GG vs DC Live Score, WPL 2023: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮರಿಝನ್ನೆ ಕಪ್ ದಾಳಿಗೆ ನಲುಗಿದ ಗುಜರಾತ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಲಷ್ಟೇ ಶಕ್ತರಾದರು. 106 ರನ್ಗಳ ಸುಲಭ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಯುವ ಆಟಗಾರ್ತಿ ಶಫಾಲಿ ವರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಫಾಲಿ ಗುಜರಾತ್ ಜೈಂಟ್ಸ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ 28 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ ಅಜೇಯ 78 ರನ್ ಬಾರಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮರಿಝನ್ನೆ ಕಪ್ 4 ಓವರ್ಗಳಲ್ಲಿ 15 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಶಫಾಲಿ ವರ್ಮಾ 78 ರನ್ ಹಾಗೂ ಮೆಗ್ ಲ್ಯಾನಿಂಗ್ 21 ರನ್ಗಳ ಕಾಣಿಕೆ ನೀಡಿದರು.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ನಾಯಕಿ), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಮರಿಜಾನ್ನೆ ಕಪ್, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್, ಪೂನಂ ಯಾದವ್, ಲಾರಾ ಹ್ಯಾರಿಸ್, ಅರುಂಧತಿ ರೆಡ್ಡಿ, ಜಸಿಯಾ ಅಖ್ತರ್, ಅಪರ್ಣಾ ಮೊಂಡಲ್, ಟೈಟಾಸ್ ಸಾಧು, ಸ್ನೇಹಾ ದೀಪ್ತಿ
ಗುಜರಾತ್ ಜೈಂಟ್ಸ್ ತಂಡ: ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಅನ್ನಾಬೆಲ್ ಸದರ್ಲ್ಯಾಂಡ್, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಮಾನ್ಸಿ ಜೋಶಿ, ತನುಜಾ ಕನ್ವರ್, ಲಾರಾ ವೊಲ್ವಾರ್ಡ್ಟ್, ಜಾರ್ಜಿಯಾ ವಾರೆಹ್ಯಾಮ್ ಪಟೇಲ್, ಅಶ್ವನಿ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ.
10 ವಿಕೆಟ್ಗಳಿಂದ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
ಕೇವಲ 7 ಓವರ್ಗಳಲ್ಲಿ ಶತಕ ಪೂರೈಸಿದ ಡೆಲ್ಲಿ ಕ್ಯಾಪಿಟಲ್ಸ್
ಕ್ರೀಸ್ನಲ್ಲಿ ಶಫಾಲಿ ವರ್ಮಾ – ಮೆಗ್ ಲ್ಯಾನಿಂಗ್ ಬ್ಯಾಟಿಂಗ್
ಮಾನ್ಸಿ ಜೋಶಿ ಓವರ್ನಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಫಾಲಿ ವರ್ಮಾ
ತನುಜಾ ಕನ್ವರ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಉತ್ತರ ನೀಡಿದ ಶಫಾಲಿ ವರ್ಮಾ
ಕೇವಲ 19 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ
ಗಾರ್ಡ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಶಫಾಲಿ ವರ್ಮಾ
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ – ಶಫಾಲಿ ವರ್ಮಾ ಬ್ಯಾಟಿಂಗ್
