ಅಂಡರ್- 19 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ; ಭಾರತದ ಮೊದಲ ಪಂದ್ಯ ಯಾವಾಗ?
U-19 Men's Cricket World Cup 2024: 2024 ರಂದು ನಡೆಯಲ್ಲಿರುವ ಅಂಡರ್- 19 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. 19 ವರ್ಷದೊಳಗಿನವರ ವಿಶ್ವಕಪ್ ಮುಂದಿನ ವರ್ಷ ಶ್ರೀಲಂಕಾದಲ್ಲಿ ನಡೆಯಲಿದೆ. ಈ ವಿಶ್ವಕಪ್ನಲ್ಲಿ 16 ತಂಡಗಳು ಭಾಗವಹಿಸಲಿದ್ದು, ಈ ಟೂರ್ನಿ ಜನವರಿ 13ರಂದು ಆರಂಭವಾಗಲಿದೆ. ಫೈನಲ್ ಪಂದ್ಯ ಫೆಬ್ರವರಿ 4 ರಂದು ನಡೆಯಲ್ಲಿದೆ.
2024 ರಂದು ನಡೆಯಲ್ಲಿರುವ ಅಂಡರ್- 19 ವಿಶ್ವಕಪ್ (Under-19 World Cup) ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ. 19 ವರ್ಷದೊಳಗಿನವರ ವಿಶ್ವಕಪ್ ಮುಂದಿನ ವರ್ಷ ಶ್ರೀಲಂಕಾದಲ್ಲಿ ನಡೆಯಲಿದೆ. ಈ ವಿಶ್ವಕಪ್ನಲ್ಲಿ 16 ತಂಡಗಳು ಭಾಗವಹಿಸಲಿದ್ದು, ಈ ಟೂರ್ನಿ ಜನವರಿ 13ರಂದು ಆರಂಭವಾಗಲಿದೆ. ಫೈನಲ್ ಪಂದ್ಯ ಫೆಬ್ರವರಿ 4 ರಂದು ನಡೆಯಲ್ಲಿದೆ. ಇದರೊಂದಿಗೆ ಶ್ರೀಲಂಕಾ (Sri Lanka) ಮೂರನೇ ಬಾರಿಗೆ ಅಂಡರ್-19 ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. 19 ವರ್ಷದೊಳಗಿನವರ ವಿಶ್ವಕಪ್‌ನ 15 ನೇ ಆವೃತ್ತಿಯಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲೂ ನಾಲ್ಕು ತಂಡಗಳಿದ್ದು, ಅಂತಿಮವಾಗಿ, ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯುತ್ತವೆ.
ಯಾವ ಗುಂಪಿನಲ್ಲಿ ಯಾವ ತಂಡ?
ಭಾರತ, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್ಎ ‘ಎ’ ಗುಂಪಿನಲ್ಲಿದ್ದರೆ, ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ‘ಸಿ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಜಿಂಬಾಬ್ವೆ, ನಮೀಬಿಯಾ ಮತ್ತು ಆತಿಥೇಯ ಶ್ರೀಲಂಕಾ ತಂಡಗಳಿದ್ದರೆ, ‘ಡಿ’ ಗುಂಪಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ ತಂಡಗಳು ಸೇರಿವೆ.
ಏಕದಿನ ವಿಶ್ವಕಪ್‌ನ ಬಹುಮಾನದ ಮೊತ್ತ ಪ್ರಕಟ; ಚಾಂಪಿಯನ್ ತಂಡಕ್ಕೆ ಸಿಗಲಿದೆ 33 ಕೋಟಿ ರೂ..!
ಪಂದ್ಯಾವಳಿ ಯಾವಾಗ ಆರಂಭ?
