ಟಿ20 ವಿಶ್ವಕಪ್​ನಲ್ಲಿ ಕುಲ್ಚಾ ಜೋಡಿಗೆ ಚಾನ್ಸ್ ನೀಡಿ ಎಂದ ಭಜ್ಜಿ

| Updated By: ಝಾಹಿರ್ ಯೂಸುಫ್

Updated on: May 08, 2022 | 6:32 PM

Harbhajan Singh: ಚಹಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹ್ಯಾಟ್ರಿಕ್ ಮೂಲಕ 5 ವಿಕೆಟ್ ಪಡೆದು ಮಿಂಚಿದ್ದರು. ಮತ್ತೊಂದೆಡೆ, ಕುಲದೀಪ್ ಯಾದವ್ ಹೊಸ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಕುಲ್ಚಾ ಜೋಡಿಗೆ ಚಾನ್ಸ್ ನೀಡಿ ಎಂದ ಭಜ್ಜಿ
Kuldeep Yadav, Yuzvendra Chahal
Follow us on

T20 ವಿಶ್ವಕಪ್​ 2021 ರಲ್ಲಿ ಟೀಮ್ ಇಂಡಿಯಾ ಪರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೀಮಿತ ಓವರ್‌ಗಳ ತಂಡಕ್ಕೆ ಮರಳಿದ್ದರು. ಅಲ್ಲದೆ ಅಶ್ವಿನ್ ಅವರು ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹಾರ್ ಅವರೊಂದಿಗೆ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ವಿಶ್ವಕಪ್​ಗಾಗಿ ಟೀಮ್ ಇಂಡಿಯಾ ಸಜ್ಜಾಗಬೇಕಿದೆ. ಆದರೆ ಈ ಬಾರಿ ಸ್ಪಿನ್ನರ್​ಗಳಾಗಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಯಲ್ಲಿ ಕೇಳಿ ಬರುತ್ತಿರುವ ಹೆಸರುಗಳೆಂದರೆ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್. ಐಪಿಎಲ್ 2022 ರಲ್ಲಿ ಈ ಇಬ್ಬರು ಸ್ಪಿನ್ನರ್‌ಗಳಿಗೆ ಉತ್ತಮ ಬೌಲಿಂಗ್ ಮಾಡ್ತಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಚಹಲ್ 22 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಕುಲದೀಪ್ ಯಾದವ್ 18 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಚಹಲ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹ್ಯಾಟ್ರಿಕ್ ಮೂಲಕ 5 ವಿಕೆಟ್ ಪಡೆದು ಮಿಂಚಿದ್ದರು. ಮತ್ತೊಂದೆಡೆ, ಕುಲದೀಪ್ ಯಾದವ್ ಹೊಸ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಅವರನ್ನು ಈ ವರ್ಷದ ಟಿ 20 ವಿಶ್ವಕಪ್‌ಗೆ ತಂಡಕ್ಕೆ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.

“ಭಾರತ ಪರ ಉತ್ತಮವಾಗಿ ಆಡುತ್ತಿದ್ದ ಜೋಡಿಯನ್ನು ಆಯ್ಕೆಗಾರರು ಯಾಕಾಗಿ ಕೈಬಿಟ್ಟರು ಎಂದು ನನಗೆ ತಿಳಿದಿಲ್ಲ. ನೀವು ‘ಕುಲ್-ಚಾ’ ಜೋಡಿಯನ್ನು (ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್) ಮತ್ತೆ ತಂಡಕ್ಕೆ ಕರೆತರಬೇಕು. ಏಕೆಂದರೆ ಅವರು ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಒಟ್ಟಿಗೆ ಆಡಿದಾಗಲೆಲ್ಲಾ ಅವರು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆದಿದ್ದಾರೆ. ಅದು T20, ODI ಅಥವಾ ಯಾವುದೇ ಇತರ ಸ್ವರೂಪವಾಗಿರಲಿ. ಅವರು ಒಟ್ಟಿಗೆ ಆಡಿದಾಗ ಯಾವಾಗಲೂ ಯಶಸ್ವಿಯಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್​ ತಂಡದಲ್ಲಿ ಕುಲ್ಚಾ ಜೋಡಿಗೆ ಚಾನ್ಸ್ ಸಿಗಬೇಕು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ನಲ್ಲಿ ಚಹಲ್ ಮಿಂಚಿಂಗ್:
ಐಪಿಎಲ್ 15 ನೇ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದ ಪರ ಯುಜ್ವೇಂದ್ರ ಚಹಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೆಗಾ ಹರಾಜಿನ ಮೊದಲು ಆರ್‌ಸಿಬಿ ತಂಡವು ಅವರನ್ನು ಉಳಿಸಿಕೊಳ್ಳಲಿಲ್ಲ. ಆದರೆ ರಾಜಸ್ಥಾನ್ ರಾಯಲ್ಸ್ ಈ ಲೆಗ್ ಸ್ಪಿನ್ನರ್ ಅನ್ನು 6.50 ಕೋಟಿಗೆ ಹರಾಜಿನಲ್ಲಿ ಖರೀದಿಸಿತು. ಇದೀಗ ಚಹಲ್ ಆರ್​ಆರ್​ ಪರ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ಕುಲದೀಪ್ ಯಾದವ್ ಕೂಡ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಈಗಾಗಲೇ ಒಟ್ಟು 18 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಚಾನ್ಸ್ ಸಿಗುವ ನಿರೀಕ್ಷೆಯಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.