AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ತಂಡ, 6 ಓವರ್, 5 ಬೌಲರ್​: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ನಿಯಮಗಳು ಇಲ್ಲಿವೆ

ಬಹುನಿರೀಕ್ಷಿತ ಹಾಂಗ್ ಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಯ 22ನೇ ಆವೃತ್ತಿಯು ಅಕ್ಟೋಬರ್ 30 ರಿಂದ ನವೆಂಬರ್ 1, 2026 ರವರೆಗೆ ಹಾಂಗ್ ಕಾಂಗ್‌ನ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್‌ನಲ್ಲಿ ನಡೆಯಲಿದೆ. ಒಟ್ಟು 12 ಅಂತರರಾಷ್ಟ್ರೀಯ ತಂಡಗಳು ಭಾಗವಹಿಸಲಿರುವ ಈ ಟೂರ್ನಿಯ ಸಂಪೂರ್ಣ ನಿಯಮಗಳ ವಿವರ ಇಲ್ಲಿದೆ.

12 ತಂಡ, 6 ಓವರ್, 5 ಬೌಲರ್​: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ನಿಯಮಗಳು ಇಲ್ಲಿವೆ
Hong Kong SixesImage Credit source: GettyImages
ಝಾಹಿರ್ ಯೂಸುಫ್
|

Updated on:Oct 31, 2026 | 8:12 AM

Share

ಕ್ರಿಕೆಟ್ ಎಂದರೆ ಕೇವಲ ಟೆಸ್ಟ್, ಒನ್‌ಡೇ ಅಥವಾ ಟಿ20 ಮಾತ್ರವಲ್ಲ! ಗಲ್ಲಿ ಕ್ರಿಕೆಟ್‌ನ ಮಜಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರೆ ಹೇಗಿರುತ್ತದೆ? ಅದಕ್ಕೇ ಅತ್ಯುತ್ತಮ ಉದಾಹರಣೆ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ. ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್  ಮಾನ್ಯತೆ ಹೊಂದಿರುವ ಈ ಟೂರ್ನಿಯು ತನ್ನ ವಿಶಿಷ್ಟ, ಅತಿ ವೇಗದ ಮತ್ತು ರೋಮಾಂಚಕ ನಿಯಮಗಳಿಂದಲೇ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಸೆಳೆದಿದೆ. ಅಷ್ಟಕ್ಕೂ ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ?

ಏನಿದು ಹಾಂಗ್ ಕಾಂಗ್ ಸಿಕ್ಸಸ್​?

ಇದು ಸಿಕ್ಸ್-ಎ-ಸೈಡ್ (ಆರು ಆಟಗಾರರ) ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇಲ್ಲಿ ಸಾಂಪ್ರದಾಯಿಕ 11 ಆಟಗಾರರ ಬದಲಿಗೆ ಪ್ರತಿ ತಂಡದಲ್ಲಿ ಕೇವಲ 6 ಆಟಗಾರರು ಮಾತ್ರ ಇರುತ್ತಾರೆ. ಪಂದ್ಯವು ಕೇವಲ 6 ಓವರ್‌ಗಳಿಗೆ ಸೀಮಿತವಾಗಿರುತ್ತದೆ. ಕೇವಲ 45 ರಿಂದ 60 ನಿಮಿಷಗಳಲ್ಲಿ ಒಂದು ಪಂದ್ಯ ಮುಗಿಯುವುದರಿಂದ, ಇದನ್ನು ‘ಫಾಸ್ಟೆಸ್ಟ್​’ ಕ್ರಿಕೆಟ್ ಟೂರ್ನಿ ಎಂದರೂ ತಪ್ಪಾಗಲಾರದು!

ಟೂರ್ನಿಯ ನಿಯಮಗಳೇನು?

ಗಲ್ಲಿ ಕ್ರಿಕೆಟ್‌ನಲ್ಲಿ ನಾವು ಆಡುವಂತಹ ಕೆಲವು ನಿಯಮಗಳನ್ನು ಈ ಅಧಿಕೃತ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಳವಡಿಸಲಾಗಿದೆ.

ಬೌಲಿಂಗ್ ಕಡ್ಡಾಯ: ವಿಕೆಟ್ ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ಮಾಡುವ ತಂಡದ ಉಳಿದ ಐದೂ ಆಟಗಾರರು ತಲಾ 1 ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಒಬ್ಬನಿಗೆ ಮಾತ್ರ 2 ಓವರ್​ಗಳನ್ನು ಎಸೆಯಲು ಅವಕಾಶ ನೀಡಲಾಗಿದೆ.

