
2024 ರ ಐಪಿಎಲ್ (IPL) ವೇಳೆ ತನ್ನ ವಿಭಿನ್ನ ಸಂಭ್ರಮಾಚರಣೆಯ ಜೊತೆಗೆ ತನ್ನ ಬೌಲಿಂಗ್ ಮೂಲಕವೂ ಸಾಕಷ್ಟು ಸದ್ದು ಮಾಡಿದ್ದ ಯುವ ವೇಗಿ ಹರ್ಷಿತ್ ರಾಣಾ (Harshith Rana) ಈಗಾಗಲೇ ಭಾರತ ತಂಡದ ಪರ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಆದಾಗ್ಯೂ ಟೀಂ ಇಂಡಿಯಾದಲ್ಲಿ ಹರ್ಷಿತ್ ರಾಣಾಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಪ್ರಸ್ತುತ ತಂಡದಿಂದ ಹೊರಗಿರುವ ಹರ್ಷಿತ್ ರಾಣಾಗೆ ಇದೀಗ ಟಿ20 ತಂಡದ ನಾಯಕತ್ವ ಸಿಕ್ಕಿದೆ. ವಾಸ್ತವವಾಗಿ ಹರ್ಷಿತ್ ರಾಣಾ ಅವರನ್ನು ದೆಹಲಿ ಪ್ರೀಮಿಯರ್ ಲೀಗ್ 2025 ರಲ್ಲಿ (DPL 2025) ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಹರ್ಷಿತ್ ರಾಣಾ ಮೊದಲ ಬಾರಿಗೆ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹರ್ಷಿತ್ ರಾಣಾ ಈ ಮೊದಲು ನಾಯಕತ್ವ ವಹಿಸಿಲ್ಲ ಆದರೆ ಈಗ ಅವರಿಗೆ ಈ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಈ ಮೊದಲು ಹರ್ಷಿತ್ ರಾಣಾ ಭಾರತ ಎ ಪರ ಒಂದು ಪಂದ್ಯ ಆಡಿದ್ದರು. ಇದಾದ ನಂತರ ಅವರನ್ನು ಟೀಂ ಇಂಡಿಯಾಕ್ಕೂ ಆಯ್ಕೆ ಮಾಡಲಾಗಿತ್ತು. ಆದರೆ ಮೊದಲ ಟೆಸ್ಟ್ ನಂತರ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು. ಭಾರತಕ್ಕೆ ಬಂದಿರುವ ಹರ್ಷಿತ್ಗೆ ಈಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಾಯಕತ್ವ ಸಿಕ್ಕಿದೆ. ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡ ಅವರನ್ನು 21 ಲಕ್ಷ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
IND vs ENG: ಚೊಚ್ಚಲ ಏಕದಿನ ಪಂದ್ಯದಲ್ಲಿ ಅಗತ್ಯ- ಅನಗತ್ಯ ದಾಖಲೆ ಬರೆದ ಹರ್ಷಿತ್ ರಾಣಾ
ದೆಹಲಿ ಪ್ರೀಮಿಯರ್ ಲೀಗ್ 2025 ರ ಅತ್ಯಂತ ದುಬಾರಿ ಆಟಗಾರ ಸಿಮರ್ಜೀತ್ ಸಿಂಗ್. ಈ ಬಲಗೈ ವೇಗದ ಬೌಲರ್ ಅನ್ನು 39 ಲಕ್ಷ ರೂ.ಗೆ ಸೆಂಟ್ರಲ್ ದೆಹಲಿ ಕಿಂಗ್ ತಂಡ ಖರೀದಿಸಿದೆ. ದಿಗ್ವೇಶ್ ರಾಥಿ ಅವರನ್ನು ಓಲ್ಡ್ ದೆಹಲಿ ತಂಡ 38 ಲಕ್ಷ ರೂ.ಗೆ ಖರೀದಿಸಿದೆ. ಅದೇ ಸಮಯದಲ್ಲಿ, ನಿತೀಶ್ ರಾಣಾ ಅವರನ್ನು ವೆಸ್ಟ್ ದೆಹಲಿ ಲಯನ್ಸ್ ತಂಡ 34 ಲಕ್ಷ ರೂ. ನೀಡಿ ಸೇರಿಸಿಕೊಂಡಿದೆ. ಸೆಹ್ವಾಗ್ ಅವರ ಮಗ ಆರ್ಯವೀರ್ ಕೂಡ ಈ ವರ್ಷ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಇವರ ಜೊತೆಗೆ ವಿರಾಟ್ ಕೊಹ್ಲಿ ಅವರ ಸೋದರನ ಮಗ ಆರ್ಯವೀರ್ ಕೊಹ್ಲಿ ಕೂಡ ಆಡುವುದನ್ನು ಕಾಣಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