Team India: ನೋ ಬೀಫ್, ಪೋರ್ಕ್​: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸಾಹಾರ

ಇಸ್ಲಾಂ ಧರ್ಮದ ಆಹಾರ ಕ್ರಮವನ್ನು ಸಾಮಾನ್ಯವಾಗಿ ಹಲಾಲ್ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಇಲ್ಲಿ ಹಲಾಲ್ ಎಂದರೆ ಪರಿಶುದ್ಧತೆ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇಸ್ಲಾಂನಲ್ಲಿ ಎಲ್ಲಾ ಆಹಾರವನ್ನು ಸೇವಿಸಲು ಅವಕಾಶವಿಲ್ಲ.

Team India: ನೋ ಬೀಫ್, ಪೋರ್ಕ್​: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಮಾಂಸಾಹಾರ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 23, 2021 | 4:43 PM

ನ್ಯೂಜಿಲೆಂಡ್ ವಿರುದ್ಧದ (India vs New zealand) ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈಗ ಉಭಯ ತಂಡಗಳು ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ಬಿಸಿಸಿಐ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ. ಕಾನ್ಪುರ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧಪಡಿಸಲಾದ ಡಯಟ್ ಚಾರ್ಟ್‌ ವಿಷಯದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ (BCCI) ಈಗ ಚರ್ಚೆಗೀಡಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ಗುರುವಾರದಿಂದ (ನವೆಂಬರ್ 25) ಆರಂಭವಾಗಲಿದ್ದು, ಇದಕ್ಕಾಗಿ ಎರಡೂ ತಂಡಗಳು ಕಾನ್ಪುರ ತಲುಪಿವೆ. ಈ ಆಟಗಾರರು ಹೋಟೆಲ್ ಲ್ಯಾಂಡ್‌ಮಾರ್ಕ್ ಟವರ್‌ನಲ್ಲಿರುವ ಬಯೋ-ಬಬಲ್‌ನಲ್ಲಿ ಉಳಿದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಆಟಗಾರರಿಗಾಗಿ ಆಹಾರ ಮೆನುವನ್ನು ಸಹ ಬಿಡುಗಡೆ ಮಾಡಲಾಗಿದೆ. ಇದು ಇಡೀ ದಿನದ ಕೌಂಟರ್, ಕ್ರೀಡಾಂಗಣದಲ್ಲಿ ಮಿನಿ ಉಪಹಾರ, ಮಧ್ಯಾಹ್ನದ ಊಟ, ಟೀ ಟೈಮ್ ಸ್ನ್ಯಾಕ್ ಮತ್ತು ರಾತ್ರಿ ಊಟವನ್ನು ಒಳಗೊಂಡಿದೆ. ಈ ಆಹಾರದ ಮೆನುವಿನಿಂದ ಹಂದಿ ಮತ್ತು ಗೋಮಾಂಸವನ್ನು ಹೊರಗಿಡಲಾಗಿದೆ. ಅಲ್ಲದೆ ಮಾಂಸಾಹಾರಿ ಖಾದ್ಯಗಳಲ್ಲಿ ಹಲಾಲ್ ಮಾಂಸವನ್ನು ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

