ಭಾರತದಲ್ಲಿ ಕ್ರೀಡೆಯ ಅತಿದೊಡ್ಡ ಹಬ್ಬವೆಂದು ಪರಿಗಣಿಸಲಾದ ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಕ್ರಿಕೆಟ್ ಲೀಗ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 26ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಕೊಂಡಿದೆ. ಇದರ ಅಂತಿಮ ಪಂದ್ಯ ಮೇ 29 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಸಾಕಷ್ಟು ಹೊಸತನಗಳನ್ನು ಕಾನಲಿದ್ದು, ಈ ವರ್ಷ ಎರಡು ಹೊಸ ತಂಡಗಳು ಐಪಿಎಲ್ನಲ್ಲಿ ಆಡುವುದನ್ನು ಕಾಣಬಹುದು.
ಅದಾಗ್ಯೂ, ಈ ಮಧ್ಯೆ ಐಪಿಎಲ್ 2022 ರ ಹೊಸ ಪ್ರೋಮೋ ವೀಡಿಯೊ ಇದೀಗ ಹೊರಹೊಮ್ಮಿದೆ, ಇದರಲ್ಲಿ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದ ಮೊದಲ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಕೂ ಅಪ್ಲಿಕೇಶನ್ನಲ್ಲಿನ ವೀಡಿಯೊ ಕಡಿಮೆ ಸಮಯದಲ್ಲೇ ಸಾಕಷ್ಟು ಸದ್ದು ಮಾಡುತ್ತಿದೆ. #pandyapromo ಮತ್ತು #iplpromo ಎಂಬ ಹ್ಯಾಶ್ಟ್ಯಾಗ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯರನ್ನು ಬಾಂಬ್ ತಜ್ಞರಾಗಿ ತೋರಿಸಲಾಗಿದೆ. ವಾಸ್ತವವಾಗಿ, ಈ ವೀಡಿಯೊ ಐಪಿಎಲ್ನ ಪ್ರೋಮೋ ಆಗಿದ್ದು, ಇದರಲ್ಲಿ ಎರಡು ಹೊಸ ತಂಡಗಳನ್ನು ಸೇರಿಸಿದ ನಂತರ ಈಗ ಅದು 10 ತಂಡಗಳಾಗಿ ಮಾರ್ಪಟ್ಟಿದೆ. ಈ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ, ಐಪಿಎಲ್ನ ಹೊಸ ಋತುವಿನಲ್ಲಿ ಏನು ಸ್ಫೋಟಗೊಳ್ಳಲಿದೆ ಎಂಬುದನ್ನು ಪಾಂಡ್ಯ ವಿವರಿಸಿದ್ದಾರೆ. ಸ್ಥಳೀಯ ಸಾಮಾಜಿಕ ಜಾಲತಾಣ ಕೂ ಆಪ್ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ಹೇಳಲಾದ ಮುಖ್ಯ ವಿಷಯವೆಂದರೆ, ಈಗ ಎಂಟು ತಂಡಗಳ ಬದಲಿಗೆ 10 ತಂಡಗಳನ್ನು ಸೇರಿಸಲಾಗಿದ್ದು, ಈ ಚುಟುಕು ಆಟದ ರೋಮಾಂಚನವು ತುಂಬಾ ವೇಗವಾಗಿರುತ್ತದೆ.
ಇದನ್ನೂ ಓದಿ:IND vs WI, WWC 2022: ಸ್ಮೃತಿ- ಹರ್ಮನ್ಪ್ರೀತ್ ಶತಕ! ಪಾಯಿಂಟ್ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದ ಭಾರತ