ಡಬಲ್ ರನ್: ಪಂದ್ಯದಲ್ಲಿ ರನ್ ವೇಗ ಹೆಚ್ಚಿಸಲು, ಪ್ರತಿ ವೈಡ್ ಅಥವಾ ನೋ-ಬಾಲ್‌ಗೆ ಎದುರಾಳಿ ತಂಡಕ್ಕೆ 2 ರನ್‌ಗಳನ್ನು ನೀಡಲಾಗುತ್ತದೆ ಹಾಗೂ ಹೆಚ್ಚುವರಿ ಎಸೆತವನ್ನು ಹಾಕಬೇಕಾಗುತ್ತದೆ.

‘ಸಿಂಗಲ್’ ಬ್ಯಾಟಿಂಗ್: ತಂಡದ 5 ವಿಕೆಟ್‌ಗಳು ಉರುಳಿದರೂ ಇನಿಂಗ್ಸ್ ಮುಗಿಯುವುದಿಲ್ಲ! 6ನೇ ಆಟಗಾರ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದು. ಆ ಸಮಯದಲ್ಲಿ ಕೊನೆಯದಾಗಿ ಔಟಾದ 5ನೇ ಬ್ಯಾಟ್ಸ್‌ಮನ್ ಕೇವಲ ರನ್ನರ್ ಆಗಿ ಕ್ರೀಸ್‌ನಲ್ಲಿ ನಿಲ್ಲಬೇಕಾಗುತ್ತದೆ.

ಎಷ್ಟು ತಂಡಗಳ ನಡುವಣ ಟೂರ್ನಿ?

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಈ ಬಾರಿ 12 ತಂಡಗಳು ಭಾಗವಹಿಸಲಿದೆ. ಆ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

  1. ಭಾರತ
  2. ಪಾಕಿಸ್ತಾನ್
  3. ಆಸ್ಟ್ರೇಲಿಯಾ
  4. ಇಂಗ್ಲೆಂಡ್
  5. ಸೌತ್ ಆಫ್ರಿಕಾ
  6. ಹಾಂಗ್ ಕಾಂಗ್
  7. ಸ್ಕಾಟ್ಲೆಂಡ್
  8. ಬಾಂಗ್ಲಾದೇಶ್
  9. ಶ್ರೀಲಂಕಾ
  10. ಯುಎಇ
  11. ಅಫ್ಘಾನಿಸ್ತಾನ್
  12. ಒಮಾನ್

ಹಾಲಿ ಚಾಂಪಿಯನ್ ಯಾರು?

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕುವೈತ್ ತಂಡವನ್ನು ಸೋಲಿಸಿ ದಾಖಲೆಯ 6ನೇ ಬಾರಿಗೆ ಟ್ರೋಫಿ ಗೆದ್ದಿರುವ ಪಾಕಿಸ್ತಾನ್ ತಂಡವು ಈ ಬಾರಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.

ಟೂರ್ನಿ ಯಾವಾಗ ಶುರು?

2026ರ ಹಾಂಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಯು 2026ರ ಅಕ್ಟೋಬರ್ 30 ರಂದು ಶುರುವಾಗಲಿದೆ. ನವೆಂಬರ್ 1, 2026 ರವರೆಗೆ ನಡೆಯಲಿರುವ ಈ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಹಾಂಕಾಂಗ್‌ನ ‘ಟಿನ್ ಕ್ವಾಂಗ್ ರೋಡ್ ರಿಕ್ರೀಯೇಷನ್ ಗ್ರೌಂಡ್’ ಆತಿಥ್ಯವಹಿಸಲಿದೆ.

ಇದನ್ನೂ ಓದಿ: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಹಾಂಗ್ ಕಾಂಗ್ ಸಿಕ್ಸಸ್​ಗೆ ಭಾರತ ತಂಡ:

  1. ಕೃನಾಲ್ ಪಾಂಡ್ಯ (ನಾಯಕ)
  2. ನಿತೀಶ್ ರಾಣಾ
  3. ಶಶಾಂಕ್ ಸಿಂಗ್
  4. ರಾಹುಲ್ ತ್ರಿಪಾಠಿ
  5. ರಾಹುಲ್ ತೆವಾಠಿಯಾ
  6. ಟಿ. ನಟರಾಜನ್
  7. ಕುಲ್ವಂತ್ ಖೇಜ್ರೋಲಿಯಾ

Published On - 3:06 pm, Thu, 29 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