ತಾಹ ಸ್ಪೋಟಕ ಅರ್ಧಶತಕ: ಸೆಮಿಫೈನಲ್ಗೆ ಹೆಜ್ಜೆಯಿಟ್ಟ ಹುಬ್ಬಳ್ಳಿ ಟೈಗರ್ಸ್
Maharaja Trophy T20 2023: 168 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಮೊಹಮ್ಮದ್ ತಾಹ ಸ್ಪೋಟಕ ಆರಂಭ ಒದಗಿಸಿದ್ದರು. ಲವ್ನೀತ್ ಸಿಸೋಡಿಯಾ (14) ಜೊತೆ ಇನಿಂಗ್ಸ್ ಆರಂಭಿಸಿದ ತಾಹ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 27ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಮಂಗಳೂರು ಡ್ರಾಗನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಮನೀಶ್ ಪಾಂಡೆ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡಕ್ಕೆ ಆರಂಭಿಕರಾದ ಶರತ್ ಬಿಆರ್ (40) ಹಾಗೂ ರೋಹನ್ ಪಾಟೀಲ್ (34) ಉತ್ತಮ ಆರಂಭ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿದ್ಧಾರ್ಥ್ ಕೇವಲ 37 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 53 ರನ್ ಚಚ್ಚಿದ್ದರು. ಆದರೆ ಇದಾದ ಬಳಿಕ ದಿಢೀರ್ ಕುಸಿತಕ್ಕೊಳಗಾದ ಮಂಗಳೂರು ಡ್ರಾಗನ್ಸ್ ತಂಡವು ರನ್ಗಳಿಕೆಯಲ್ಲಿ ಹಿಂದೆ ಉಳಿಯಿತು.
ಪರಿಣಾಮ ಮಂಗಳೂರು ಡ್ರಾಗನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 167 ರನ್ಗಳಿಸಲಷ್ಟೇ ಶಕ್ತರಾದರು. ಹುಬ್ಬಳ್ಳಿ ಟೈಗರ್ಸ್ ಪರ ಮನ್ವಂತಕುಮಾರ್ 5 ವಿಕೆಟ್ ಕಬಳಿಸಿ ಮಿಂಚಿದರು.
168 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಮೊಹಮ್ಮದ್ ತಾಹ ಸ್ಪೋಟಕ ಆರಂಭ ಒದಗಿಸಿದ್ದರು. ಲವ್ನೀತ್ ಸಿಸೋಡಿಯಾ (14) ಜೊತೆ ಇನಿಂಗ್ಸ್ ಆರಂಭಿಸಿದ ತಾಹ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಅಲ್ಲದೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ 23 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ 6 ಫೋರ್ಗಳೊಂದಿಗೆ 51 ರನ್ಗಳಿಸಿ ತಾಹ ನಿರ್ಗಮಿಸಿದರು.
ಈ ಹಂತದಲ್ಲಿ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ಮನೀಶ್ ಪಾಂಡೆ 33 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 56 ರನ್ ಚಚ್ಚಿದರು. ಈ ಮೂಲಕ 18.2 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.
ಈ 5 ವಿಕೆಟ್ಗಳ ಗೆಲುವಿನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ 8 ಜಯ ಸಾಧಿಸಿ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿಯ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಮೊಹಮ್ಮದ್ ತಾಹ , ನಾಗಾ ಭರತ್ , ಮನೀಶ್ ಪಾಂಡೆ (ನಾಯಕ) , ಪ್ರವೀಣ್ ದುಬೆ , ಮನ್ವಂತ್ ಕುಮಾರ್ ಎಲ್ , ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್) , ಲವಿಶ್ ಕೌಶಲ್ , ಎಂಬಿ ದರ್ಶನ್ , ಕೆಸಿ ಕಾರ್ಯಪ್ಪ, ಸಂತೋಕ್ ಸಿಂಗ್ , ಮಿತ್ರಕಾಂತ್ ಯಾದವ್.
ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!
ಮಂಗಳೂರು ಡ್ರಾಗನ್ಸ್ ಪ್ಲೇಯಿಂಗ್ 11: ಶರತ್ ಬಿಆರ್ (ವಿಕೆಟ್ ಕೀಪರ್) , ರೋಹನ್ ಪಾಟೀಲ್ , ಕೃಷ್ಣಮೂರ್ತಿ ಸಿದ್ಧಾರ್ಥ್ , ತಿಪ್ಪಾ ರೆಡ್ಡಿ , ಕೃತಿಕ್ ಕೃಷ್ಣ , ಅನಿರುದ್ಧ ಜೋಶಿ , ನವೀನ್ ಎಂಜಿ , ಕೃಷ್ಣಪ್ಪ ಗೌತಮ್ (ನಾಯಕ) , ಆದಿತ್ಯ ಗೋಯಲ್ , ಸಂಕಲ್ಪ್ ಶೆಟ್ಟೆನ್ನವರ್ , ಪಾರಸ್ ಗುರ್ಬಕ್ಸ್ ಆರ್ಯ.