ಹುಬ್ಬಳ್ಳಿ ಟೈಗರ್ಸ್ಗೆ ಸೋಲುಣಿಸಿದ ಗುಲ್ಬರ್ಗ ಮಿಸ್ಟಿಕ್ಸ್
Hubli Tigers vs Gulbarga Mystics: ಕೃಷ್ಣನ್ ಶ್ರೀಜಿತ್ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 65 ರನ್ ಚಚ್ಚಿದರು. ಹಾಗೆಯೇ ನಾಯಕ ಮನೀಶ್ ಪಾಂಡೆ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 48 ರನ್ ಬಾರಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 21ನೇ ಪಂದ್ಯದಲ್ಲಿ ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗ ಮಿಸ್ಟಿಕ್ಸ್ ತಂಡದ ನಾಯಕ ವಿಜಯಕುಮಾರ್ ವೈಶಾಕ್ ಬೌಲಿಂಗ್ ಆಯ್ದುಕೊಂಡರು.
ಅತ್ತ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ಲವ್ನೀತ್ ಸಿಸೋಡಿಯಾ 6 ರನ್ಗಳಿಸಿ ಔಟಾದರೆ, ಮೊಹಮ್ಮದ್ ತಾಹ 12 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.
ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣನ್ ಶ್ರೀಜಿತ್ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 65 ರನ್ ಚಚ್ಚಿದರು. ಹಾಗೆಯೇ ನಾಯಕ ಮನೀಶ್ ಪಾಂಡೆ 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 48 ರನ್ ಬಾರಿಸಿದರು. ಪರಿಣಾಮ 20 ಓವರ್ಗಳ ಮುಕ್ತಾಯದ ವೇಳೆ 6 ವಿಕೆಟ್ ಕಳೆದುಕೊಂಡು ಹುಬ್ಬಳ್ಳಿ ಟೈಗರ್ಸ್ 164 ರನ್ಗಳ ಕಲೆಹಾಕಿತು.
165 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಆರಂಭಿಕ ವೈಫಲ್ಯಕ್ಕೆ ಒಳಗಾಯಿತು. ಎಲ್ಆರ್ ಚೇತನ್ (12) ಹಾಗೂ ಆದರ್ಶ್ ಪ್ರಜ್ವಲ್ (14) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಹಾಗೂ ಸ್ಮರಣ್ ಅದ್ಭುತ ಜೊತೆಯಾಟವಾಡಿದರು. 38 ಎಸೆತಗಳನ್ನು ಎದುರಿಸಿದ ಸ್ಮರಣ್ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 56 ರನ್ ಬಾರಿಸಿದರು.
ಇನ್ನು ಮ್ಯಾಕ್ನೀಲ್ ಹ್ಯಾಡ್ಲಿ 50 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 65 ರನ್ ಬಾರಿಸುವ ಮೂಲಕ 18.4 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 7 ವಿಕೆಟ್ಗಳ ಜಯ ಸಾಧಿಸಿತು.
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಲವ್ನಿತ್ ಸಿಸೋಡಿಯಾ , ಮೊಹಮ್ಮದ್ ತಾಹ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಮನ್ವಂತ್ ಕುಮಾರ್ ಎಲ್ , ಮನೀಶ್ ಪಾಂಡೆ (ನಾಯಕ) , ಪ್ರವೀಣ್ ದುಬೆ , ಮಲ್ಲಿಕ್ಸಾಬ್ ಸಿರೂರ್ , ಎಂಬಿ ದರ್ಶನ್ , ಕೆಸಿ ಕಾರ್ಯಪ್ಪ, ಕ್ಲೆಮೆಂಟ್ ರಾಜಮೋಹನ್ , ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!
ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇಯಿಂಗ್ 11: ಎಲ್ ಆರ್ ಚೇತನ್ , ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ , ಅನೀಶ್ ಕೆ ವಿ , ಸ್ಮರಣ್ ಆರ್ , ಅಮಿತ್ ವರ್ಮಾ , ಅವಿನಾಶ್ ಡಿ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ವಿಜಯ್ ಕುಮಾರ್ ವೈಶಾಕ್ (ನಾಯಕ) , ಹಾರ್ದಿಕ್ ರಾಜ್ , ಅಭಿಲಾಷ್ ಶೆಟ್ಟಿ , ಶರಣ್ ಗೌಡ.