IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್​ ಆಡಿಲ್ಲ..!

| Updated By: ಪೃಥ್ವಿಶಂಕರ

Updated on: Aug 17, 2022 | 3:05 PM

Asia Cup: ಏಷ್ಯಾಕಪ್‌ನಲ್ಲಿ ಇದುವರೆಗೆ ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.

IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್​ ಆಡಿಲ್ಲ..!
ಪ್ರಾತಿನಿಧಿಕ ಚಿತ್ರ
Follow us on

ಏಷ್ಯಾಕಪ್ (Asia Cup) ಆಗಸ್ಟ್ 27 ರಿಂದ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಭಾರತ ತಂಡ ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಈ ಟೂರ್ನಿಗಾಗಿ ಭಾರತ ತಂಡದ ತಯಾರಿ ಈಗಾಗಲೇ ಆರಂಭವಾಗಿದೆ. ಭಾರತ ತಂಡ ಆಗಸ್ಟ್ 20 ರಂದು ಏಷ್ಯಾಕಪ್‌ಗೆ ತೆರಳಲಿದ್ದು, ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗಿವೆ. ಆದರೆ ಅಚ್ಚರಿಯ ಸಂಗತಿ ಎಂದರೆ ಏಷ್ಯಾಕಪ್​ನ ಕಳೆದ 14 ಸೀಸನ್​ಗಳಲ್ಲಿ ಭಾರತ-ಪಾಕಿಸ್ತಾನ (India-Pakistan) ತಂಡಗಳ ನಡುವೆ ಒಂದೇ ಒಂದು ಫೈನಲ್ ಪಂದ್ಯ ನಡೆದಿಲ್ಲ. ಈ ಬಾರಿ ಈ ಎರಡು ತಂಡಗಳು ಫೈನಲ್ ತಲುಪುವ ನಿರೀಕ್ಷೆ ಎಲ್ಲರಲ್ಲಿದೆ. ಅಲ್ಲದೆ ಏಷ್ಯಾಕಪ್ ಇತಿಹಾಸದ ಎಲ್ಲಾ ಫೈನಲ್​ ಪಂದ್ಯಗಳ ಬಗ್ಗೆಗಿನ ಮಾಹಿತಿ ಕೂಡ ಇಲ್ಲಿದೆ.

ಏಷ್ಯಾ ಕಪ್ ಫೈನಲ್ ಇತಿಹಾಸ..

