
ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿದೆ. ಈ ಖುಷಿಯಲ್ಲಿದ್ದ ಹಾರ್ದಿಕ್ಗೆ ಬಿಸಿಸಿಐ ಶಾಕ್ ನೀಡಿದೆ. ಹಾರ್ದಿಕ್ಗೆ ಮ್ಯಾಚ್ ಮುಗಿದ ಬಳಿಕ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೋಡ್ ಆಫ್ ಕಂಡಕ್ಟ್ನ ಮುರಿದ ಕಾರಣ ದಂಡ ವಿಧಿಸಲಾಗಿದೆ. ನಿಗದಿತ ಸಮಯಕ್ಕೆ ಓವರ್ ಪೂರ್ಣಗೊಳಿಸದ ಕಾರಣ ಈ ದಂಡ ಹಾಕಲಾಗಿದೆ.
20 ಓವರ್ಗಳನ್ನು ಪೂರ್ಣಗೊಳಿಸಲು ಬಿಸಿಸಿಐ ನಿಗದಿತ ಸಮಯ ನೀಡಿದೆ. ಆದರೆ, ಆ ಟೈಮ್ನಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರಿಗೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಇಷ್ಟು ಮ್ಯಾಚ್ಗಳಲ್ಲಿ ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಈ ರೀತಿ ದಂಡ ವಿಧಿಸಿಕೊಳ್ಳುತ್ತಿದ್ದಾರೆ.
‘ಪಂಜಾಬ್ ಕಿಂಗ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ತಂಡ ನಿಧಾನಗತಯಲ್ಲಿ ಬೌಲಿಂಗ್ ಮಾಡಿದೆ. ಹೀಗಾಗಿ ದೊಡ್ಡ ಮೊತ್ತದ ದಂಡ ಹಾಕಲಾಗಿದೆ’ ಎಂದು ಬಿಸಿಸಿಐ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಮತ್ತೆ ಮತ್ತೆ ಮರುಕಳಿಸಿದರೆ ಮುಂಬೈ ಇಂಡಿಯನ್ಸ್ ತಂಡ ಸಂಕಷ್ಟಕ್ಕೆ ಸಿಲುಕಬಹುದು.
ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. 193 ರನ್ಗಳ ಟಾರ್ಗೆಟ್ನ ಪಂಜಾಬ್ಗೆ ನೀಡಿತ್ತು. ಪಂಜಾಬ್ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. 77 ರನ್ಗಳಿಗೆ ಆರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಅಶುತೋಷ್ ಶರ್ಮಾ ತಂಡಕ್ಕೆ ಆಸರೆ ಆದರು. ಕೇವಲ 28 ಬೌಲ್ಗೆ 61 ರನ್ಗಳನ್ನು ಬಾರಿಸಿದರು. ಆದರೂ ವಿನ್ ಆಗೋಕೆ ಸಾಧ್ಯವಾಗಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ 9 ರನ್ಗಳ ಗೆಲುವು ಕಂಡಿತು.
ಇದನ್ನೂ ಓದಿ: ರೋಹಿತ್ ಶರ್ಮಾ ಜೊತೆ ಅಗರ್ಕರ್ ಚರ್ಚೆ: ಹಾರ್ದಿಕ್ ಪಾಂಡ್ಯಗೆ ನಡುಕ ಶುರು..!
ಮುಂಬೈ ಇಂಡಿಯನ್ಸ್ ತಂಡ ಆಡಿದ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಮೊದಲು ಹ್ಯಾಟ್ರಿಕ್ ಸೋಲು ಕಂಡಿದ್ದ ಅವರು ನಂತರ ಸತತವಾಗಿ ಎರಡು ಪಂದ್ಯ ಗೆದ್ದರು. ಚೆನ್ನೈ ಜೊತೆ ಸೋತಿದ್ದ ತಂಡ ಪಂಜಾಬ್ ಜೊತೆ ಗೆದ್ದು ಬೀಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