GT vs SRH IPL 2026: ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ
Gujarat Titans vs Sunrisers Hyderabad, IPL 2026: ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಗುಜರಾತ್ ಟೈಟಾನ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನು ಒಂದು ಮ್ಯಾಚ್ ಕಾರಣಾಂತರದಿಂದ ರದ್ದಾಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೇವಲ 86 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ 82 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಗುಜರಾತ್ ಟೈಟಾನ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಇನ್ನು ಒಂದು ಮ್ಯಾಚ್ ಕಾರಣಾಂತರದಿಂದ ರದ್ದಾಗಿತ್ತು.
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಕ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.
LIVE NEWS & UPDATES
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ ತಂಡಕ್ಕೆ ಭರ್ಜರಿ ಜಯ
- ಗುಜರಾತ್ ಟೈಟಾನ್ಸ್ ತಂಡಕ್ಕೆ 82 ರನ್ಗಳ ಭರ್ಜರಿ ಜಯ
- 20 ಓವರ್ಗಳಲ್ಲಿ 168 ರನ್ ಕಲೆಹಾಕಿದ್ದ ಗುಜರಾತ್ ಟೈಟಾನ್ಸ್
- 169 ರನ್ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 14.5 ಓವರ್ಗಳಲ್ಲಿ 86 ರನ್ಗಳಿಗೆ ಆಲೌಟ್.
- ಭರ್ಜರಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್
-
GT vs SRH IPL 2026 Live Score: ಎಸ್ಆರ್ಹೆಚ್ 7ನೇ ವಿಕೆಟ್ ಪತನ
ಜೇಸನ್ ಹೋಲ್ಡರ್ ಎಸೆದ 11ನೇ ಓವರ್ನ 4ನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ಗೆ ಕ್ಯಾಚ್ ನೀಡಿದ ಎನ್ಕೆಆರ್.
ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದ ನಿತೀಶ್ ಕುಮಾರ್ ರೆಡ್ಡಿ.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಶಿವಾಂಗ್ ಕುಮಾರ್ ಬ್ಯಾಟಿಂಗ್.
-
-
GT vs SRH IPL 2026 Live Score: ಎಸ್ಆರ್ಹೆಚ್ 6ನೇ ವಿಕೆಟ್ ಪತನ
ಜೇಸನ್ ಹೋಲ್ಡರ್ ಎಸೆದ 11ನೇ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಹೆನ್ರಿಕ್ ಕ್ಲಾಸೆನ್.
16 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹೆನ್ರಿಕ್ ಕ್ಲಾಸೆನ್.
ಕ್ರೀಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
-
GT vs SRH IPL 2026 Live Score: ಎಸ್ಆರ್ಹೆಚ್ 5ನೇ ವಿಕೆಟ್ ಪತನ
ಪ್ರಸಿದ್ಧ್ ಕೃಷ್ಣ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸಲೀಲ್ ಅರೋರಾ.
13 ಎಸೆತಗಳಲ್ಲಿ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸಲೀಲ್.
10 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 56 ರನ್ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್.
-
GT vs SRH IPL 2026 Live Score: ಅರ್ಧಶತಕ ಪೂರೈಸಿದ ಎಸ್ಆರ್ಹೆಚ್
ಜೇಸನ್ ಹೋಲ್ಡರ್ ಎಸೆದ 9ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.
ಈ ಫೋರ್ನೊಂದಿಗೆ 8.1 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಸಲೀಲ್ ಅರೋರಾ ಬ್ಯಾಟಿಂಗ್.
-
-
GT vs SRH IPL 2026 Live Score: ಎಸ್ಆರ್ಹೆಚ್ 4ನೇ ವಿಕೆಟ್ ಪತನ
ಕಗಿಸೊ ರಬಾಡ ಎಸೆದ 6ನೇ ಓವರ್ನ 4ನೇ ಎಸೆತದಲ್ಲಿ ಸುಲಭ ಕ್ಯಅಚ್ ನೀಡಿ ಹೊರ ನಡೆದ ಸ್ಮರಣ್ ರವಿಚಂದ್ರನ್.
15 ಎಸೆತಗಳಲ್ಲಿ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಮರಣ್.
ಪವರ್ಪ್ಲೇನಲ್ಲಿ ಕೇವಲ 34 ರನ್ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಸಲೀಲ್ ಅರೋರಾ ಬ್ಯಾಟಿಂಗ್.
-
GT vs SRH IPL 2026 Live Score: ಎಸ್ಆರ್ಹೆಚ್ 3ನೇ ವಿಕೆಟ್ ಪತನ
ಕಗಿಸೊ ರಬಾಡ ಎಸೆದ ನಾಲ್ಕನೇ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್.