ಟೀಮ್ ಇಂಡಿಯಾ ಮೆನುವಿನ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಆಟಗಾರರಿಗೆ ಹಲಾಲ್ ಮಾಂಸವನ್ನು ಏಕೆ ನೀಡಲಾಗುತ್ತಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಮುಸ್ಲಿಮರಿಗೆ ಹಲಾಲ್ ಮಾಂಸ ಕಡ್ಡಾಯ ಎಂಬ ಪ್ರತೀತಿ ಇದೆ. ಆದರೆ ತಂಡದಲ್ಲಿ ಇತರೆ ಧರ್ಮದ ಆಟಗಾರರಿದ್ದರೂ, ಹಲಾಲ್ ಮಾಂಸವನ್ನು ಮಾತ್ರ ಏಕೆ ಸೇರ್ಪಡೆಗೊಳಿಸಿದೆ. ಯಾವುದೇ ಒಂದು ಧರ್ಮದ ನಂಬಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾಗ್ಯೂ ಬಿಸಿಸಿಐ ಈವರೆಗೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಹಲಾಲ್ ಮಾಂಸ ಅಥವಾ ಹಲಾಲ್ ಕಟ್ ಎಂದರೇನು? ಇಸ್ಲಾಂ ಧರ್ಮದ ಆಹಾರ ಕ್ರಮವನ್ನು ಸಾಮಾನ್ಯವಾಗಿ ಹಲಾಲ್ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಇಲ್ಲಿ ಹಲಾಲ್ ಎಂದರೆ ಪರಿಶುದ್ಧತೆ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇಸ್ಲಾಂನಲ್ಲಿ ಎಲ್ಲಾ ಆಹಾರವನ್ನು ಸೇವಿಸಲು ಅವಕಾಶವಿಲ್ಲ. ಉದಾಹರಣೆಗೆ ಇಸ್ಲಾಂ ಪ್ರಕಾರ ಹಂದಿ, ಹುಲಿ, ಸಿಂಹ ಸೇರಿದಂತೆ ಕೆಲ ಮಾಂಸಗಳ ಆಹಾರ ನಿಷಿದ್ಧ. ಹಾಗೆಯೇ ಕುರಿ, ಕೋಳಿ, ಒಂಟೆ, ದನದ ಮಾಂಸವನ್ನು ಹಲಾಲ್ ಮಾಡಿದ ಬಳಿಕವಷ್ಟೇ ಸೇವಿಸಬಹುದು. ಅಂದರೆ ಇಲ್ಲಿ ಹಲಾಲ್ ಮಾಡುವುದು ಎಂದರೆ ಪ್ರಾಣಿಯನ್ನು ವಧಿಸುವ ವಿಧಾನ.

ಮುಸ್ಲಿಮರು ತಿನ್ನುವ ಮಾಂಸಾಹಾರವನ್ನು ಹಲಾಲ್ ಮಾಡುವುದು ಕಡ್ಡಾಯ. ಇದಕ್ಕಾಗಿ ಪ್ರಾಣಿಯನ್ನು ಕೊಲ್ಲಲು ನಿರ್ದಿಷ್ಟ ಕ್ರಮಗಳಿವೆ. ಅದರಂತೆ ಒಂದು ಪ್ರಾಣಿಯನ್ನು ವಧಿಸುವ ಮುನ್ನ ಅದಕ್ಕೆ ಕುಡಿಯಲು ನೀರು ನೀಡಿ, ಬಳಿಕ ಅದರ ಕತ್ತಿನ ನರವನ್ನು ಕತ್ತರಿಸಿ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು ಎಂಬ ನಿಯಮವಿದೆ. ಹೀಗೆ ವಧಿಸುವಾಗ ಮುಸ್ಲಿಮರು ಪವಿತ್ರ ಸ್ಥಳ ಮೆಕ್ಕಾದತ್ತ ಮುಖ ಮಾಡುತ್ತಾರೆ. ಅಷ್ಟೇ ಅಲ್ಲದೆ ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು ಎಂಬ ನಿಯಮವಿದೆ. ಹೀಗೆ ವಧಿಸಿದ ಮಾಂಸವನ್ನು ಮುಸ್ಲಿಮರು ಹಲಾಲ್ ಮಾಂಸ ಎನ್ನುತ್ತಾರೆ. ಇದರ ಹೊರತಾಗಿ ಮೊದಲೇ ಸತ್ತ ಪ್ರಾಣಿಯ ಮಾಂಸ, ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯ ಮಾಂಸ ಹಾಗೂ ಹಲಾಲ್ ಮಾಡದ ಮಾಂಸ ಸೇವಿಸುವುದು ಮುಸ್ಲಿಮರಿಗೆ ನಿಷಿದ್ಧ. ಹೀಗೆ ಹಲಾಲ್ ಮಾಡಿದ ಆಹಾರಗಳ ಮಾಂಸಾಹಾರವನ್ನು ನೀಡುವ ಹೊಟೇಲ್ ಅಥವಾ ರೆಸ್ಟೊರೆಂಟ್​ಗಳಲ್ಲಿ ಮಾಂಸವನ್ನು ಹಲಾಲ್ ಮಾಡಲಾಗಿದೆ ಎಂದು ತಿಳಿಸಲು ಹಲಾಲ್ ಕಟ್ ಅಥವಾ ಹಲಾಲ್ ಎಂದು ಬೋರ್ಡ್ ಹಾಕಲಾಗಿರುತ್ತದೆ.

ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್

ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ನಡುವಣ ವ್ಯತ್ಯಾಸ ತಿಳಿಸಿದ ಗೌತಮ್ ಗಂಭೀರ್

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು