IBSA ವರ್ಲ್ಡ್ ಗೇಮ್ಸ್​ನಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಚಾಂಪಿಯನ್ಸ್​

| Updated By: ಝಾಹಿರ್ ಯೂಸುಫ್

Updated on: Aug 26, 2023 | 8:02 PM

IBSA World Games 2023: ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ಮಹಿಳಾ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಕೇವಲ 3.3 ಓವರ್​ಗಳಲ್ಲಿ ಭಾರತ ತಂಡವು 1 ವಿಕೆಟ್ ಕಳೆದುಕೊಂಡು 43 ರನ್​ಗಳಿಸಿ  9 ವಿಕೆಟ್​ಗಳ ಅಮೋಘ ಗೆಲುವನ್ನು ತನ್ನದಾಗಿಸಿಕೊಂಡಿದೆ.

IBSA ವರ್ಲ್ಡ್ ಗೇಮ್ಸ್​ನಲ್ಲಿ ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಚಾಂಪಿಯನ್ಸ್​
Team India
Follow us on

ಇಂಗ್ಲೆಂಡ್​ನ ಎಡ್ಜ್​ಬಾಸ್ಟನ್​ನಲ್ಲಿ  ನಡೆದ ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವರ್ಲ್ಡ್ ಗೇಮ್ಸ್​ನ ಮಹಿಳಾ ಅಂಧರ ಕ್ರಿಕೆಟ್​ ಫೈನಲ್​ನಲ್ಲಿ ಭರ್ಜರಿ ಜಯ ಸಾಧಿಸಿ ಭಾರತೀಯ ವನಿತೆಯರು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 9 ವಿಕೆಟ್​ಗಳಿಂದ  ಗೆಲ್ಲುವ ಮೂಲಕ ಭಾರತ ತಂಡ ಈ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ VI ಮಹಿಳಾ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 114 ರನ್​ ಕಲೆಹಾಕಿತು. ದ್ವಿತೀಯ ಇನಿಂಗ್ಸ್​ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು 9 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಅಲ್ಲದೆ ಭಾರತ VI ಮಹಿಳಾ ತಂಡಕ್ಕೆ 9 ಓವರ್​ಗಳಲ್ಲಿ 43 ರನ್​ಗಳ ಗುರಿ ನೀಡಲಾಗಿತ್ತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡದ ಮಹಿಳಾ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಕೇವಲ 3.3 ಓವರ್​ಗಳಲ್ಲಿ ಭಾರತ ತಂಡವು 1 ವಿಕೆಟ್ ಕಳೆದುಕೊಂಡು 43 ರನ್​ಗಳಿಸಿ,  9 ವಿಕೆಟ್​ಗಳ ಅಮೋಘ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಈ ಮೂಲಕ ಇಂಟರ್ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ ಫೆಡರೇಶನ್ (IBSA) ವರ್ಲ್ಡ್ ಗೇಮ್ಸ್​ನ ಅಂಧರ ಕ್ರಿಕೆಟ್​ನಲ್ಲಿ ಭಾರತ ಮಹಿಳಾ ತಂಡವು​ ಐತಿಹಾಸಿಕ ಸಾಧನೆ ಮಾಡಿದೆ.

 

 

Published On - 7:06 pm, Sat, 26 August 23