೆ 131/1
ಯಾನ್ಸೆನ್ ಬೌಲ್ ಮಾಡಿದ 11ನೇ ಓವರ್‌ನಲ್ಲಿ 14 ರನ್ ಬಂದವು
ನೋಬಾಲ್ನ ಪ್ರಯೋಜನ ಪಡೆದ ಸುದರ್ಶನ್ ಸಿಕ್ಸರ್ ಬಾರಿಸಿದರೆ, ಫ್ರೀ ಹಿಟ್ ಬಾಲ್ನಲ್ಲಿ ಬೌಂಡರಿ ಬಾರಿಸಿದರು
11 ಓವರ್ ಅಂತ್ಯಕ್ಕೆ 118/1
10ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಸುದರ್ಶನ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು
10 ಓವರ್ ಅಂತ್ಯಕ್ಕೆ 103/1
ಮಾರ್ಕಂಡೆ ಬೌಲ್ ಮಾಡಿದ 8ನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಬೌಂಡರಿಗಟ್ಟಿದ ಗಿಲ್, ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
ಮಾರ್ಕ್ರಾಮ್ ಬೌಲ್ ಮಾಡಿದ 7ನೇ ಓವರ್‌ನಲ್ಲಿ 13 ರನ್ ಬಂದವು
ಈ ಓವರ್‌ನಲ್ಲಿ ಗಿಲ್ 2 ಫೋರ್ ಹೊಡೆದರು.
ಇದರೊಂದಿಗೆ ಗಿಲ್ ಅರ್ಧಶತಕದ ಸನಿಹಕ್ಕೂ ಬಂದಿದ್ದಾರೆ.
ನಟರಾಜನ್ ಬೌಲ್ ಮಾಡಿದ 6ನೇ ಓವರ್‌ನಲ್ಲಿ 2 ಬೌಂಡರಿ ಬಂದವು
6 ಓವರ್ ಅಂತ್ಯಕ್ಕೆ 65/1
ಫರೂಕಿ ಬೌಲ್ ಮಾಡಿದ 4ನೇ ಓವರ್‌ನಲ್ಲಿ ಬರೋಬ್ಬರಿ 4 ಬೌಂಡರಿ ಬಂದವು.
ಕೊನೆಯ 4 ಎಸೆತದಲ್ಲಿ ಗಿಲ್ 4 ಫೋರ್ ಬಾರಿಸಿದರು.
ಇದರೊಂದಿಗೆ ಗುಜರಾತ್ ತನ್ನ ಅರ್ಧಶತಕ ಪೂರೈಸಿತು
ಈ ಓವರ್‌ನಲ್ಲಿ 18 ರನ್ ಬಂದವು.
ಭುವಿ ಬೌಲ್ ಮಾಡಿದ 3ನೇ ಓವರ್‌ನಲ್ಲಿ 15 ರನ್ ಬಂದವು
ಈ ಓವರ್‌ನಲ್ಲಿ ಗಿಲ್ 1 ಬೌಂಡರಿ ಹೊಡೆದರೆ, ಸುದರ್ಶನ್ ಕೂಡ 2 ಫೋರ್ ಬಾರಿಸಿದರು
ಜಿಟಿ 32/1
ಯಾನ್ಸೆನ್ ಬೌಲ್ ಮಾಡಿದ 2ನೇ ಓವರ್‌ನ 3ನೇ ಎಸೆತವನ್ನು ಸುದರ್ಶನ್ ಬೌಂಡರಿಗಟ್ಟಿದರು.
2ನೇ ಓವರ್‌ನಲ್ಲಿ ಒಟ್ಟು 11 ರನ್ ಬಂದವು
ಗುಜರಾತ್ 17/1
ಭುವಿ ಬೌಲ್ ಮಾಡಿದ ಮೊದಲ ಓವರ್‌ನ 3ನೇ ಎಸೆತದಲ್ಲಿ ಆರಂಭಿಕ ಸಹಾ ಯಾವುದೇ ರನ್ ಗಳಿಸದೆ ಪೆವಲಿಯನ್ಗೆ ತೆರಳಿದ್ದಾರೆ.
ಶುಭ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್
ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಸನ್ವೀರ್, ಮಾರ್ಕೊ ಯಾನ್ಸನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಫಜಲ್‌ಹಕ್ ಫಾರೂಕಿ, ಟಿ.ನಟರಾಜನ್
ಗುಜರಾತ್ ಟೈಟಾನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದರೆ ತನ್ನ ಪ್ಲೇಆಫ್ ಟಿಕೆಟ್ ಅನ್ನು ಖಚಿತಪಡಿಸಿಕೊಳ್ಳಲಿದೆ.
ಟಾಸ್ ಗೆದ್ದ ಹೈದರಾಬಾದ್ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:02 pm, Mon, 15 May 23