AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC: ಕ್ರಿಕೆಟ್ ಜಗತ್ತಿಗೆ 2 ಹೊಸ ತಂಡಗಳ ಪ್ರವೇಶ; ಐಸಿಸಿ ಅಧಿಕೃತ ಘೋಷಣೆ

ICC Annual Meeting 2025: ಜುಲೈ 20, 2025 ರಂದು ಸಿಂಗಾಪುರದಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ, ಟಿಮೋರ್-ಲೆಸ್ಟೆ ಮತ್ತು ಜಾಂಬಿಯಾ ಎರಡು ಹೊಸ ಅಸೋಸಿಯೇಟ್ ಸದಸ್ಯರಾಗಿ ಸೇರ್ಪಡೆಗೊಂಡವು. ಇದರಿಂದ ಐಸಿಸಿಯ ಒಟ್ಟು ಸದಸ್ಯರ ಸಂಖ್ಯೆ 110ಕ್ಕೆ ಏರಿದೆ. ಚಾಂಪಿಯನ್ಸ್ ಲೀಗ್ ಟಿ20 ಪುನರಾರಂಭದ ಬಗ್ಗೆಯೂ ಚರ್ಚಿಸಲಾಯಿತು. ಜಾಗತಿಕ ಕ್ರಿಕೆಟ್ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ.

ICC: ಕ್ರಿಕೆಟ್ ಜಗತ್ತಿಗೆ 2 ಹೊಸ ತಂಡಗಳ ಪ್ರವೇಶ; ಐಸಿಸಿ ಅಧಿಕೃತ ಘೋಷಣೆ
Jay Shah
ಪೃಥ್ವಿಶಂಕರ
|

Updated on:Jul 20, 2025 | 10:59 PM

Share

ಜುಲೈ 20, 2025 ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ವಾರ್ಷಿಕ ಸಭೆ ಸಿಂಗಾಪುರದಲ್ಲಿ ನಡೆಯಿತು. ಈ ಸಭೆಯಲ್ಲಿ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ಇದರಲ್ಲಿ ಚಾಂಪಿಯನ್ಸ್ ಲೀಗ್ ಟಿ20ಯನ್ನು ಪುನರಾರಂಭಿಸುವ ವಿಚಾರವು ಸೇರಿತ್ತು. ಇದರ ಜೊತೆಗೆ ಕ್ರಿಕೆಟ್ ಜಗತ್ತಿಗೆ 2 ಹೊಸ ತಂಡಗಳನ್ನು ಸಹ ಸಹವರ್ತಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಈ ನಿರ್ಧಾರದೊಂದಿಗೆ, ಐಸಿಸಿಯ ಒಟ್ಟು ಸದಸ್ಯ ತಂಡಗಳ ಸಂಖ್ಯೆ ಈಗ 110 ಕ್ಕೇರಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಹೆಚ್ಚು ಜನಪ್ರಿಯಗೊಳಿಸುವ ಮತ್ತು ಹೊಸ ಕ್ಷೇತ್ರಗಳಲ್ಲಿ ಅದರ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಒಂದು ಪ್ರಮುಖ ಉಪಕ್ರಮವಾಗಿದೆ.

ಈ ಎರಡು ತಂಡಗಳ ಆಗಮನ

ಟಿಮೋರ್ ಮತ್ತು ಜಾಂಬಿಯಾ ಐಸಿಸಿಯ ಹೊಸ ಸದಸ್ಯ ತಂಡಗಳಾಗಿವೆ ಎಂದು ಐಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಟಿಮೋರ್-ಲೆಸ್ಟೆ ಕ್ರಿಕೆಟ್ ಫೆಡರೇಶನ್ ಮತ್ತು ಜಾಂಬಿಯಾ ಕ್ರಿಕೆಟ್ ಯೂನಿಯನ್ ಅನ್ನು ಐಸಿಸಿಯ ಅಸೋಸಿಯೇಟ್ ಸದಸ್ಯರನ್ನಾಗಿ ಔಪಚಾರಿಕವಾಗಿ ಸೇರಿಸಿಕೊಳ್ಳಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ‘ಎರಡು ಹೊಸ ಸದಸ್ಯ ತಂಡಗಳು ಐಸಿಸಿ ಕುಟುಂಬಕ್ಕೆ ಸೇರ್ಪಡೆಗೊಂಡಿದ್ದು, ಒಟ್ಟು ಸದಸ್ಯ ತಂಡಗಳ ಸಂಖ್ಯೆ 110 ಕ್ಕೆ ತಲುಪಿದೆ. ಟಿಮೋರ್-ಲೆಸ್ಟೆ ಕ್ರಿಕೆಟ್ ಫೆಡರೇಶನ್ ಮತ್ತು ಜಾಂಬಿಯಾ ಕ್ರಿಕೆಟ್ ಯೂನಿಯನ್ ಔಪಚಾರಿಕವಾಗಿ ಐಸಿಸಿ ಅಸೋಸಿಯೇಟ್ ಸದಸ್ಯರಾಗಿವೆ ಎಂದು ಐಸಿಸಿ ತಿಳಿಸಿದೆ.