7 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್.
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಗುಜರಾತ್ ಟೈಟಾನ್ಸ್,
-
GT vs SRH IPL 2026 Live Score: ಎಸ್ಆರ್ಹೆಚ್ 2ನೇ ವಿಕೆಟ್ ಪತನ
ಕಗಿಸೊ ರಬಾಡ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ ಅಭಿಷೇಕ್ ಶರ್ಮಾ.
ಮೂರನೇ ಎಸೆತದಲ್ಲಿ ಬೌಲ್ಡ್ ಆಗಿ ಹೊರ ನಡೆದ ಅಭಿಷೇಕ್ ಶರ್ಮಾ (6).
2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 13 ರನ್ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ಸ್ಮರಣ್ ರವಿಚಂದ್ರನ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್.
-
GT vs SRH IPL 2026 Live Score: ಮಿಯಾ ಮ್ಯಾಜಿಕ್
ಮೊದಲ ಓವರ್ನ 4ನೇ ಎಸೆತದಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್.
ರನ್ ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್ ಹೈದರಾಬಾದ್.
ಮೊದಲ ಓವರ್ ಮೇಡನ್ ಮಾಡಿದ ಮೊಹಮ್ಮದ್ ಸಿರಾಜ್.
ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಬ್ಯಾಟಿಂಗ್.
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ ಇನಿಂಗ್ಸ್ ಅಂತ್ಯ
- 20 ಓವರ್ಗಳಲ್ಲಿ 168 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
- 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಸನ್‌ರೈಸರ್ಸ್ ಹೈದರಾಬಾದ್.
- ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 20 ಓವರ್ಗಳಲ್ಲಿ 169 ರನ್ಗಳ ಗುರಿ.
- ಈ ಪಂದ್ಯದಲ್ಲಿ ಗಲ್ಲುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
-
GT vs SRH IPL 2026 Live Score: ಬರೋಬ್ಬರಿ 18 ರನ್ಗಳು
ಈಶಾನ್ ಮಲಿಂಗಾ ಎಸೆದ 19ನೇ ಓವರ್ನಲ್ಲಿ 18 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
ಅದರಲ್ಲೂ ಕೊನೆಯ ಎಸೆತದಲ್ಲಿ ಅತ್ಯದ್ಭುತ ಸಿಕ್ಸ್ ಸಿಡಿಸಿದ ವಾಷಿಂಗ್ಟನ್ ಸುಂದರ್.
19 ಈವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೇಸನ್ ಹೋಲ್ಡರ್ ಬ್ಯಾಟಿಂಗ್.
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ 4ನೇ ವಿಕೆಟ್ ಪತನ
ಸಾಕಿಬ್ ಹುಸೇನ್ ಎಸೆದ 17ನೇ ಓವರ್ನ 2ನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಸಾಯಿ ಸುದರ್ಶನ್,
44 ಎಸೆತಗಳಲ್ಲಿ 61 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಸಾಯಿ ಸುದರ್ಶನ್.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಜೇಸನ್ ಹೋಲ್ಡರ್ ಬ್ಯಾಟಿಂಗ್.
17 ಓವರ್ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 133 ರನ್ಗಳು.
-
GT vs SRH IPL 2026 Live Score: 15 ಓವರ್ಗಳ ಮುಕ್ತಾಯ
15 ಓವರ್ಗಳಲ್ಲಿ 114 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್
3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಸನ್‌ರೈಸರ್ಸ್ ಹೈದರಾಬಾದ್.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.
35 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟ ಪೂರೈಸಿದ ವಾಷಿಂಗ್ಟನ್-ಸಾಯಿ.
ಕೊನೆಯ 5 ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿ ಜಿಟಿ ಪಡೆ.
-
GT vs SRH IPL 2026 Live Score: ಅರ್ಧಶತಕ ಪೂರೈಸಿದ ಸಾಯಿ
ಶಿವಾಂಗ್ ಕುಮಾರ್ ಎಸೆದ 14ನೇ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಸಾಯಿ ಸುದರ್ಶನ್.
ಈ ಫೋರ್ನೊಂದಿಗೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್.
14 ಓವರ್ಗಳ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ಸ್ಕೋರ್ 107 ರನ್ಗಳು.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್.
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ 3ನೇ ವಿಕೆಟ್ ಪತನ
ಪ್ಯಾಟ್ ಕಮಿನ್ಸ್ ಎಸೆದ 10ನೇ ಓವರ್ನಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ನಿಶಾಂತ್ ಸಿಂಧು.
