- Kannada News Photo gallery Cricket photos KL Rahul: 9000 International Runs and England's 1000 Runs Milestone Imminent
IND vs ENG: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ದಾಟಲಿರುವ ಕೆಎಲ್ ರಾಹುಲ್
KL Rahul: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆ.ಎಲ್. ರಾಹುಲ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಅವರು 9000 ಅಂತರರಾಷ್ಟ್ರೀಯ ರನ್‌ಗಳು ಮತ್ತು ಇಂಗ್ಲೆಂಡ್‌ನಲ್ಲಿ 1000 ರನ್‌ಗಳ ಮೈಲುಗಲ್ಲು ದಾಟುವ ಸಮೀಪದಲ್ಲಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಮುಂದಿನ ಪಂದ್ಯದಲ್ಲಿ ಅವರು ಈ ಮೈಲುಗಲ್ಲುಗಳನ್ನು ಸಾಧಿಸುವ ನಿರೀಕ್ಷೆಯಿದೆ
Updated on: Jul 20, 2025 | 8:14 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿ ಭಾರತೀಯ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಹೀಗಾಗಿಯೇ ರಾಹುಲ್ ಈ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈಗ ಈ ಎರಡೂ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ಪ್ರಾರಂಭವಾಗಲಿದ್ದು, ಈ ಪಂದ್ಯ ರಾಹುಲ್‌ಗೆ ಬಹಳ ಮುಖ್ಯವಾಗಲಿದೆ.

ಅವರು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಉತ್ತಮ ದಾಖಲೆಯನ್ನು ಮಾಡಬಹುದು. ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಮಾಡಲು ಅವರು ಕೇವಲ 60 ರನ್‌ಗಳ ಹಿಂದಿದ್ದಾರೆ. ಇದು ಮಾತ್ರವಲ್ಲದೆ, ಇಂಗ್ಲೆಂಡ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಲು ರಾಹುಲ್ ಕೇವಲ 11 ರನ್‌ಗಳ ದೂರದಲ್ಲಿದ್ದಾರೆ.

ರಾಹುಲ್ ಇದುವರೆಗೆ ಟೀಂ ಇಂಡಿಯಾ ಪರ 218 ಪಂದ್ಯಗಳಲ್ಲಿ 39.73 ಸರಾಸರಿಯಲ್ಲಿ 8940 ರನ್ ಗಳಿಸಿದ್ದಾರೆ, ಇದರಲ್ಲಿ 19 ಶತಕಗಳು ಮತ್ತು 58 ಅರ್ಧಶತಕಗಳು ಸೇರಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ 60 ರನ್‌ಗಳು ಮಾತ್ರ ಬೇಕಾಗಿವೆ.

ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ಪ್ರಸ್ತುತ 16 ನೇ ಸ್ಥಾನದಲ್ಲಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್‌ನ ಎರಡು ಇನ್ನಿಂಗ್ಸ್ಗಳಲ್ಲಿ ರಾಹುಲ್ ಇನ್ನು 60 ರನ್ ಬಾರಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಪೂರೈಸಲಿದ್ದಾರೆ.

ಇಷ್ಟೇ ಅಲ್ಲ, ರಾಹುಲ್ ಇಂಗ್ಲೆಂಡ್‌ನಲ್ಲಿ 12 ಪಂದ್ಯಗಳಲ್ಲಿ 41.20 ಸರಾಸರಿಯಲ್ಲಿ 989 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಇದೀಗ ರಾಹುಲ್ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇನ್ನೂ 11 ರನ್ ಗಳಿಸಿದರೆ, ಅವರು ಇಂಗ್ಲೆಂಡ್‌ನಲ್ಲಿ ಸಾವಿರ ರನ್‌ಗಳನ್ನು ಪೂರ್ಣಗೊಳಿಸುತ್ತಾರೆ. ಈ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನಾಡಿರುವ ರಾಹುಲ್ 62.50 ಸರಾಸರಿಯಲ್ಲಿ 375 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕವಿದೆ.

ಕೆಎಲ್ ರಾಹುಲ್ ಅವರ ಅಂತರರಾಷ್ಟ್ರೀಯ ಅಂಕಿಅಂಶಗಳ ಬಗ್ಗೆ ಮಾತನಾಡಿದರೆ, ಅವರು ಟೀಂ ಇಂಡಿಯಾ ಪರ 61 ಟೆಸ್ಟ್ ಪಂದ್ಯಗಳಲ್ಲಿ 35.26 ಸರಾಸರಿಯಲ್ಲಿ 3632 ರನ್ ಗಳಿಸಿದ್ದಾರೆ. ಹಾಗೆಯೇ 85 ಏಕದಿನ ಪಂದ್ಯಗಳಲ್ಲಿ 49.08 ಸರಾಸರಿಯಲ್ಲಿ 3043 ರನ್ ಗಳಿಸಿದ್ದಾರೆ. ಟಿ20ಯಲ್ಲಿ 72 ಪಂದ್ಯಗಳನ್ನಾಡಿರುವ ರಾಹುಲ್ 2265 ರನ್ ಸಿಡಿಸಿದ್ದಾರೆ.
