ಸೌರವ್ ಗಂಗೂಲಿಯ 35 ವರ್ಷಗಳ ಹಳೆಯ ದಾಖಲೆ ಮುರಿದ 10 ನೇ ತರಗತಿಯ ಅಂಕಿತ್ ಚಟರ್ಜಿ

Ranji Trophy 2024-25: ರಣಜಿ ಟ್ರೋಫಿ 2024-25ರಲ್ಲಿ, 16 ವರ್ಷದ ಅಂಕಿತ್ ಚಟರ್ಜಿ ಬಂಗಾಳ ಪರ ಆಡುವ ಮೂಲಕ ಸೌರವ್ ಗಂಗೂಲಿಯ 35 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಅಂಕಿತ್ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಬಂಗಾಳದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ.

ಸೌರವ್ ಗಂಗೂಲಿಯ 35 ವರ್ಷಗಳ ಹಳೆಯ ದಾಖಲೆ ಮುರಿದ 10 ನೇ ತರಗತಿಯ ಅಂಕಿತ್ ಚಟರ್ಜಿ
ಸೌರವ್ ಗಂಗೂಲಿ, ಅಂಕಿತ್ ಚಟರ್ಜಿ
Follow us
ಪೃಥ್ವಿಶಂಕರ
|

Updated on:Jan 23, 2025 | 7:20 PM

ದೇಶೀ ಟೂರ್ನಿ ರಣಜಿ ಟ್ರೋಫಿ 2024-25 ರ ಲೀಗ್ ಹಂತದ ಎರಡನೇ ಹಂತವು ಇಂದಿನಿಂದ ಪ್ರಾರಂಭವಾಗಿದೆ. ಈ ಟೂರ್ನಿಯಲ್ಲಿ ಬಹಳ ವರ್ಷಗಳ ಬಳಿಕ ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ರಿಷಬ್ ಪಂತ್, ಶುಭ್​ಮನ್ ಗಿಲ್ ಆಡುತ್ತಿದ್ದಾರೆ. ಬಿಸಿಸಿಐನ ಖಡಕ್ ಸೂಚನೆ ಮೇರೆಗೆ ಟೀಂ ಇಂಡಿಯಾದ ಈ ಅನುಭವಿಗಳು ರಣಜಿ ಟ್ರೋಫಿಗೆ ಮರಳಿದ್ದಾರೆ. ಹೀಗಾಗಿ ಎಲ್ಲರ ಗಮನ ಈ ಖ್ಯಾತ ಆಟಗಾರರ ಮೇಲೆ ಕೇಂದ್ರೀಕೃತವಾಗಿರುವಾಗಲೇ 16 ವರ್ಷದ ಯುವ ಕ್ರಿಕೆಟರ್​ ಅದ್ಭುತ ದಾಖಲೆ ಮಾಡಿದ್ದಾನೆ. 10ನೇ ತರಗತಿ ಓದುತ್ತಿರುವ ಅಂಕಿತ್ ಚಟರ್ಜಿ, ಅನುಭವಿ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾನೆ.

ರಣಜಿ ಟ್ರೋಫಿಯ ಗುಂಪು ಹಂತದ ಪಂದ್ಯದಲ್ಲಿ ಇಂದು ಬಂಗಾಳ ಮತ್ತು ಹರಿಯಾಣ ತಂಡಗಳು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿ ಮುಖಾಮುಖಿಯಾಗಿದ್ದವು. ಮೊದಲ ದಿನವೇ ಬೆಂಗಾಲ್ ಬೌಲರ್‌ಗಳು ಮಾರಕ ದಾಳಿ ನಡೆಸಿ ಹರಿಯಾಣವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 157 ರನ್‌ಗಳಿಗೆ ಆಲೌಟ್ ಮಾಡಿದರು. ಬಂಗಾಳದ ಬೌಲರ್‌ಗಳ ಈ ಪವಾಡಕ್ಕೂ ಮುನ್ನ ಅಂಕಿತ್ ಚಟರ್ಜಿ ವಿಶೇಷ ದಾಖಲೆ ಮಾಡಿದ್ದರು. ವಾಸ್ತವವಾಗಿ, ಅವರು ಮೈದಾನಕ್ಕೆ ಕಾಲಿಟ್ಟ ತಕ್ಷಣ, ಅಂಕಿತ್ ಬಂಗಾಳದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

35 ವರ್ಷಗಳ ಹಳೆಯ ದಾಖಲೆ ಉಡೀಸ್

ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದಿದ್ದ ಅಂಕಿತ್, ಕೇವಲ 15 ವರ್ಷ ಮತ್ತು 361 ದಿನ ವಯಸ್ಸಿನಲ್ಲಿ ಬಂಗಾಳದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಅಂಕಿತ್, ಬಂಗಾಳದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಗಂಗೂಲಿ 35 ವರ್ಷಗಳ ಹಿಂದೆ ತಮ್ಮ 17 ನೇ ವಯಸ್ಸಿನಲ್ಲಿ 1990 ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಪಾದಾರ್ಪಣೆ ಮಾಡಿದ ದಾಖಲೆಯನ್ನು ಮಾಡುವುದರ ಜೊತೆಗೆ, ಅವರು ಬಂಗಾಳದ ಪ್ರಶಸ್ತಿ ಗೆಲುವಿನ ಭಾಗವಾಗಿದ್ದರು. ಇದೀಗ ಅಂಕಿತ್, ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶೇಷವೆಂದರೆ ಅಂಕಿತ್ ತಮ್ಮ ಹುಟ್ಟುಹಬ್ಬದ ಮುನ್ನವೇ (ಜನವರಿ 27) ಈ ಸಾಧನೆ ಮಾಡಿದ್ದಾರೆ.

ಜೂನಿಯರ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ

ಅಂಕಿತ್ ಪ್ರಸ್ತುತ ಬಂಗಾಳದ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವರು ಇತ್ತೀಚೆಗೆ ವಿನೂ ಮಂಕಡ್ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಅವಧಿಯಲ್ಲಿ ಅವರು 42ರ ಸರಾಸರಿಯಲ್ಲಿ 376 ರನ್ ಗಳಿಸಿದ್ದರು. ಇದಲ್ಲದೆ, 2024 ರಲ್ಲಿ ನಡೆದ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅವರ ಬ್ಯಾಟ್‌ನಿಂದ ಇದೇ ರೀತಿ ರನ್ ಬಂದಿದ್ದವು. ಈ ಟೂರ್ನಿಯಲ್ಲಿ ಅವರು 41 ರ ಸರಾಸರಿಯಲ್ಲಿ 325 ರನ್ ಗಳಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Thu, 23 January 25

ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