ಕಿಮ್ ಗಾರ್ಥ್ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಶಫಾಲಿ ವರ್ಮಾ
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 106 ರನ್ಗಳ ಗುರಿ ನೀಡಿದ ಗುಜರಾತ್ ಜೈಂಟ್ಸ್
ಶಿಖಾ ಪಾಂಡೆ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ತನುಜಾ (13)
17 ಓವರ್ಗಳಲ್ಲಿ ಕೇವಲ 89 ರನ್ ಕಲೆಹಾಕಿದ ಗುಜರಾತ್ ಜೈಂಟ್ಸ್
ಕ್ರೀಸ್ನಲ್ಲಿ ತನುಜಾ-ಗಾರ್ಥ್ ಬ್ಯಾಟಿಂಗ್
ಕ್ರೀಸ್ನಲ್ಲಿ ಕಿಮ್ ಗಾರ್ಥ್ – ತನುಜಾ ಕನ್ವರ್ ಬ್ಯಾಟಿಂಗ್
ರಾಧಾ ಯಾದವ್ ಎಸೆತದಲ್ಲಿ ಜೋರ್ಜಿಯಾ (22) ಕ್ಲೀನ್ ಬೌಲ್ಡ್
ಗುಜರಾತ್ ಜೈಂಟ್ಸ್ ತಂಡದ 7ನೇ ವಿಕೆಟ್ ಪತನ
ಕ್ರೀಸ್ನಲ್ಲಿ ಜೋರ್ಜಿಯಾ-ಗಾರ್ಥ್ ಬ್ಯಾಟಿಂಗ್
ಕ್ರೀಸ್ನಲ್ಲಿ ಗಾರ್ಥ್ ಹಾಗೂ ಜೋರ್ಜಿಯಾ ಬ್ಯಾಟಿಂಗ್
ನೋರಿಸ್ ಎಸೆತದಲ್ಲಿ ಡೀಪ್ ಕವರ್ನತ್ತ ಆಕರ್ಷಕ ಫೋರ್ ಬಾರಿಸಿದ ಜೋರ್ಜಿಯಾ
ಮರಿಝನ್ನೆ ಕಪ್ ಎಸೆತದಲ್ಲಿ ಸುಷ್ಮಾ ವರ್ಮಾ (2) ಕ್ಲೀನ್ ಬೌಲ್ಡ್
ಕೇವಲ 15 ರನ್ ನೀಡಿ 5 ವಿಕೆಟ್ ಕಬಳಿಸಿದ ಮರಿಝನ್ನೆ ಕಪ್
ಮೊದಲ 6 ಓವರ್ಗಳಲ್ಲೇ 5 ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್
ಮರಿಝನ್ನೆ ಕಪ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಹರ್ಲೀನ್ ಡಿಯೋಲ್ (20)
ಶಿಖಾ ಪಾಂಡೆ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಹೇಮಲತಾ (5)
ಮರಿಝನ್ನೆ ಎಸೆತದಲ್ಲಿ ಲೆಗ್ ಸೈಡ್ನತ್ತ ಫ್ಲಿಕ್ ಶಾಟ್ ಬಾರಿಸಿದ ಹರ್ಲೀನ್ ಡಿಯೋಲ್…ಫೋರ್
ಮರಿಝನ್ನೆ ಎಸೆತದಲ್ಲಿ ಗಾರ್ಡ್ನರ್ (0) ಎಲ್ಬಿಡಬ್ಲ್ಯೂ…ಔಟ್
ಡೆಲ್ಲಿ ಕ್ಯಾಪಿಟಲ್ಸ್ಗೆ ಬ್ಯಾಕ್ ಟು ಬ್ಯಾಕ್ ವಿಕೆಟ್
ಮರಿಝನ್ನೆ ಕಪ್ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಲೌರಾ (1)
ಮರಿಝನ್ನೆ ಕಪ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಮೇಘನಾ (0) ಕ್ಲೀನ್ ಬೌಲ್ಡ್
GGT 0/1 (0.2)
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ದಯಾಲನ್ ಹೇಮಲತಾ, ಸ್ನೇಹ್ ರಾಣಾ(ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ನಾಯಕಿ), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Time for Match 9⃣ of the #TATAWPL ?@GujaratGiants take on the @DelhiCapitals at the DY Patil Stadium ?️
Who’s winning this one❓ #GGvDC pic.twitter.com/GYVcEWJ0nm
— Women’s Premier League (WPL) (@wplt20) March 11, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಆರಂಭ: 7.30 ಕ್ಕೆ
ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
Published On - 6:34 pm, Sat, 11 March 23