AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NEP: ಕೊನೆಯ 3 ಓವರ್​ಗಳಲ್ಲಿ ಆಂಗ್ಲರನ್ನು ನಡುಗಿಸಿದ ನೇಪಾಳ

Nepal Nearly Stuns England in 2026 T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ನೇಪಾಳ ತಂಡ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್‌ಗೆ ಕಠಿಣ ಸವಾಲು ನೀಡಿ, ಕೇವಲ 4 ರನ್‌ಗಳಿಂದ ರೋಚಕ ಸೋಲು ಅನುಭವಿಸಿತು. 185 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ, ಕೊನೆಯ ಓವರ್​ವರೆಗೂ ಹೋರಾಟ ನಡೆಸಿತ್ತು. ಜೋಪ್ರಾ ಆರ್ಚರ್ ಓವರ್‌ನಲ್ಲಿ ಭರ್ಜರಿ 22 ರನ್ ಗಳಿಸಿದ್ದು ಪಂದ್ಯದ ತಿರುವಾಗಿತ್ತು. ಅಂತಿಮವಾಗಿ ಸ್ಯಾಮ್ ಕರನ್ ಅವರ ಬಿಗಿಯಾದ ಬೌಲಿಂಗ್ ನೇಪಾಳದ ಗೆಲುವಿಗೆ ಅಡ್ಡಿಯಾಯಿತು, ಆದರೆ ಅವರ ಧೈರ್ಯಶಾಲಿ ಪ್ರದರ್ಶನ ಗಮನ ಸೆಳೆಯಿತು.

ENG vs NEP: ಕೊನೆಯ 3 ಓವರ್​ಗಳಲ್ಲಿ ಆಂಗ್ಲರನ್ನು ನಡುಗಿಸಿದ ನೇಪಾಳ
Eng Vs Nepal
ಪೃಥ್ವಿಶಂಕರ
|

Updated on: Feb 08, 2026 | 7:39 PM

Share

2026 ರ ಟಿ20 ವಿಶ್ವಕಪ್‌ನ (T20 World Cup 2026) ಐದನೇ ಪಂದ್ಯದಲ್ಲಿ ನೇಪಾಳ ತಂಡ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್‌ (Nepal vs England) ತಂಡಕ್ಕೆ ಕಠಿಣ ಸವಾಲು ನೀಡಿತು. ಇಂಗ್ಲೆಂಡ್ ನೀಡಿದ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೇಪಾಳ, ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿತು. ಆದರೆ, ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ನ ಬಿಗಿಯಾದ ಬೌಲಿಂಗ್‌ನಿಂದ ನೇಪಾಳ 4 ರನ್‌ಗಳಿಂದ ಸೋಲಬೇಕಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ತಂಡದ ಪರ ಜಾಕೋಬ್ ಬೆಥೆಲ್ 55 ಮತ್ತು ಹ್ಯಾರಿ ಬ್ರೂಕ್ 53 ರನ್ ಗಳಿಸಿದರು. ನೇಪಾಳ ಪರ ದೀಪೇಂದ್ರ ಸಿಂಗ್ ಐರಿ ಮತ್ತು ನಂದನ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಆರ್ಚರ್​ಗೆ 1 ಓವರ್​ನಲ್ಲಿ 3 ಸಿಕ್ಸರ್

ಈ ಗುರಿ ಬೆನ್ನಟ್ಟಿದ ನೇಪಾಳ 17 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿತ್ತು. ಅಂದರೆ ಕೊನೆಯ 3 ಓವರ್​ಗಳಲ್ಲಿ ನೇಪಾಳದ ಗೆಲುವಿಗೆ 45 ರನ್​ಗಳು ಬೇಕಾಗಿದ್ದವು. ಇಂಗ್ಲೆಂಡ್​ನ ಬೌಲಿಂಗ್ ವಿಭಾಗವನ್ನು ನೋಡಿದರೆ, ನೇಪಾಳಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿತ್ತು. ಇದಕ್ಕೆ ಪೂರಕವಾಗಿ 18ನೇ ಓವರ್ ಬೌಲ್ ಮಾಡಲು ಬಂದಿದ್ದು, ವಿಶ್ವದ ಅಗ್ರಗಣ್ಯ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಜೋಪ್ರಾ ಆರ್ಚರ್. ಆದರೆ ಆರ್ಚರ್​ನಂತಹ ಘಾತುಕ ವೇಗಿಗೂ ನೇಪಾಳದ ಬ್ಯಾಟ್ಸ್‌ಮನ್​ಗಳು ಬೆವರಿಳಿಸಿದರು.

ENG vs NEP: ಕ್ರಿಕೆಟ್ ಜನಕ ಇಂಗ್ಲೆಂಡ್​ಗೆ ಸೋಲಿನ ಭಯ ಹುಟ್ಟಿಸಿ ಸೋತ ಕ್ರಿಕೆಟ್ ಶಿಶು ನೇಪಾಳ

ಈ ಓವರ್​ನ ಮೊದಲ ಎಸೆತ ವೈಡ್ ಆದರೆ, ನಂತರದ ಎಸೆತವನ್ನು ಆರಿಫ್ ಸಿಕ್ಸರ್​ಗಟ್ಟಿದರು. ಆದರೆ ನಂತರದ ಎಸೆತದಲ್ಲಿ ಔಟಾದರು. ಆ ನಂತರ ಲೋಕೇಶ್ ಓವರ್​ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್​ನಲ್ಲಿ 22 ರನ್ ಬಂದವು. ಹೀಗಾಗಿ ಕೊನೆಯ 2 ಓವರ್​ಗಳಲ್ಲಿ ನೇಪಾಳ ಗೆಲುವಿಗೆ 23 ರನ್ ಬೇಕಿದ್ದವು. ಲ್ಯುಕ್ ವುಡ್​ ಬೌಲಿಂಗ್ ಮಾಡಿದ 19ನೇ ಓವರ್​ನಲ್ಲಿ ನೇಪಾಳ 13 ರನ್ ಕಲೆಹಾಕಿತು. ಈ ಓವರ್​ನಲ್ಲೂ ಲೋಕೇಶ್ 2 ಬೌಂಡರಿ ಬಾರಿಸಿದರು. ಅಂತಿಮವಾಗಿ ಕೊನೆಯ ಓವರ್​ನಲ್ಲಿ ನೇಪಾಳಕ್ಕೆ 10 ರನ್ ಬೇಕಿದ್ದವು. ಆದರೆ 20ನೇ ಓವರ್​ ಬೌಲ್ ಮಾಡಿದ ಸ್ಯಾಮ್ ಕರನ್ ತಮ್ಮ ಸ್ಲೋ ಯಾರ್ಕರ್​ಗಳಿಂದ ನೇಪಾಳಿ ಬ್ಯಾಟ್ಸ್‌ಮನ್​ಗಳನ್ನು ಬಿಗ್ ಶಾಟ್ ಹೊಡೆಯದಂತೆ ತಡೆದರು. ಈ ಓವರ್​ನಲ್ಲಿ ಒಂದೇ ಒಂದು ಬೌಂಡರಿಯಾಗಲಿ ಅಥವಾ ಸಿಕ್ಸರ್ ಆಗಲಿ ಬರಲಿಲ್ಲ. ಇದರ ಪರಿಣಾಮವಾಗಿ ನೇಪಾಳ ತಂಡ 4 ರನ್​ಗಳ ಸೋಲು ಕಾಣಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!