The Hundred: ತೂಫಾನ್ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟರ್
Will Smeed: ಬರ್ಮಿಂಗ್ ಹ್ಯಾಮ್ ತಂಡವು 53 ರನ್ಗಳ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತು. ಸ್ಪೋಟಕ ಶತಕ ಸಿಡಿಸಿ ದಿ ಹಂಡ್ರೆಡ್ ಲೀಗ್ನಲ್ಲಿ ಹೊಸ ದಾಖಲೆ ಬರೆದ ಯುವ ಆಟಗಾರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನಲ್ಲಿ (The Hundred) ಚೊಚ್ಚಲ ಶತಕ ಮೂಡಿಬಂದಿದೆ. ಅದು ಕೂಡ 20ರ ಹರೆಯದ ಯುವ ಬ್ಯಾಟ್ಸ್ಮನ್ ಬ್ಯಾಟ್ನಿಂದ ಎಂಬುದು ವಿಶೇಷ. ಅಂದರೆ ದಿ ಹಂಡ್ರೆಡ್ ಲೀಗ್ನಲ್ಲಿ ಇದುವರೆಗೆ ಯಾವುದೇ ಬ್ಯಾಟರ್ ಶತಕ ಬಾರಿಸಿಲ್ಲ. ಇದೀಗ ವಿಲ್ ಸ್ಮೀಡ್ (Will Smeed ) ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಬರ್ಮಿಂಗ್ಹ್ಯಾಮ್ ಫೀನೆಕ್ಸ್ ಹಾಗೂ ಸದರ್ನ್ ಬ್ರೇವ್ ನಡುವಣ ಈ ಪಂದ್ಯದಲ್ಲಿ ವಿಲ್ ಸ್ಮೀಡ್ ಈ ವಿಶೇಷ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬರ್ಮಿಂಗ್ಹ್ಯಾಮ್ ಪರ ವಿಲ್ ಸ್ಮೀಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಕೇವಲ 100 ಎಸೆತಗಳಲ್ಲಿ ಈ ಪಂದ್ಯದಲ್ಲಿ ವಿಲ್ ಸ್ಮೀಡ್ ಒಬ್ಬರೇ 50 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಸ್ಪೋಟಕ ಶತಕ ಸಿಡಿಸಿ ಮಿಂಚಿದರು. ಸ್ಮೀಡ್ ಅವರ 101 ರನ್ಗಳ ನೆರವಿನಿಂದ ಬರ್ಮಿಂಗ್ಹ್ಯಾಮ್ ತಂಡವು 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು.
HISTORY MAKER!!! ?
Will Smeed take a bow ? pic.twitter.com/w1vztnUnOQ
— Sky Sports Cricket (@SkyCricket) August 10, 2022
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸದರ್ನ್ ಬ್ರೇವ್ ತಂಡದ ಪರ ಅಲೆಕ್ಸ್ ಡೇವಿಸ್ (33) ಮಾತ್ರ ತುಸು ಉತ್ತಮ ಬ್ಯಾಟಿಂಗ್ ಮಾಡಿದ್ದರು. ಇದಾಗ್ಯೂ ಉಳಿದ ಬ್ಯಾಟ್ಸ್ಮನ್ಗಳು ಬರ್ಮಿಂಗ್ಹ್ಯಾಮ್ ಬೌಲರ್ಗಳನ್ನು ಎದುರಿಸಲು ಒದ್ದಾಡಿದರು. ಪರಿಣಾಮ ಕೇವಲ 85 ಎಸೆತಗಳಲ್ಲಿ 123 ರನ್ಗಳಿಸಿ ಸದರ್ನ್ ಬ್ರೇವ್ ತಂಡವು ಸರ್ವಪತನ ಕಂಡಿತು. ಇದರೊಂದಿಗೆ ಬರ್ಮಿಂಗ್ ಹ್ಯಾಮ್ ತಂಡವು 53 ರನ್ಗಳ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತು. ಸ್ಪೋಟಕ ಶತಕ ಸಿಡಿಸಿ ದಿ ಹಂಡ್ರೆಡ್ ಲೀಗ್ನಲ್ಲಿ ಹೊಸ ದಾಖಲೆ ಬರೆದ ವಿಲ್ ಸ್ಮೀಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.