IND vs ENG: ಮ್ಯಾಂಚೆಸ್ಟರ್ ಟೆಸ್ಟ್ಗೆ ಮಳೆಯಾತಂಕ; 5 ದಿನಗಳ ಹವಾಮಾನ ವರದಿ ಇಲ್ಲಿದೆ
India vs England 4th Test: ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಹವಾಮಾನದ ಪ್ರಭಾವ ಬೀರಲಿದೆ. ಮಳೆಯ ಮುನ್ಸೂಚನೆ ಇದ್ದು, ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಓಲ್ಡ್ ಟ್ರಾಫರ್ಡ್ ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮಾನ ಅವಕಾಶ ನೀಡುತ್ತದೆ. ಭಾರತ ತಂಡ ಈ ಮೈದಾನದಲ್ಲಿ ಇನ್ನೂ ಗೆಲುವು ಸಾಧಿಸಿಲ್ಲ ಎಂಬುದು ಗಮನಾರ್ಹ.

ಇಂಗ್ಲೆಂಡ್ ಮತ್ತು ಭಾರತ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ (Old Trafford Test) ಕ್ರೀಡಾಂಗಣದಲ್ಲಿ ನಡೆಯಲಿದೆ. ವಾಸ್ತವವಾಗಿ, ಇಲ್ಲಿಯವರೆಗೆ ಎರಡು ತಂಡಗಳ ನಡುವೆ ಮೂರು ಟೆಸ್ಟ್ ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆಯಲ್ಲಿದೆ. ಈಗ ಶುಭ್ಮನ್ ಗಿಲ್ ಪಡೆ ಈ ಟೆಸ್ಟ್ ಸರಣಿಯನ್ನು ಜೀವಂತವಾಗಿಡಲು ಬಯಸಿದರೆ, ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲುವುದು ಬಹಳ ಮುಖ್ಯವಾಗಿದೆ. ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದರೆ, ಸರಣಿ ಆತಿಥೇಯರ ಪಾಲಾಗಲಿದೆ. ಆದಾಗ್ಯೂ, ಈ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿದ್ದು, ಪಂದ್ಯದ ಐದು ದಿನವೂ ಮಳೆಯಾಗಲಿದೆ ಎಂದು ವರದಿಯಾಗಿದೆ.
ಮ್ಯಾಂಚೆಸ್ಟರ್ ಹವಾಮಾನ ಹೇಗಿರಲಿದೆ?
ಅಕ್ಯೂವೆದರ್ ವರದಿಯ ಪ್ರಕಾರ, ಜುಲೈ 23 ರ ಬುಧವಾರದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಪಂದ್ಯವು ಈ ದಿನದಂದು ಆರಂಭವಾಗಲಿದೆ. ಜುಲೈ 24 ರ ಗುರುವಾರದಂದು ಕೂಡ ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಜುಲೈ 25 ರ ಶುಕ್ರವಾರದಂದು ಮಳೆಯಾಗುವ ಸಾಧ್ಯತೆ ಶೇ. 20 ರಷ್ಟು ಇದ್ದರೆ, ಪಂದ್ಯದ ನಾಲ್ಕನೇ ದಿನ ಅಂದರೆ ಜುಲೈ 26 ರಂದು ಶೇ. 25 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಜುಲೈ 27 ರಂದು ಶೇ. 58 ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಇದರರ್ಥ ಪಂದ್ಯದ ಐದು ದಿನಗಳಲ್ಲಿ ಮಳೆ ಅಡ್ಡಿಪಡಿಸಬಹುದು, ಇದು ಪಂದ್ಯದ ಮೇಲೂ ಪರಿಣಾಮ ಬೀರಬಹುದು.
ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದ ಪಿಚ್ ಹೇಗಿದೆ?
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಸಾಕಷ್ಟು ಸಹಾಯ ಪಡೆಯುತ್ತಾರೆ. ಆರಂಭದಲ್ಲಿ, ವೇಗದ ಬೌಲರ್‌ಗಳಿಗೆ ಇಲ್ಲಿ ಸಾಕಷ್ಟು ಸಹಾಯ ಸಿಗುತ್ತದೆ. ಆದಾಗ್ಯೂ, ಬ್ಯಾಟ್ಸ್‌ಮನ್ ಸೆಟ್ ಆಗಿದ್ದರೆ, ಅವರು ಇಲ್ಲಿ ದೊಡ್ಡ ಸ್ಕೋರ್ ಮಾಡಬಹುದು. ಸ್ಪಿನ್ನರ್‌ಗಳು ಆಟದ ಮೂರನೇ ದಿನದಿಂದ ಪ್ರಯೋಜನ ಪಡೆಯುತ್ತಾರೆ. ಆಟದ ಐದನೇ ದಿನ ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದ್ದು, ಬ್ಯಾಟಿಂಗ್ ಮಾಡಲು ಸಾಕಷ್ಟು ತೊಂದರೆ ಇರುತ್ತದೆ. ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ದೊಡ್ಡ ಗುರಿಯನ್ನು ಬೆನ್ನಟ್ಟುವುದು ಸುಲಭದ ಕೆಲಸವಲ್ಲದ ಕಾರಣ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ.
IND vs ENG: ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಗವಾಸ್ಕರ್, ಜೈಸ್ವಾಲ್ ದಾಖಲೆ ಮುರಿಯಲು ಶುಭ್ಮನ್ ಗಿಲ್ ಸಜ್ಜು
ಭಾರತ ಇಲ್ಲಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ
ಭಾರತ ತಂಡವು ಓಲ್ಡ್ ಟ್ರಾಫರ್ಡ್‌ನಲ್ಲಿ ಇದುವರೆಗೆ 9 ಟೆಸ್ಟ್‌ಗಳನ್ನು ಆಡಿದ್ದು, ಒಂದನ್ನೂ ಗೆದ್ದಿಲ್ಲ. ತಂಡವು ಇಲ್ಲಿ 4 ಪಂದ್ಯಗಳನ್ನು ಸೋತರೆ, 5 ಪಂದ್ಯಗಳು ಡ್ರಾ ಆಗಿವೆ. ಇದರ ಹೊರತಾಗಿ, ಈ ಮೈದಾನದಲ್ಲಿ ನಡೆದ ಪಂದ್ಯದ ಇನ್ನಿಂಗ್ಸ್‌ನಲ್ಲಿ ಭಾರತದ ನಾಲ್ಕು ಬೌಲರ್‌ಗಳು ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರಲ್ಲಿ ಲಾಲಾ ಅಮರನಾಥ್, ವಿನೂ ಮಂಕಡ್, ಸುರೇಂದ್ರನಾಥ್ ಮತ್ತು ದಿಲೀಪ್ ದೋಷಿ ಸೇರಿದ್ದಾರೆ. ಆದರೆ 1982 ರಿಂದ, ಯಾವುದೇ ಭಾರತೀಯ ಬೌಲರ್ ಇಲ್ಲಿ 5 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
