Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ

| Updated By: ಝಾಹಿರ್ ಯೂಸುಫ್

Updated on: Nov 24, 2021 | 3:53 PM

India vs New zealand : ಆಟಗಾರರು ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಅವರು ಸಸ್ಯಾಹಾರಿಯಾಗಿರಲು ಬಯಸಿದರೆ, ಅದು ಅವರ ಆಯ್ಕೆಯಾಗಿದೆ. ಹಾಗೆಯೇ ಅವರು ಮಾಂಸಾಹಾರಿಯಾಗಲು ಬಯಸಿದರೆ ಅದು ಕೂಡ ಅವರ ಆಯ್ಕೆಯಾಗಿದೆ.

Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ
Team India
Follow us on

ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೂ (India vs New Zealand) ಮುನ್ನ ವಿವಾದಕ್ಕೆ ಕಾರಣವಾಗಿದ್ದ ಹಲಾಲ್ (Halal) ಮಾಂಸಹಾರದ ಬಗ್ಗೆ ಕೊನೆಗೂ ಬಿಸಿಸಿಐ (BCCI) ಮೌನ ಮುರಿದಿದೆ. ಟೀಮ್ ಇಂಡಿಯಾ ಆಟಗಾರರ ಆಹಾರದ ಮೆನುವನ್ನು ನಿರ್ಧರಿಸುವಲ್ಲಿ ಭಾರತೀಯ ಕ್ರಿಕೆಟ್​ ಮಂಡಳಿಗೆ ಯಾವುದೇ ಪಾತ್ರವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಟಗಾರರು ತಮಗೆ ಬೇಕಾದ ಆಹಾರವನ್ನು ಸೇವಿಸುವ ಆಯ್ಕೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಕಾನ್ಪುರ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧಪಡಿಸಲಾದ ಡಯಟ್ ಚಾರ್ಟ್‌ ವಿಷಯವು ಭಾರೀ ಚರ್ಚೆಗೆ ಕಾರಣವಾಗಿತ್ತು.

ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧತೆಯಲ್ಲಿದ್ದ ಟೀಮ್ ಇಂಡಿಯಾದ ಆಹಾರ ಮೆನುವಿನ ಫೋಟೋವೊಂದು ವೈರಲ್ ಆಗಿತ್ತು. ಈ ಮೆನುವಿನಲ್ಲಿ ಇಡೀ ದಿನದ ಕೌಂಟರ್, ಕ್ರೀಡಾಂಗಣದಲ್ಲಿ ಮಿನಿ ಉಪಹಾರ, ಮಧ್ಯಾಹ್ನದ ಊಟ, ಟೀ ಟೈಮ್ ಸ್ನ್ಯಾಕ್ ಮತ್ತು ರಾತ್ರಿ ಊಟವನ್ನು ಒಳಗೊಂಡಿತ್ತು. ಈ ಆಹಾರದ ಮೆನುವಿನಿಂದ ಹಂದಿ ಮತ್ತು ಗೋಮಾಂಸವನ್ನು ಹೊರಗಿಡಲಾಗಿದೆ. ಅಲ್ಲದೆ ಮಾಂಸಾಹಾರಿ ಖಾದ್ಯಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆಟಗಾರರ ಆಹಾರದ ಆಯ್ಕೆಯನ್ನು ನಿರ್ಧರಿಸಿರುವ ಬಗ್ಗೆ ಅನೇಕರು ಬಿಸಿಸಿಐಯನ್ನು ಟೀಕಿಸಿದರು. ಅಷ್ಟೇ ಅಲ್ಲದೆ ಹಲಾಲ್ ಮಾಂಸವನ್ನು ನೀಡುತ್ತಿರುವ ಕೆಲವು ಅಭಿಮಾನಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಅರುಣ್ ಧುಮಾಲ್, ಈ ಆಹಾರ ಬಗ್ಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ. ಅಥವಾ ಅದನ್ನು ಕಾರ್ಯಗತಗೊಳಿಸುವುದಿಲ್ಲ. ಈ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ತಿಳಿದಿರುವಂತೆ, ನಾವು ಆಹಾರ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ. ಆಹಾರಕ್ಕೆ ಸಂಬಂಧಿಸಿದಂತೆ, ಇದು ಆಟಗಾರರ ವೈಯಕ್ತಿಕ ಆಯ್ಕೆಯಾಗಿದೆ, ಅದರಲ್ಲಿ ಬಿಸಿಸಿಐ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.

ಈ ‘ಹಲಾಲ್’ ವಿಷಯವು ಆಟಗಾರನ ಪ್ರತಿಕ್ರಿಯೆಯ ಮೇಲೆ ಯಾವುದೋ ಸಮಯದಲ್ಲಿ ಸಂಭವಿಸಿರಬೇಕು. ಉದಾಹರಣೆಗೆ, ಒಬ್ಬ ಆಟಗಾರನು ತಾನು ಗೋಮಾಂಸ ತಿನ್ನುವುದಿಲ್ಲ ಎಂದು ಹೇಳಿದರೆ, ವಿದೇಶಿ ತಂಡ ಬಂದರೆ ಆ ಆಹಾರವನ್ನು ಮಿಶ್ರಣ ಮಾಡಬಾರದು. ಈ ಹಲಾಲ್ ವಿಷಯವನ್ನು ಬಿಸಿಸಿಐ ಗಮನಕ್ಕೆ ತಂದಿರಲಿಲ್ಲ. ಬಿಸಿಸಿಐ ತನ್ನ ಯಾವುದೇ ಆಟಗಾರರಿಗೆ ಏನು ತಿನ್ನಬೇಕು ಮತ್ತು ಏನು ಮಾಡಬಾರದು ಎಂದು ಸಲಹೆ ನೀಡುವುದಿಲ್ಲ. ಆಟಗಾರರು ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಅವರು ಸಸ್ಯಾಹಾರಿಯಾಗಿರಲು ಬಯಸಿದರೆ, ಅದು ಅವರ ಆಯ್ಕೆಯಾಗಿದೆ. ಹಾಗೆಯೇ ಅವರು ಮಾಂಸಾಹಾರಿಯಾಗಲು ಬಯಸಿದರೆ ಅದು ಕೂಡ ಅವರ ಆಯ್ಕೆಯಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು?

ಇದನ್ನೂ ಓದಿ: IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ​ ಜೆರ್ಸಿ ಫೋಟೋ ವೈರಲ್

(‘Halal’ meat diet for Team India: BCCI finally breaks silence after outrage)