T20 World Cup 2021: ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಅಂದುಕೊಂಡಷ್ಟು ಸುಲಭವಲ್ಲ
India Sem final chances: ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೂ ಕಡಿಮೆ ರನ್ ಅಂತರದಿಂದ ಗೆಲ್ಲಬೇಕು. ಇದರಿಂದ ಭಾರತ ತಂಡವು ನಮೀಬಿಯಾ ವಿರುದ್ದ ಗೆಲುವು ದಾಖಲಿಸಿದರೂ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ.
ಸತತ ಎರಡು ಗೆಲುವು ದಾಖಲಿಸಿ ಟೀಮ್ ಇಂಡಿಯಾ (Team India) ಸೆಮಿಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅದರಲ್ಲೂ ಸ್ಕಾಟ್ಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿದೆ. ಇದೀಗ ಟೀಮ್ ಇಂಡಿಯಾ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದೆ. ಅತ್ತ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದ್ದು, ಹೀಗಾಗಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ ಸೋಲಬೇಕು. ಅಂದರೆ ಮಾತ್ರ ಭಾರತಕ್ಕೆ ಸೆಮಿಫೈನಲ್ ಚಾನ್ಸ್ ಇರಲಿದೆ. ಇಲ್ಲಿ ಮತ್ತೊಂದು ವಿಷಯ ಎಂದರೆ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಬಾರದು. ಏಕೆಂದರೆ ಒಂದು ವೇಳೆ ಅಫ್ಘಾನಿಸ್ತಾನ್ ಭರ್ಜರಿ ಜಯ ಸಾಧಿಸಿದರೆ ಮತ್ತೆ ಉತ್ತಮ ರನ್ ರೇಟ್ನೊಂದಿಗೆ 2ನೇ ಸ್ಥಾನಕ್ಕೆ ಬರಲಿದೆ.
ಪ್ರಸ್ತುತ ಭಾರತದ ನೆಟ್ ರನ್ ರೇಟ್ +1.619 ಪಡೆದು ರನ್ ರೇಟ್ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್ +1.277 ನೆಟ್ ರನ್ ರೇಟ್ ಹೊಂದಿದ್ದರೂ, ಮೂರು ಜಯ ಸಾಧಿಸಿದ ಪರಿಣಾಮ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ 2 ಜಯ ಸಾಧಿಸಿದರೂ ಅತ್ಯುತ್ತಮ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ್ +1.481 ನೆಟ್ ರನ್ ರೇಟ್ ಹೊಂದಿದೆ. ಅಂದರೆ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿದರೆ ಮತ್ತೆ ಭಾರತ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲಿದೆ.
ಇಲ್ಲಿ ಅಫ್ಘಾನ್ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ಚಾನ್ಸ್ ಇರಲಿದೆ. ಆದರೆ ಅದು ಭರ್ಜರಿ ಜಯವಾಗಬಾರದು. ಏಕೆಂದರೆ ಅಫ್ಘಾನ್ ಭರ್ಜರಿ ಜಯ ಸಾಧಿಸಿದ್ರೆ, ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಮೂಲಕ ಗೆಲ್ಲಬೇಕಾದ ಅನಿವಾರ್ಯತೆ ಬರಲಿದೆ. ಅಂದರೆ ಅಫ್ಘಾನಿಸ್ತಾನ್ ನೆಟ್ ರನ್ ರೇಟ್ನಲ್ಲಿ ಭಾರೀ ಅಂತರ ಕಾಣಿಸಿಕೊಂಡರೆ, ಟೀಮ್ ಇಂಡಿಯಾ ಇಂತಿಷ್ಟು ಓವರ್ನಲ್ಲಿ ಚೇಸ್ ಮಾಡಿ ಮತ್ತೆ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಕಡಿಮೆ ಅಂತರದಿಂದ ಗೆಲ್ಲಬೇಕು. ಭರ್ಜರಿ ಜಯ ಸಾಧಿಸಿದರೆ ಟೀಮ್ ಇಂಡಿಯಾ ನಮೀಬಿಯಾ ವಿರುದ್ದ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ.
ಹಾಗಾಗಿ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೂ ಕಡಿಮೆ ರನ್ ಅಂತರದಿಂದ ಗೆಲ್ಲಬೇಕು. ಇದರಿಂದ ಭಾರತ ತಂಡವು ನಮೀಬಿಯಾ ವಿರುದ್ದ ಗೆಲುವು ದಾಖಲಿಸಿದರೂ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಈ ಎಲ್ಲಾ ಕಾರಣದಿಂದಾಗಿ ಇದೀಗ ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(how India can still reach the semi-finals in T20 World Cup 2021)