ಭಾರತ ಕ್ರಿಕೆಟ್ ತಂಡ ಈ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship)ನಲ್ಲಿ ಫೈನಲ್ ತಲುಪಲಿದೆಯೇ? ಕಳೆದ ಕೆಲವು ದಿನಗಳಿಂದ ಈ ಪ್ರಶ್ನೆಯನ್ನು ಸಾಕಷ್ಟು ಕೇಳಲಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಈ ಪ್ರಶ್ನೆ ಹೆಚ್ಚು ಗಂಭೀರವಾಗಿದೆ. ಈ ಫೈನಲ್ ಪಂದ್ಯ ಮುಂದಿನ ವರ್ಷ ನಡೆಯಲಿದೆ. ಇದೀಗ ಟೀಂ ಇಂಡಿಯಾ (Team India) ಅದನ್ನು ತಲುಪುತ್ತದೋ ಇಲ್ಲವೋ ಎಂಬುದು ಮುಂದಿನ ವರ್ಷವಷ್ಟೇ ತಿಳಿಯಲಿದೆ. ಆದರೆ ಯಾವಾಗ 2023ರಲ್ಲಿ ಮತ್ತೆ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗುತ್ತದೆಯೋ, ಆಗ ಟೀಂ ಇಂಡಿಯಾ ಜೊತೆ ಯಾವ ತಂಡಗಳು ಕಣಕ್ಕಿಳಿಯಲಿವೆ ಎಂಬುದು ಖಚಿತವಾಗಿ ಗೊತ್ತಾಗಿದೆ. ಇದರ ಪ್ರಮುಖ ಮತ್ತು ರೋಚಕ ಅಂಶವೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಸಂಖ್ಯೆಗಳು ಮಾತ್ರ ಮೊದಲಿಗಿಂತ ಹೆಚ್ಚಾಗಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭವಿಷ್ಯದ ಕ್ರಿಕೆಟ್ ಪಂದ್ಯಾವಳಿಗಳು ಮತ್ತು 2023 ರಿಂದ 2027 ರ ನಡುವಿನ ಪಂದ್ಯಗಳಿಗಾಗಿ ಭವಿಷ್ಯದ ಪ್ರವಾಸ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಈ FTP ಕಾರ್ಯಕ್ರಮದಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು 2023 ರಿಂದ 2025 ಮತ್ತು 2025 ರಿಂದ 2027 ರ ನಡುವೆ 2 ಬಾರಿ ಆಯೋಜನೆಯಾಗಲಿದೆ.
ಕ್ರಿಕೆಟ್ ವೆಬ್‌ಸೈಟ್ ESPN-Cricinfo ICC ಯ ಕರಡು FTP ಯನ್ನು ಉಲ್ಲೇಖಿಸಿ, ಮೊದಲ ಮತ್ತು ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಂತೆ, ಪ್ರತಿ ತಂಡವು ಮುಂದಿನ ಎರಡು ಸುತ್ತುಗಳಲ್ಲಿ ತಲಾ 6 ಸರಣಿಗಳನ್ನು ಸಹ ಆಡುತ್ತವೆ. ನಾವು ಟೀಮ್ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ಭಾರತವು ಈ ಎರಡು ಸುತ್ತುಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಸರಣಿಯನ್ನು ತವರಿನಲ್ಲಿ ಮತ್ತು ತಲಾ ಒಂದನ್ನು ಅವರ ನೆಲದಲ್ಲಿ ಆಡಬೇಕಾಗಿದೆ. ಇವುಗಳಲ್ಲದೆ, ತಂಡವು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳ ವಿರುದ್ಧವೂ ಸೆಣಸಲಿದೆ.
ಆಸ್ಟ್ರೇಲಿಯಾದ ಎದುರು 5 ಟೆಸ್ಟ್‌ಗಳ ಸರಣಿ
ಈಗ ಇದರಲ್ಲಿ ಪ್ರಮುಖವಾದ ವಿಷಯವೆಂದರೆ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ ತಲಾ 5 ಪಂದ್ಯಗಳ (ಒಂದು ಟೆಸ್ಟ್ ಸರಣಿ ಭಾರತದಲ್ಲಾದರೆ, ಇನ್ನೊಂದು ಟೆಸ್ಟ್ ಸರಣಿ ಅವರ ನೆಲದಲ್ಲಿ ನಡೆಯಲಿದೆ) ಟೆಸ್ಟ್‌ಗಳ ಸರಣಿಯನ್ನು ಮಾತ್ರ ಆಡಲಿದೆ. ಜೊತೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಲಾ 5 ಟೆಸ್ಟ್‌ಗಳ ಸರಣಿ (ಒಂದು ಟೆಸ್ಟ್ ಸರಣಿ ಭಾರತದಲ್ಲಾದರೆ, ಇನ್ನೊಂದು ಟೆಸ್ಟ್ ಸರಣಿ ಅವರ ನೆಲದಲ್ಲಿ ನಡೆಯಲಿದೆ) ನಡೆಯಲಿದೆ. ಈ ಸರಣಿಯಲ್ಲಿ ಇಲ್ಲಿಯವರೆಗೆ ತಲಾ 4 ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತಿತ್ತು. 1992ರ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಲಾ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿರುವುದು ಇದೇ ಮೊದಲು. ಭಾರತ ತಂಡ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ.
ಎರಡು ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಸರಣಿ
ಸದ್ಯಕ್ಕೆ ಸಿದ್ಧಪಡಿಸಿರುವ ಎಫ್‌ಟಿಪಿಯ ಕರಡು ಪ್ರಕಾರ, ಭಾರತ ತಂಡವು 2023 ರಿಂದ 2025 ರವರೆಗೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅವರ ನೆಲದಲ್ಲೇ ಸ್ಪರ್ಧಿಸಲಿದೆ. ನಾವು 2025-2027ರ ಟೆಸ್ಟ್ ಚಾಂಪಿಯನ್‌ಶಿಪ್ ಬಗ್ಗೆ ಮಾತನಾಡುವುದಾದರೆ, ಈ ಸಮಯದಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಗಾಗಿ ಭಾರತಕ್ಕೆ ಬರುತ್ತವೆ. ಹಾಗೆಯೇ ಟೀಮ್ ಇಂಡಿಯಾ ಉಳಿದ 3 ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಾಗುತ್ತದೆ.
Published On - 10:29 pm, Sat, 16 July 22