14 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ
-
GT vs SRH IPL 2026 Live Score: ಅರ್ಧಶತಕ ಪೂರೈಸಿದ ಜಿಟಿ
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಗುಜರಾತ್ ಟೈಟಾನ್ಸ್.
ಎಂಟು ಓವರ್ಗಳ ಮುಕ್ತಾಯದ ವೇಳೆ ಗುಜರಾಜ್ ಟೈಟಾನ್ಸ್ ಸ್ಕೋರ್ 56/2
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ನಿಶಾಂತ್ ಸಿಂಧು ಬ್ಯಾಟಿಂಗ್.
ಔಟಾದ ಬ್ಯಾಟರ್ಗಳು:
- ಶುಭ್ಮನ್ ಗಿಲ್ (5)
- ಜೋಸ್ ಬಟ್ಲರ್ (7)
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ 2ನೇ ವಿಕೆಟ್ ಪತನ
ಪ್ರಫುಲ್ ಹಿಂಗೆ ಎಸೆದ 6ನೇ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಜೋಸ್ ಬಟ್ಲರ್.
11 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಜೋಸ್ ಬಟ್ಲರ್.
ಕ್ರೀಸ್ನಲ್ಲಿ ನಿಶಾಂತ್ ಸಿಂಧು ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.
ಪವರ್ಪ್ಲೇ ಮುಕ್ತಾಯದ ವೇಳೆಗೆ ಗುಜರಾತ್ ಟೈಟಾನ್ಸ್ ತಂಡದ ಸ್ಕೋರ್ 34/2
-
GT vs SRH IPL 2026 Live Score: ನಿಧಾನಗತಿಯ ಬ್ಯಾಟಿಂಗ್
ಐದನೇ ಓವರ್ನಲ್ಲಿ ಗುಜರಾತ್ ಟೈಟಾನ್ಸ್ ಬ್ಯಾಟರ್ಗಳು ಕಲೆಹಾಕಿದ್ದು ಕೇವಲ 5 ರನ್ಗಳು ಮಾತ್ರ.
ರನ್ಗಳಿಸಲು ಪರದಾಡುತ್ತಿರುವ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್.
5 ಓವರ್ಗಳಲ್ಲಿ ಕೇವಲ 26 ರನ್ಗಳಿಸಿರುವ ಗುಜರಾತ್ ಟೈಟಾನ್ಸ್.
ಈಗಾಗಲೇ ಔಟಾಗಿ ಡಗೌಟ್ ಸೇರಿರುವ ಶುಭ್ಮನ್ ಗಿಲ್.
-
GT vs SRH IPL 2026 Live Score: ಕೇವಲ 4 ರನ್
4ನೇ ಓವರ್ನಲ್ಲಿ ಕೇವಲ 4 ರನ್ ಮಾತ್ರ ನೀಡಿದ ಪ್ಯಾಟ್ ಕಮಿನ್ಸ್.
ಗುಜರಾತ್ ಟೈಟಾನ್ಸ್ ತಂಡದಿಂದ ನಿಧಾನಗತಿಯ ಆರಂಭ.
4 ಓವರ್ಗಳಲ್ಲಿ ಕೇವಲ 21 ರನ್ ಮಾತ್ರ ಕಲೆಹಾಕಿದ ಗುಜರಾತ್ ಟೈಟಾನ್ಸ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಸಾಯಿ ಸುದರ್ಶನ್ ಬ್ಯಾಟಿಂಗ್.
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ ಮೊದಲ ವಿಕೆಟ್ ಪತನ
ಪ್ರಫುಲ್ ಹಿಂಗೆ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ, ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಶುಭ್ಮನ್ ಗಿಲ್.
7 ಎಸೆತಗಳಲ್ಲಿ 5 ರನ್ ಗಳಿಸಿದ ವಿಕೆಟ್ ಒಪ್ಪಿಸಿದ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
3 ಓವರ್ ಮುಕ್ತಾಯಕ್ಕೆ ಗುಜರಾತ್ ಟೈಟಾನ್ಸ್ ಸ್ಕೋರ್ 17 ರನ್ಗಳು.
-
GT vs SRH IPL 2026 Live Score: ಒಂದೇ ಓವರ್ನಲ್ಲಿ 2 ಫೋರ್
ನಿತೀಶ್ ಕುಮಾರ್ ರೆಡ್ಡಿ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಸಾಯಿ ಸುದರ್ಶನ್.
5ನೇ ಎಸೆತದಲ್ಲಿ ಡೀಪ್ ಸ್ಕ್ವೇರ್ನತ್ತ ಶುಭ್ಮನ್ ಗಿಲ್ ಬ್ಯಾಟ್ನಿಂದ ಆಕರ್ಷಕ ಫೋರ್.
