IPL 2022: ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಜೆರ್ಸಿ ಫೋಟೋ ವೈರಲ್
IPL 2022 CSK: ಮುಂದಿನ ಸೀಸನ್ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಹೀಗಾಗಿ ಮೆಗಾ ಹರಾಜು ಕೂಡ ನಡೆಯಲಿದೆ. ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಐಪಿಎಲ್ ಸೀಸನ್ 15 ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ.
Updated on: Nov 24, 2021 | 3:10 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಬಿಸಿಸಿಐ ಐಪಿಎಲ್ ಆಯೋಜನೆಗೆ ಬೇಕಾದ ತಯಾರಿಗಳನ್ನು ಆರಂಭಿಸಿದೆ. ಅದರಂತೆ ಏಪ್ರಿಲ್ 2 ರಿಂದ ಐಪಿಎಲ್ ಸೀಸನ್ 15ಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಫ್ರಾಂಚೈಸಿಗಳು ಕೂಡ ಮುಂದಿನ ಸೀಸನ್ ಐಪಿಎಲ್ಗಾಗಿ ಹೊಸ ಡೀಲ್ಗಳನ್ನು ಕುದಿರಿಸಿಕೊಳ್ಳುತ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟಿವಿಎಸ್ ಕಂಪೆನಿ ಜೊತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಟಿವಿಎಸ್ ಯುರೋಗ್ರಿಪ್ ಮುಂದಿನ ಮೂರು ವರ್ಷಗಳವರೆಗೆ (2022-2024) ಸಿಎಸ್‌ಕೆ ತಂಡದ ಪ್ರಧಾನ ಪ್ರಾಯೋಜಕರಾಗಲಿದ್ದಾರೆ.

ಹೀಗಾಗಿ ಕಳೆದ ಸೀಸನ್ನಲ್ಲಿ ಸಿಎಸ್‌ಕೆ ಜೆರ್ಸಿ ಮುಂಭಾಗದಲ್ಲಿದ್ದ ಮಿಂತ್ರಾ ಜಾಹೀರಾತಿನ ಬದಲಿಗೆ ಟಿವಿಎಸ್ ಯುರೋಗ್ರಿಪ್ ಲೋಗೋ ಮತ್ತು ಹೆಸರು ಕಾಣಿಸಿಕೊಳ್ಳಲಿದೆ.

ಈ ಒಪ್ಪಂದದ ಬೆನ್ನಲ್ಲೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಎಸ್‌ಕೆ ನೂತನ ಜೆರ್ಸಿ ಎಂಬ ಟ್ಯಾಗ್ನಲ್ಲಿ ಯುರೋಗ್ರಿಪ್ ಜಾಹೀರಾತು ಹೊಂದಿರುವ ಸಮವಸ್ತ್ರದ ಫೋಟೋಗಳು ವೈರಲ್ ಆಗಿದೆ.

ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ನೂತನ ಅಧಿಕೃತ ಜೆರ್ಸಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಪ್ರಸ್ತುತ ಇರುವ ಜೆರ್ಸಿಯ ವಿನ್ಯಾಸದಲ್ಲೇ ಹೊಸ ಜೆರ್ಸಿ ಕೂಡ ಇರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮುಂದಿನ ಸೀಸನ್ ಐಪಿಎಲ್ಗಾಗಿ ಸಿಎಸ್‌ಕೆ ತಂಡವು ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ಮೊದಲ ಒಪ್ಪಂದವನ್ನು ಕೂಡ ಕುದಿರಿಸಿಕೊಂಡಿದೆ.

ಇನ್ನು ಮುಂದಿನ ಸೀಸನ್ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಹೀಗಾಗಿ ಮೆಗಾ ಹರಾಜು ಕೂಡ ನಡೆಯಲಿದೆ. ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಐಪಿಎಲ್ ಸೀಸನ್ 15 ಮೆಗಾ ಹರಾಜು ನಡೆಯುವ ಸಾಧ್ಯತೆಯಿದೆ.
