ಐಸಿಸಿ 2024ರ ಅತ್ಯುತ್ತಮ ಏಕದಿನ ತಂಡವನ್ನು ಪ್ರಕಟಿಸಿದ್ದು, ಕಳೆದ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ತಂಡದಲ್ಲಿ ಅವಕಾಶ ಸಿಕ್ಕಿದೆ. ಇದರಲ್ಲಿ ಭಾರತ, ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾದ ಯಾವ ಆಟಗಾರನೂ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಐಸಿಸಿಯ ಅತ್ಯುತ್ತಮ ODI ಏಕದಿನ ಶ್ರೀಲಂಕಾದ ಗರಿಷ್ಠ 4 ಆಟಗಾರರು ಆಯ್ಕೆಯಾಗಿದ್ದು, ಪಾಕಿಸ್ತಾನದ ಮೂವರು ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಿಸಲಾಗಿದೆ. ಉಳಿದಂತೆ ಅಫ್ಘಾನಿಸ್ತಾನದ ಮೂವರು ಮತ್ತು ವೆಸ್ಟ್ ಇಂಡೀಸ್‌ನ ಒಬ್ಬ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಐಸಿಸಿಯ ಬೆಸ್ಟ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಯಾಮ್ ಅಯ್ಯೂಬ್ ಮತ್ತು ರಹಮಾನುಲ್ಲಾ ಗುರ್ಬಾಜ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಪಾತುಮ್ ನಿಸ್ಸಾಂಕ 3ನೇ ಸ್ಥಾನದಲ್ಲಿದ್ದು, ಕುಸಾಲ್ ಮೆಂಡಿಸ್ 4ನೇ ಸ್ಥಾನದಲ್ಲಿದ್ದಾರೆ. ಮೆಂಡಿಸ್ ವಿಕೆಟ್ ಕೀಪರ್ ಆಗಿಯೂ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ನಾಯಕ ಚರಿತ್ ಅಸಲಂಕಾ ಕೂಡ ತಂಡದಲ್ಲಿ ಸೇರ್ಪಡೆಗೊಂಡಿದ್ದು, ಅವರನ್ನು ಐಸಿಸಿಯ ಅತ್ಯುತ್ತಮ ಏಕದಿನ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್‌ನ ಶೆರ್ಫೇನ್ ರುದರ್‌ಫೋರ್ಡ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆಲ್ ರೌಂಡರ್ಗಳಾಗಿ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಮತ್ತು ಶ್ರೀಲಂಕಾದ ವನೆಂದು ಹಸರಂಗಾ ತಂಡದಲ್ಲಿದ್ದಾರೆ. ವೇಗದ ಬೌಲಿಂಗ್ನಲ್ಲಿ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ಗೆ ಸ್ಥಾನ ನೀಡಲಾಗಿದೆ. ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಮೊಹಮ್ಮದ್ ಗಜನ್ಫರ್ ಕೂಡ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Presenting the ICC Men’s ODI Team of the Year 2024 featuring the finest players from around the world 👏 pic.twitter.com/ic4BSXlXCc
— ICC (@ICC) January 24, 2025
ಐಸಿಸಿ ಪುರುಷರ ಏಕದಿನ ತಂಡ (2024): ಸ್ಯಾಮ್ ಅಯೂಬ್, ರಹಮಾನುಲ್ಲಾ ಗುರ್ಬಾಜ್, ಪಾತುಮ್ ನಿಸ್ಸಾಂಕಾ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಶೆರ್ಫಾನೆ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್ಜಾಯ್, ವನೆಂದು ಹಸರಂಗ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಅಲ್ಲಾ ಮೊಹಮ್ಮದ್ ಘಜಾನ್.
ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ತಂಡಗಳ ಆಟಗಾರರು ಐಸಿಸಿಯ ಅತ್ಯುತ್ತಮ ಏಕದಿನ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದಿಲ್ಲ. ಇದಕ್ಕೆ ಕಾರಣವೂ ಇದ್ದು, ವಾಸ್ತವವಾಗಿ ಭಾರತವು 2024 ರಲ್ಲಿ ಕೇವಲ 3 ಏಕದಿನ ಪಂದ್ಯಗಳನ್ನು ಆಡಿತ್ತು. ಆ ಸರಣಿಯು ಶ್ರೀಲಂಕಾ ವಿರುದ್ಧವೂ ಆಗಿತ್ತು, ಇದರಲ್ಲಿ ಟೀಂ ಇಂಡಿಯಾ 0-2 ರಿಂದ ಸರಣಿಯನ್ನು ಸೋತಿತ್ತದರೆ, ಉಳಿದ ಒಂದು ಪಂದ್ಯ ಟೈ ಆಗಿತ್ತು. ಇತ್ತ ಆಸ್ಟ್ರೇಲಿಯಾ ಆಡಿದ 12 ಏಕದಿನ ಪಂದ್ಯಗಳಲ್ಲಿ ವಿಭಿನ್ನ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿತ್ತು. 2024 ರಲ್ಲಿ ಟಿ20 ವಿಶ್ವಕಪ್ ನಡೆದ ಕಾರಣ ದೊಡ್ಡ ತಂಡಗಳು ಟಿ20 ಸ್ವರೂಪದ ಮೇಲೆ ಮಾತ್ರ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದವು. ಹೀಗಾಗಿ ಸ್ಟಾರ್ ಆಟಗಾರರು ಹೆಚ್ಚು ಟಿ20 ಪಂದ್ಯಗಳನ್ನು ಆಡಿದರು. ಅದಕ್ಕಾಗಿಯೇ ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಆಟಗಾರರು 2024 ರಲ್ಲಿ ಏಕದಿನ ಸ್ವರೂಪದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿರುವುದನ್ನು ಕಾಣಬಹುದು. ಈ ಮೂರೂ ತಂಡಗಳು ಕಳೆದ ವರ್ಷ ಹಲವು ಏಕದಿನ ಪಂದ್ಯಗಳನ್ನು ಆಡಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Fri, 24 January 25