2ನೇ ಓವರ್ನಲ್ಲಿ 10 ರನ್ ಕಲೆಹಾಕಿದ ಗುಜರಾತ್ ಟೈಟಾನ್ಸ್.
-
GT vs SRH IPL 2026 Live Score: ಮೊದಲ ಓವರ್
ಮೊದಲ ಓವರ್ನಲ್ಲಿ ಕೇವಲ 5 ರನ್ ಮಾತ್ರ ನೀಡಿದ ಪ್ಯಾಟ್ ಕಮಿನ್ಸ್.
ಮೊದಲ 6 ಎಸೆತಗಳಲ್ಲಿ ಒಂದೇ ಒಂದು ಫೋರ್ ನೀಡದ ಕಮಿನ್ಸ್.
ಕ್ರೀಸ್ನಲ್ಲಿ ಸಾಯಿ ಸುದರ್ಶನ್ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್.
-
GT vs SRH IPL 2026 Live Score: ಗುಜರಾತ್ ಟೈಟಾನ್ಸ್ ಇನಿಂಗ್ಸ್ ಶುರು
- ಗುಜರಾತ್ ಟೈಟಾನ್ಸ್ ಆರಂಭಿಕರು: ಶುಭ್ಮನ್ ಗಿಲ್, ಸಾಯಿ ಸುದರ್ಶನ್.
- ಸನ್‌ರೈಸರ್ಸ್ ಹೈದರಾಬಾದ್ ಮೊದಲ ಓವರ್: ಪ್ಯಾಟ್ ಕಮಿನ್ಸ್.
- ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ.
- ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್.
-
GT vs SRH IPL 2026 Live Score: ಪ್ಲೇಯಿಂಗ್ ಇಲೆವೆನ್
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಕ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ನಿಶಾಂತ್ ಸಿಂಧು, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಷದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್.
-
GT vs SRH IPL 2026 Live Score: ಟಾಸ್ ವಿಡಿಯೋ
🚨 Toss 🚨@SunRisers have won the toss and elected to bowl first against @gujarat_titans in Match 5️⃣6️⃣
Updates ▶️ https://t.co/o2tKKCeEaH#TATAIPL | #KhelBindaas | #GTvSRH pic.twitter.com/ZhAfnLdsMH
— IndianPremierLeague (@IPL) May 12, 2026
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟ್ ಮಾಡಲಿದೆ.
-
GT vs SRH IPL 2026 Live Score: ಟಾಸ್ ಗೆದ್ದ ಎಸ್ಆರ್ಹೆಚ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
GT vs SRH IPL 2026 Live Score: ಗೆದ್ದವರಿಗೆ ಅಗ್ರಸ್ಥಾನ
ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡವು 14 ಪಾಯಿಂಟ್ಸ್ನೊಂದಿಗೆ ತೃತೀಯ ಸ್ಥಾನದಲ್ಲಿದೆ.
ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ 16 ಅಂಕಗಳನ್ನು ಪಡೆಯುವ ಮೂಲಕ ಆರ್ಸಿಬಿ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.
-
GT vs SRH IPL 2026 Live Score: ಹೆಡ್ ಟು ಹೆಡ್ ದಾಖಲೆ
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಈವರೆಗೆ ಮುಖಾಮುಖಿಯಾಗಿರುವುದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ಈ 7 ಮ್ಯಾಚ್ಗಳಲ್ಲಿ 5 ಪಂದ್ಯಗಳನ್ನು ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿದೆ. ಇನ್ನು ಒಂದು ಪಂದ್ಯದಲ್ಲಿ ಎಸ್ಆರ್ಹೆಚ್ ಜಯ ಸಾಧಿಸಿದೆ. ಮತ್ತೊಂದು ಪಂದ್ಯವು ಕಾರಣಾಂತರದಿಂದ ರದ್ದಾಗಿತ್ತು.
-
GT vs SRH IPL 2026 Live Score: ಟೈಟಾನ್ಸ್ vs ಸನ್‌ರೈಸರ್ಸ್
- ಗುಜರಾತ್ ಟೈಟಾನ್ಸ್ vs ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ
- ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮ್ಯಾಚ್.
- 7.30 ರಿಂದ ಶುರುವಾಗಲಿರುವ ಜಿಟಿ ಮತ್ತು ಎಸ್ಆರ್ಹೆಚ್ ನಡುವಣ ಪಂದ್ಯ.
- ಈ ಪಂದ್ಯದ ಟಾಸ್ ಪ್ರಕ್ರಿಯೆ 7 ಗಂಟೆಗೆ.
Published On - May 12,2026 6:01 PM




