ಏಷ್ಯಾಕಪ್ 2023 ರಲ್ಲಿ ಶನಿವಾರ ಭಾರತ ಹಾಗೂ ಪಾಕಿಸ್ತಾನ (India vs Pakistan) ಪಂದ್ಯವನ್ನು ಆಯೋಜಿಸಲಾಗಿತ್ತು. ಅಪರೂಪಕ್ಕೆ ಮುಖಾಮುಖಿ ಆಗುವ ಉಭಯ ತಂಡಗಳ ಪಂದ್ಯ ರಣರೋಚಕವಾಗಿರುತ್ತದೆ. ಅದರಂತೆ ಈ ಪಂದ್ಯ ಕೂಡ ಇತ್ತು. ಮಳೆಯಿಂದ ಪೂರ್ಣ ಪಂದ್ಯ ನಡೆಯದಿದ್ದರೂ ಭಾರತದ ಬ್ಯಾಟಿಂಗ್ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇಂಡೋ-ಪಾಕ್ ಆಟಗಾರರು ಬದ್ಧವೈರಿಗಳಂತೆ ಕಾದಾಡಿದರು. ಮೈದಾನದಲ್ಲಿ ಜಗಳ ನಡೆಯುವ ಹಂತಕ್ಕೂ ಏರಿತ್ತು. ಮುಖ್ಯವಾಗಿ ಭಾರತಕ್ಕೆ ಆಸರೆಯಾಗಿದ್ದ ಇಶಾನ್ ಕಿಶನ್ ಔಟಾದಾಗ ಹ್ಯಾರಿಸ್ ರೌಫ್ ನಡೆದುಕೊಂಡ ರೀತಿ ಭಾರತೀಯ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.
ಭಾರತದ ಅಗ್ರಕ್ರಮಾಂಕದ ಬ್ಯಾಟರ್ಗಳು ಆರಂಭದಲ್ಲೇ ಪೆವಿಲಿಯನ್ ಸೇರಿದ ಬಳಿಕ ತಂಡಕ್ಕೆ ಆಸರೆಯಾಗಿದ್ದು ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ. ಈ ಜೋಡಿ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿತ್ತು. ಹೀಗಾಗಿ ಪಾಕಿಸ್ತಾನ ಇವರ ಜೊತೆಯಾಟವನ್ನು ಬ್ರೇಕ್ ಮಾಡಲು ನಾನಾ ಕಸರತ್ತು ನಡೆಸಿತು. 38ನೇ ಓವರ್ನಲ್ಲಿ ಪಾಕ್ ಪ್ಲಾನ್ ವರ್ಕೌ ಆಯಿತು. ಹ್ಯಾರಿಸ್ ರೌಫ್ ಬೌಲಿಂಗ್ನ 3ನೇ ಎಸೆತದಲ್ಲಿ ಇಶಾನ್ ಕಿಶನ್ ಅವರು ಬಾಬರ್ ಅಜಮ್ ಹಿಡಿದ ಕ್ಯಾಚ್ಗೆ ಬಲಿಯಾದರು. ಈ ಸಂದರ್ಭ ರೌಫ್ ನಡೆದುಕೊಂಡ ರೀತಿ ವಿಚಿತ್ರವಾಗಿತ್ತು.
Before the match, Kohli was hugging this guy and cheering him, and during Kohli’s dismissal, this is how he treated him. That tells many things.#indvspakmatch #IndianCricketTeam #RaviShastri pic.twitter.com/L2rlfRNGYk
— Harsh Sharma (@kikalikesyou) September 2, 2023
ಕಿಶನ್ 81 ಎಸೆತಗಳಲ್ಲಿ 82 ರನ್ ಗಳಿಸಿ ಔಟ್ ಆಗುತ್ತಿದ್ದಂತೆ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದ ಹ್ಯಾರಿಸ್ ರೌಫ್, ಭಾರತೀಯ ಬ್ಯಾಟರ್‌ಗೆ ಕೈಸನ್ನೆ ಮಾಡುವ ಮೂಲಕ ‘ಗೆಟ್ ಲಾಸ್ಟ್’ ಎಂದು ಹೇಳಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರೌಫ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಪಂದ್ಯದ ಹಿಂದಿನ ದಿನ ರೌಫ್ ಅವರು ಭಾರತೀಯ ಆಟಗಾರರ ಜೊತೆ ನಗುತ್ತಾ ಸ್ನೇಹದಿಂದ ಮಾತನಾಡಿರುವುದು.
ಭಾರತ-ಪಾಕ್ ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಉಭಯ ತಂಡಗಳ ಆಟಗಾರರು ಪಲ್ಲಕೆಲೆ ಮೈದಾನದಲ್ಲಿ ಒಟ್ಟಾಗಿ ಅಭ್ಯಾಸ ನಡೆಸುತ್ತಿದ್ದರು. ಈ ಸಂದರ್ಭ ರೌಫ್ ಅವರು ಭಾರತೀಯ ಆಟಗಾರರ ಜೊತೆ ಸಮಯ ಕಳೆದಿದ್ದರು. ಅಲ್ಲದೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಫೋಟೋ ವೈರಲ್ ಆಗಿತ್ತು. ಇಷ್ಟೆಲ್ಲ ಉತ್ತಮ ಬಾಂಧವ್ಯ ಇರುವಂತೆ ತೋರಿಸಿ ಮೈದಾನದಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ ಕಿಶನ್ರನ್ನು ಶ್ಲಾಘಿಸದೆ ಗೆಟ್ ಲಾಸ್ಟ್ ಎಂದಿದ್ದು ತಪ್ಪು. ಇದು ಪಾಕ್ ಆಟಗಾರ ನಿಜವಾದ ಮುಖ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ರೌಫ್ ಅವರ ಈ ನಡೆಗೆ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ.
ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ
ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ನಾಯಕ ರೋಹಿತ್ 11, ಗಿಲ್ 10, ವಿರಾಟ್ ಕೊಹ್ಲಿ 4 ಹಾಗೂ ಶ್ರೇಯಸ್ ಅಯ್ಯರ್ 14 ರನ್ಗೆ ಬ್ಯಾಟ್ ಕೆಳಗಿಟ್ಟರು. ಆದರೆ, ಐದನೇ ವಿಕೆಟ್ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬೊಂಬಾಟ್ ಜೊತೆಯಾಟ ಆಡಿದರು. 138 ರನ್ಗಳ ಕಾಣಿಕೆ ನೀಡಿದರು. ಕಿಶನ್ 81 ಎಸೆತಗಳಲ್ಲಿ 82 ರನ್ ಸಿಡಿಸಿದರೆ, ಹಾರ್ದಿಕ್ 90 ಎಸೆತಗಳಲ್ಲಿ 87 ರನ್ಗೆ ಔಟಾದರು. ಭಾರತ 48.5 ಓವರ್ಗಳಲ್ಲಿ 266 ರನ್ಗಳಿಗೆ ಆಲೌಟ್ ಆಯಿತು. ಬಳಿಕ ಶುರುವಾದ ಮಳೆ ನಿಲ್ಲದ ಕಾರಣ ಪಾಕ್ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