  1. 1984ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಪಂದ್ಯಾವಳಿಯನ್ನು  ಆಯೋಜಿಸಲಾಯಿತು. ಮೊದಲ ಸೀಸನ್​ನಲ್ಲೇ ಭಾರತ  ಟ್ರೋಫಿ ಗೆದ್ದಿತ್ತು.
  2. ಬಳಿಕ 1986 ರಲ್ಲಿ ನಡೆದ  ಎರಡನೇ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಲಿ ಚಾಂಪಿಯನ್ ಭಾರತ ವಿರುದ್ಧದ ಫೈನಲ್​ನಲ್ಲಿ ಶ್ರೀಲಂಕಾ ಮೊದಲ ಬಾರಿಗೆ ಏಷ್ಯಾ ಕಪ್ ಗೆದ್ದುಕೊಂಡಿತು.
  3. ಇದನ್ನೂ ಓದಿ
    Asia Cup 2022: ಏಷ್ಯಾಕಪ್ ಟೂರ್ನಮೆಂಟ್​: ಟಿಕೆಟ್ ಬುಕ್​ ಮಾಡುವುದು ಹೇಗೆ? ಇಲ್ಲಿದೆ ಗೈಡ್​
    Asia Cup 2022: ಏಷ್ಯಾಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ; ಯಾರಿಗೆ ಗೆಲುವು? ಪಾಂಟಿಂಗ್ ನುಡಿದ್ರು ಭವಿಷ್ಯ
    IND vs PAK: ಏಷ್ಯಾಕಪ್​ನಲ್ಲಿ ಪಾಕ್​ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿರಲಿದೆ
  4. 1988 ರಲ್ಲಿ ನಡೆದ ಏಷ್ಯಾಕಪ್‌ನ ಮೂರನೇ ಆವೃತ್ತಿಯಲ್ಲಿ ಭಾರತ ಪುನರಾಗಮನ ಮಾಡಿ, ದಿಲೀಪ್ ವೆಂಗ್‌ಸರ್ಕರ್ ನಾಯಕತ್ವದಲ್ಲಿ ಶ್ರೀಲಂಕಾವನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು.
  5. 1991ರ ನಾಲ್ಕನೇ ಏಷ್ಯಾಕಪ್ ಆವೃತ್ತಿಯಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಮೂರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
  6. ಐದನೇ ಆವೃತ್ತಿಯ ಏಷ್ಯಾಕಪ್ 1995ರಲ್ಲಿ ನಡೆದಿತ್ತು.ಈ ಆವೃತ್ತಿಯಲ್ಲೂ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.
  7. 1997 ರ ಏಷ್ಯಾ ಕಪ್‌ನ ಆರನೇ ಆವೃತ್ತಿಯಲ್ಲಿ, ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕತ್ವ ವಹಿಸಿದ್ದರು. ಈ ಆವೃತ್ತಿಯಲ್ಲಿ ಭಾರತ ಸೋಲು ಅನುಭವಿಸಿದರೆ, ಶ್ರೀಲಂಕಾ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
  8. ಏಷ್ಯಾ ಕಪ್ 2000 ರ 7 ನೇ ಆವೃತ್ತಿಯಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ಶ್ರೀಲಂಕಾವನ್ನು ಸೋಲಿಸಿ ಕಪ್ ಗೆದ್ದಿತ್ತು.
  9. 2004ರಲ್ಲಿ ನಡೆದ 8ನೇ ಏಷ್ಯಾಕಪ್ ಸೀಸನ್​ನಲ್ಲಿ ಶ್ರೀಲಂಕಾ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾ ಭಾರತ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು.
  10. 9ನೇ ಆವೃತ್ತಿಯ ಏಷ್ಯಾಕಪ್​ನಲ್ಲಿ ಶ್ರೀಲಂಕಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿ, ಭಾರತ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್‌ನಲ್ಲಿ ಸೋಲಿಸಿ ಒಟ್ಟಾರೆ ನಾಲ್ಕನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು.
  11. 2010 ರಲ್ಲಿ ನಡೆದ ಏಷ್ಯಾ ಕಪ್‌ನ 10 ನೇ ಸೀಸನ್​ನಲ್ಲಿ ನಾಯಕ ಧೋನಿ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿತು.
  12. ಏತನ್ಮಧ್ಯೆ, ಪಾಕಿಸ್ತಾನವು 2012 ರಲ್ಲಿ ಏಷ್ಯಾಕಪ್ 11 ನೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಾಕಿಸ್ತಾನ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು.
  13. 2014ರಲ್ಲಿ ನಡೆದ ಏಷ್ಯಾಕಪ್‌ನ 12ನೇ ಆವೃತ್ತಿಯಲ್ಲಿ ಶ್ರೀಲಂಕಾ ಪುನರಾಗಮನ ಮಾಡಿ. ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಶ್ರೀಲಂಕಾ ಈ ಬಾರಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು.
  14. 2016ರಲ್ಲಿ ನಡೆದ 13ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ನಾಯಕ ಧೋನಿ ನಾಯಕತ್ವದಲ್ಲಿ ಭಾರತ ತಂಡ ಮತ್ತೊಮ್ಮೆ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು.
  15. ಏತನ್ಮಧ್ಯೆ, ಏಷ್ಯಾ ಕಪ್ 2018 ರ 14 ನೇ ಆವೃತ್ತಿಯಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.

– ಏಷ್ಯಾಕಪ್‌ನಲ್ಲಿ ಇದುವರೆಗೆ ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.

Published On - 3:05 pm, Wed, 17 August 22