- Kannada News Photo gallery Cricket photos Shubman Gill's England Domination: On Track to Break Sunil Gavaskar's Record
IND vs ENG: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗವಾಸ್ಕರ್, ಜೈಸ್ವಾಲ್ ದಾಖಲೆ ಮುರಿಯಲು ಶುಭ್ಮನ್ ಗಿಲ್ ಸಜ್ಜು
Shubman Gill: ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಸರಣಿಯಲ್ಲಿ ಗಿಲ್ ಇದುವರೆಗೆ 607 ರನ್ ಗಳಿಸಿದ್ದಾರೆ. ಇದೀಗ ಗಿಲ್ ಸುನಿಲ್ ಗವಾಸ್ಕರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ದಾಖಲೆಗಳನ್ನು ಮುರಿಯುವ ಸಮೀಪದಲ್ಲಿದ್ದಾರೆ. ಇದು ಮಾತ್ರಲ್ಲದೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ದಾಖಲೆ ಮುರಿಯುವ ಅವಕಾಶ ಗಿಲ್ಗಿದೆ.
Updated on: Jul 20, 2025 | 8:51 PM

ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಈ ಸರಣಿಯ ಮೊದಲ 3 ಪಂದ್ಯಗಳಲ್ಲಿ ಗಿಲ್, ಇದುವರೆಗೆ 101.17 ರ ಸರಾಸರಿಯಲ್ಲಿ 607 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕಗಳು ಸೇರಿವೆ.

ಇದೀಗ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗಿಲ್ ನಂಬರ್ 167 ರನ್ ಬಾರಿಸಿದರೆ, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಲಿದ್ದಾರೆ. ಹಾಗೆಯೇ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ಸೃಷ್ಟಿಸಲಿದ್ದಾರೆ.

ಇಲ್ಲಿಯವರೆಗೆ, ಸುನಿಲ್ ಗವಾಸ್ಕರ್ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗವಾಸ್ಕರ್ 774 ರನ್ ಗಳಿಸಿದ್ದರು.

2024 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 712 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈಗ ಗಿಲ್ ಇನ್ನೂ 106 ರನ್ ಗಳಿಸಿದರೆ, ಅವರು ಯಶಸ್ವಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬರುತ್ತಾರೆ. ಹಾಗೆಯೇ ಉಳಿದ ಎರಡು ಪಂದ್ಯಗಳಲ್ಲಿ ಇನ್ನೂ 168 ರನ್ ಗಳಿಸಿದರೆ, ಅವರು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಗಿಲ್ ಪ್ರಸ್ತುತ ಫಾರ್ಮ್‌ನಲ್ಲಿರುವ ಕಾರಣ, ಅವರು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿಯೇ ಈ ದಾಖಲೆಯನ್ನು ಮುರಿಯುವ ಎಲ್ಲಾ ಸಾಧ್ಯತೆಗಳಿವೆ. ಇದು ಮಾತ್ರವಲ್ಲದೆ, 19 ವರ್ಷಗಳ ಹಿಂದೆ ಮೊಹಮ್ಮದ್ ಯೂಸುಫ್ ನಿರ್ಮಿಸಿದ ದಾಖಲೆಯನ್ನು ಸಹ ಗಿಲ್ ಮುರಿಯುವ ಅವಕಾಶ ಹೊಂದಿದ್ದಾರೆ. ಮೊಹಮ್ಮದ್ ಯೂಸುಫ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

2006 ರಲ್ಲಿ, ಮೊಹಮ್ಮದ್ ಯೂಸುಫ್ ಇಂಗ್ಲೆಂಡ್ ವಿರುದ್ಧ ಆಡಿದ್ದ 4 ಪಂದ್ಯಗಳಲ್ಲಿ 90.14 ರ ಸರಾಸರಿಯಲ್ಲಿ 631 ರನ್ ಗಳಿಸಿದ್ದರು. ಗಿಲ್ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇನ್ನೂ 25 ರನ್ ಗಳಿಸಿದರೆ, ಅವರು ಮೊಹಮ್ಮದ್ ಯೂಸುಫ್ ಅವರ ದಾಖಲೆಯನ್ನು ಮುರಿದು ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಏಷ್ಯನ್ ಬ್ಯಾಟ್ಸ್‌ಮನ್ ಆಗಲಿದ್ದಾರೆ.
