ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ತಂಡ ಏಷ್ಯಾಕಪ್ (Asia Cup 2022) ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಫೈನಲ್‌ನಲ್ಲಿ ಪಾಕಿಸ್ತಾನ 23 ರನ್‌ಗಳಿಂದ ಶ್ರೀಲಂಕಾ ಎದುರು ಸೋಲನುಭವಿಸಿ 3ನೇ ಬಾರಿಗೆ ಎಷ್ಯನ್ ಚಾಂಪಿಯನ್ ಆಗುವ ಅವಕಾಶದಿಂದ ವಂಚಿತವಾಯಿತು. ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಸತತ ಎರಡನೇ ಬಾರಿಗೆ ಪಾಕಿಸ್ತಾನ (Pakistan Vs Sri Lanka) ತಂಡವನ್ನು ಸೋಲಿಸಿತು. ಇದಕ್ಕೂ ಮುನ್ನ ಸೂಪರ್ 4ರ ಕೊನೆಯ ಪಂದ್ಯದಲ್ಲಿ ಪಾಕ್ ತಂಡ ಮುಜುಗರದ ಸೋಲನುಭವಿಸಿತ್ತು. ಆದರೆ ಪ್ರಶಸ್ತಿ ಪಂದ್ಯದ ಸೋಲಿಗೆ ಪಾಕ್ ಮಾಡಿದ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಪಾಕ್ ತಂಡದ ಸೋಲಿನ ಬಾರವನ್ನು ತಾನೋಬ್ಬನೇ ಹೊರುವುದಾಗಿ ತಂಡದ ಆಟಗಾರ ಹೇಳಿಕೊಂಡಿದ್ದಾನೆ.
ಕ್ಯಾಚ್ ಬಿಟ್ಟಿದ್ದಕ್ಕೆ ಕ್ಷಮೆಯಾಚಿಸಿದ ಶಾದಾಬ್
ಫೈನಲ್‌ನಲ್ಲಿ ತಂಡ ಸೇರಿಕೊಂಡಿದ್ದ ಶಾದಾಬ್, ಸೋಲಿನ ನಂತರ ಟ್ವೀಟ್ ಮಾಡಿ, ಕ್ಷಮಿಸಿ, ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ನಾನು ನನ್ನ ತಂಡವನ್ನು ನಿರಾಸೆಗೊಳಿಸಿದೆ. ನಸೀಮ್, ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್ ಮತ್ತು ಇಡೀ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಮೊಹಮ್ಮದ್ ರಿಜ್ವಾನ್ ದಿಟ್ಟ ಹೋರಾಟ ನಡೆಸಿದರು. ಇಡೀ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿತು ಎಂದಿದ್ದಾರೆ. ಜೊತೆಗೆ ಫೈನಲ್ಗೆ ಶ್ರೀಲಂಕಾ ತಂಡವನ್ನು ಶಾದಾಬ್ ಅಭಿನಂದಿಸಿದ್ದಾರೆ.
Catches win matches. Sorry, I take responsibility for this loss. I let my team down. Positives for team, @iNaseemShah, @HarisRauf14, @mnawaz94 and the entire bowling attack was great. @iMRizwanPak fought hard. The entire team tried their best. Congratulations to Sri Lanka pic.twitter.com/7qPgAalzbt
— Shadab Khan (@76Shadabkhan) September 11, 2022
ವಾಸ್ತವವಾಗಿ, ಸೂಪರ್ 4 ರ ಕೊನೆಯ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆ ಪಂದ್ಯದಲ್ಲಿ ಶ್ರೀಲಂಕಾ, ಪಾಕ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ಶಾದಾಬ್ 4 ಓವರ್ ಬೌಲ್ ಮಾಡಿ 28 ರನ್ ನೀಡಿದ್ದರು. ಆ ಬಳಿಕ ಅವರು ಬ್ಯಾಟ್‌ನಿಂದ 8 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಫೀಲ್ಡಿಂಗ್ನಲ್ಲಿ ದುಬಾರಿಯಾದ ಶಾದಾಬ್, ಲಂಕಾ ತಂಡದ ಮ್ಯಾಚ್ ವಿನ್ನರ್ ಭಾನುಕಾ ರಾಜಪಕ್ಸೆ ಅವರ ಕ್ಯಾಚ್ ಕೈಚೆಲ್ಲಿದರು. ಇದು ಪಾಕ್ ತಂಡಕ್ಕೆ ಸೋಲಿನ ಭಾರ ಹೊರುವಂತೆ ಮಾಡಿತು.
