Asia Cup 2022: ಏಷ್ಯಾಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ; ಯಾರಿಗೆ ಗೆಲುವು? ಪಾಂಟಿಂಗ್ ನುಡಿದ್ರು ಭವಿಷ್ಯ

Asia Cup 2022: ಅಂದಹಾಗೆ, ಪಾಂಟಿಂಗ್ ಅವರು ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ತನ್ನ ಅಭಿಪ್ರಾಯ ಹೇಳಿದಲ್ಲದೆ ಏಷ್ಯಾಕಪ್‌ನ ವಿಜೇತರು ಯಾರಾಗಲಿದ್ದಾರೆ ಎಂಬುದನ್ನು ಸಹ ಭವಿಷ್ಯ ನುಡಿದ್ದಾರೆ.

Asia Cup 2022: ಏಷ್ಯಾಕಪ್​ನಲ್ಲಿ ಭಾರತ- ಪಾಕ್ ಮುಖಾಮುಖಿ; ಯಾರಿಗೆ ಗೆಲುವು? ಪಾಂಟಿಂಗ್ ನುಡಿದ್ರು ಭವಿಷ್ಯ
Follow us
TV9 Web
| Updated By: ಪೃಥ್ವಿಶಂಕರ

Updated on: Aug 13, 2022 | 7:30 AM

ಆಗಸ್ಟ್ 28.. ಈ ದಿನಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಹಲವು ತಿಂಗಳ ನಂತರ ಕ್ರಿಕೆಟ್​ನ ರಸದೌತಣ ಸಿಗಲಿದೆ. ಆ ರಸದೌತಣ ಬಡಿಸುವುದೇ ಭಾರತ ಮತ್ತು ಪಾಕಿಸ್ತಾನ (India and Pakistan) ಕ್ರಿಕೆಟ್ ಪಂದ್ಯ. ಯುಎಇಯಲ್ಲಿ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾಕಪ್ (Asia Cup 2022) ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧವಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ನಂತರ ಭಾರತ ತಂಡ ಮೊದಲ ಬಾರಿಗೆ ಮುಖಾಮುಖಿಯಾಗಲಿದೆ. ಯಾರ ಮೇಲೆ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಊಹಾಪೋಹಗಳು ನಡೆಯುತ್ತಿದ್ದು, ಆಸ್ಟ್ರೇಲಿಯಾದ ಶ್ರೇಷ್ಠ ನಾಯಕ ರಿಕಿ ಪಾಂಟಿಂಗ್ (Ricky Ponting) ಕೂಡ ಭವಿಷ್ಯ ನುಡಿದಿದ್ದಾರೆ.

ಆಗಸ್ಟ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಈ ಮುಖಾಮುಖಿಯತ್ತ ಎಲ್ಲರ ಕಣ್ಣು ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಸಂಖ್ಯೆಯನ್ನು ನೋಡಿದರೆ, ಈ ಪಂದ್ಯವನ್ನು ನೋಡುವ ಅವಕಾಶವನ್ನು ಯಾರೂ ಕಳೆದುಕೊಳ್ಳಲು ಬಯಸುವುದಿಲ್ಲ. ಇದಕ್ಕೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಭಿನ್ನವಾಗಿಲ್ಲ. ಆಸ್ಟ್ರೇಲಿಯಾ ತಂಡವನ್ನು ಎರಡು ಬಾರಿ ವಿಶ್ವ ಚಾಂಪಿಯನ್ ಮಾಡಿದ ಮಾಜಿ ನಾಯಕ ಪಾಂಟಿಂಗ್ ಕೂಡ ಈ ಎರಡು ದೇಶಗಳ ನಡುವಿನ ಸ್ಪರ್ಧೆಯು ತುಂಬಾ ವಿಶೇಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತ ಸ್ಪರ್ಧಿ

ICC ಗೆ ನೀಡಿದ ಸಂದರ್ಶನದಲ್ಲಿ, ಪಾಂಟಿಂಗ್ ಈ ಪೈಪೋಟಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ, ಜೊತೆಗೆ ಆಗಸ್ಟ್ 28 ರಂದು ನಡೆಯಲಿರುವ ಪಂದ್ಯದ ವಿಜೇತರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಒಂದು ಉತ್ತಮ ತಂಡವಾಗಿದೆ.ಆದರೆ ಈ ಸ್ಪರ್ಧಯಲ್ಲಿ ಭಾರತ ಮೇಲುಗೈ ಸಾಧಿಸಲಿದೆ ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾನು ಭಾರತವನ್ನು ಸ್ಪರ್ಧಿ ಎಂದು ಪರಿಗಣಿಸುತ್ತೇನೆ. ಇದು ಕ್ರಿಕೆಟ್‌ನ ಶ್ರೇಷ್ಠ ದೇಶವಾಗಿರುವುದರಿಂದ ಭಾರತ ಇಲ್ಲಿ ಮೇಲುಗೈ ಸಾಧಿಸಿದೆ. ಹಾಗಂತ ಇಲ್ಲಿ ಪಾಕಿಸ್ತಾನವನ್ನು ಕಡೆಗಣಿಸುತ್ತಿಲ್ಲ. ಬದಲಿಗೆ ಪಾಕಿಸ್ತಾನಕ್ಕಿಂತ ಭಾರತ ನಿರಂತರವಾಗಿ ಸೂಪರ್‌ಸ್ಟಾರ್ ಆಟಗಾರರನ್ನು ಬೆಳೆಸುತ್ತಿದೆ ಎಂದಿದ್ದಾರೆ.

ಏಷ್ಯಾಕಪ್ ಚಾಂಪಿಯನ್ ಯಾರಾಗುತ್ತಾರೆ?

ಅಂದಹಾಗೆ, ಪಾಂಟಿಂಗ್ ಅವರು ಭಾರತ-ಪಾಕಿಸ್ತಾನ ಪಂದ್ಯದ ಬಗ್ಗೆ ತನ್ನ ಅಭಿಪ್ರಾಯ ಹೇಳಿದಲ್ಲದೆ ಏಷ್ಯಾಕಪ್‌ನ ವಿಜೇತರು ಯಾರಾಗಲಿದ್ದಾರೆ ಎಂಬುದನ್ನು ಸಹ ಭವಿಷ್ಯ ನುಡಿದ್ದಾರೆ. ಇಲ್ಲಿಯೂ ಸಹ ಆಸ್ಟ್ರೇಲಿಯಾದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ಭಾರತವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಿದ್ದಾರೆ. ಏಷ್ಯಾಕಪ್ ಮಾತ್ರವಲ್ಲದೆ ಯಾವುದೇ ಟೂರ್ನಿಯಲ್ಲಿ ಭಾರತವನ್ನು ಸೋಲಿಸುವುದು ಸುಲಭವಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹೇಳಿದ್ದಾರೆ.

ಏಷ್ಯಾಕಪ್ ಕುರಿತು ಮಾತನಾಡುವುದಾದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ಮುಂದಿನ ಕೆಲವು ವಾರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಈ ಐತಿಹಾಸಿಕ ಪೈಪೋಟಿಯ ಪ್ರಚಂಡ ರೋಮಾಂಚಕತೆಯನ್ನು ಸಹ ಪಡೆಯುತ್ತಾರೆ. ಏಷ್ಯಾಕಪ್ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಪೈಪೋಟಿ ನಡೆಸಲಿವೆ.