ಅಂಡರ್-19 ವಿಶ್ವಕಪ್ ಗುಂಪು ಹಂತದ ಪಂದ್ಯಗಳು ಜನವರಿ 13 ರಿಂದ 21ರ ನಡುವೆ ನಡೆಯಲಿವೆ. ಪ್ರತಿ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡವು ತಮ್ಮ ಪಂದ್ಯಾವಳಿಯನ್ನು ಮುಗಿಸುವ ಮೊದಲು ಮತ್ತೊಂದು ನಾಲ್ಕನೇ ಸ್ಥಾನದ ತಂಡದ ವಿರುದ್ಧ ಇನ್ನೂ ಒಂದು ಪಂದ್ಯವನ್ನು ಆಡುತ್ತದೆ. ಗುಂಪು ಹಂತದ ನಂತರ 12 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಮುನ್ನಡೆಯಲಿವೆ. ಈ ಮಾದರಿಯಲ್ಲಿ, ಆರು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗುತ್ತದೆ. ‘ಎ’ ಮತ್ತು ‘ಡಿ’ ಗುಂಪಿನ ಮೊದಲ ಮೂರು ತಂಡಗಳು ಒಂದು ಗುಂಪಿನಲ್ಲಿರುತ್ತವೆ. ‘ಬಿ’ ಮತ್ತು ‘ಸಿ’ ಗುಂಪಿನ ಅಗ್ರ ಮೂರು ತಂಡಗಳೊಂದಿಗೆ ಮತ್ತೊಂದು ಗುಂಪನ್ನು ರಚಿಸಲಾಗುತ್ತದೆ.
Mark your calendars 🗓️
The schedule for the 2024 ICC U19 Men’s Cricket World Cup is out!#U19CWC | Details 👇https://t.co/nuy6GM0Uwc
— ICC (@ICC) September 22, 2023
ಸೂಪರ್ ಸಿಕ್ಸ್ ಹಂತದಲ್ಲಿ ಪ್ರತಿ ತಂಡ ತಲಾ ಎರಡು ಪಂದ್ಯಗಳನ್ನು ಆಡಲಿದೆ. ಪ್ರಾಥಮಿಕ ಗುಂಪು ಹಂತದಲ್ಲಿ ಅವರು ತಮ್ಮ ಸ್ಥಾನದ ಆಧಾರದ ಮೇಲೆ ಇತರ ಗುಂಪುಗಳ ತಂಡಗಳನ್ನು ಎದುರಿಸುತ್ತಾರೆ. ಉದಾಹರಣೆಗೆ ‘ಎ’ ಗುಂಪಿನ ಅಗ್ರ ತಂಡವು ‘ಡಿ’ ಗುಂಪಿನಲ್ಲಿ ಎರಡನೇ ಮತ್ತು ಮೂರನೇ ತಂಡದ ವಿರುದ್ಧ ಆಡುತ್ತದೆ. ಸೂಪರ್ ಸಿಕ್ಸ್ ಗುಂಪಿನ ಅಗ್ರ ಎರಡು ತಂಡಗಳು ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಭಾರತದ ಮೊದಲ ಪಂದ್ಯ ಯಾವಾಗ?
ನಾಕೌಟ್ ಹಂತಗಳ ವಿಜೇತರು ಫೆಬ್ರವರಿ 4 ರಂದು ಟೂರ್ನಿಯ ಫೈನಲ್‌ನಲ್ಲಿ ಆಡುತ್ತಾರೆ. ಆತಿಥೇಯ ಶ್ರೀಲಂಕಾ ಜನವರಿ 13 ರಂದು ಜಿಂಬಾಬ್ವೆ ವಿರುದ್ಧ ಆರಂಭಿಕ ಪಂದ್ಯವನ್ನು ಆಡಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಮೊದಲ ದಿನ ಮೂರು ಪಂದ್ಯಗಳು ನಡೆಯಲ್ಲಿವೆ. ಟೂರ್ನಿಯ ಎರಡನೇ ದಿನ ಬಾಂಗ್ಲಾದೇಶ ವಿರುದ್ಧ ಹಾಲಿ ಚಾಂಪಿಯನ್ ಭಾರತ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇನ್ನು 2022 ರಲ್ಲಿ ಯಶ್ ಧುಲ್ ನೇತೃತ್ವದ ಟೀಂ ಇಂಡಿಯಾ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಅಂಡರ್-19 ವಿಶ್ವಕಪ್ ಗೆದ್ದಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Fri, 22 September 23