ಬಿಗ್ ಕ್ಯಾಚ್ ಕೈ ತಪ್ಪಿತು
ವಾಸ್ತವವಾಗಿ, ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 170 ರನ್ ಗಳಿಸಿತು. ಆದರೆ ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೇವಲ 58 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ರಾಜಪಕ್ಸೆ ಜವಾಬ್ದಾರಿ ವಹಿಸಿಕೊಂಡು ಕೊನೆಯವರೆಗೂ ಮೈದಾನದಲ್ಲಿ ನಿಂತರು. ಅವರು 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಆದರೆ ರೌಫ್ ಎಸೆದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಶಾದಾಬ್ ರಾಜಪಕ್ಸೆ ಅವರ ಕ್ಯಾಚ್ ಅನ್ನು ಲಾಂಗ್ ಆನ್‌ನಲ್ಲಿ ಕೈಬಿಟ್ಟರು. ಆಗ ಅವರು 45 ರನ್ ಗಳಿಸಿ ಆಡುತ್ತಿದ್ದರು. ಇದಾದ ಬಳಿಕ ಮತ್ತೊಂದು ಕ್ಯಾಚ್ ಕೈಬಿಟ್ಟರು. ಬಳಿಕ 19ನೇ ಓವರ್‌ನಲ್ಲೂ ಎರಡನೇ ಕ್ಯಾಚ್ ಕೈಬಿಟ್ಟರು. ವಾಸ್ತವವಾಗಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶಾದಾಬ್, ಸಹ ಆಟಗಾರ ಆಸಿಫ್ ಅಲಿಗೆ ಡಿಕ್ಕಿ ಹೊಡೆದು ಚೆಂಡನ್ನು ಮಿಸ್ ಮಾಡಿಕೊಂಡರು.
ಅಂತಿಮ ಓವರ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ರಾಜಪಕ್ಸೆ, ಡೀಪ್ ಮಿಡ್‌ವಿಕೆಟ್‌ನಲ್ಲಿ ಬಿಗ್ ಶಾಟ್ ಆಡಿದರು. ಆಸಿಫ್ ಮತ್ತು ಶಾದಾಬ್ ಇಬ್ಬರೂ ಕ್ಯಾಚ್ ತೆಗೆದುಕೊಳ್ಳಲು ಓಡಿದರು. ಆಸಿಫ್ ಬಹುತೇಕ ಚೆಂಡನ್ನು ಹಿಡಿದಿದ್ದರು, ಆದರೆ ಶಾದಾಬ್ ಮಾಡಿದ ಡೈವ್, ಕ್ಯಾಚ್ ಕೈತಪ್ಪುವಂತೆ ಮಾಡಿತು. ಇತ್ತ ಶಾದಾಬ್ ಕೂಡ ಚೆಂಡನ್ನು ಹಿಡಿಯಲಾಗಲಿಲ್ಲ, ಅತ್ತ ಚೆಂಡನ್ನು ಆಸಿಫ್ ಕೈಯಲ್ಲೂ ಬಿಡಲಿಲ್ಲ. ಹೀಗಾಗಿ ಚೆಂಡು ಬೌಂಡರಿ ದಾಟಿ 6 ರನ್ ಗಳಿಸಿತು. ಶ್ರೀಲಂಕಾ ನೀಡಿದ 171 ರನ್‌ಗಳ ಗುರಿಗೆ ಉತ್ತರವಾಗಿ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ಆಲೌಟ್ ಆಯಿತು.