ಐಸಿಸಿಗೆ ಸೇರ್ಪಡೆಗೊಂಡ 22 ನೇ ಆಫ್ರಿಕನ್ ರಾಷ್ಟ್ರ ಜಾಂಬಿಯಾ. ಮತ್ತೊಂದೆಡೆ, ಟಿಮೋರ್-ಲೆಸ್ಟೆ ಈಗ ಪೂರ್ವ ಏಷ್ಯಾ ಪೆಸಿಫಿಕ್ ಪ್ರದೇಶದ 10 ನೇ ಅಸೋಸಿಯೇಟ್ ಸದಸ್ಯ ರಾಷ್ಟ್ರವಾಗಿದ್ದು, 22 ವರ್ಷಗಳ ಹಿಂದೆ 2003 ರಲ್ಲಿ ಫಿಲಿಪೈನ್ಸ್ ಸೇರ್ಪಡೆಗೊಂಡ ನಂತರ ಇದು ಮೊದಲ ದೇಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಟಿಮೋರ್-ಲೆಸ್ಟೆಯಲ್ಲಿ ಕ್ರಿಕೆಟ್ ಆರಂಭವಾಗಿದ್ದು, ಈ ಆಟವು ಅಲ್ಲಿನ ಯುವಕರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಟಿಮೋರ್-ಲೆಸ್ಟೆ ಈಗ ದೊಡ್ಡ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಲು ಅವಕಾಶವನ್ನು ಪಡೆಯಲಿದೆ.

WTC Final: ಮುಂದಿನ 3 ಆವೃತ್ತಿಗಳ ಡಬ್ಲ್ಯುಟಿಸಿ ಫೈನಲ್ ಈ ದೇಶದಲ್ಲಿ ನಡೆಯಲಿದೆ; ಐಸಿಸಿ ಅಧಿಕೃತ ಹೇಳಿಕೆ

ಜಾಂಬಿಯಾಗೆ ಎರಡನೇ ಅವಕಾಶ

ಜಾಂಬಿಯಾ ಕ್ರಿಕೆಟ್ ಒಕ್ಕೂಟವು ಐಸಿಸಿಗೆ ಮರಳಿದ್ದು ಒಂದು ಸ್ಪೂರ್ತಿದಾಯಕ ಕಥೆ. ಜಾಂಬಿಯಾ 2003 ರಲ್ಲಿ ಐಸಿಸಿಯ ಅಸೋಸಿಯೇಟ್ ಸದಸ್ಯತ್ವವನ್ನು ಪಡೆಯಿತು, ಆದರೆ ಆಡಳಿತ ಮತ್ತು ಅನುಸರಣೆ ಸಮಸ್ಯೆಗಳಿಂದಾಗಿ ಅದರ ಸದಸ್ಯತ್ವವನ್ನು 2019 ರಲ್ಲಿ ರದ್ದುಗೊಳಿಸಲಾಯಿತು. 2021 ರಲ್ಲಿ, ಜಾಂಬಿಯಾವನ್ನು ಐಸಿಸಿಯಿಂದ ಹೊರಹಾಕಲಾಯಿತು, ಆದರೆ ಈಗ ನಾಲ್ಕು ವರ್ಷಗಳ ನಂತರ, ಜಾಂಬಿಯಾ ತನ್ನ ಆಡಳಿತಾತ್ಮಕ ಮತ್ತು ಸಾಂಸ್ಥಿಕ ನ್ಯೂನತೆಗಳನ್ನು ನಿವಾರಿಸುವ ಮೂಲಕ ಅಸೋಸಿಯೇಟ್ ಸದಸ್ಯತ್ವವನ್ನು ಮರಳಿ ಪಡೆದಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಜಾಂಬಿಯಾಗೆ ಇದು ಹೊಸ ಆರಂಭವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Sun, 20 July 25

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್