ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC ಐಸಿಸಿ), ಮುಂದಿನ ವರ್ಷ ಆಸ್ಟ್ರೇಲಿಯಾ (Australia) ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ (ICC T20 World Cup 2022) ದಿನಾಂಕವನ್ನು ಪ್ರಕಟ ಮಾಡಿದೆ. ಇದರ ಪ್ರಕಾರ ಅಕ್ಟೋಬರ್ 16ರಿಂದ ಏಳನೇ ಆವೃತ್ತಿಯ ಟಿ20 ವಿಶ್ವಕಪ್ ಮಹಾಸಮಯ ಆರಂಭವಾಗಲಿದೆ. ಏಳು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯಕ್ಕೆ ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ, Melbourne Cricket Ground) ಸಾಕ್ಷಿಯಾಗಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಆಡಲಿದ್ದು, 2021ರ ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಆಡಿದ 12 ತಂಡಗಳು ನೇರ ಅರ್ಹತೆ ಪಡೆದಿವೆ. ಇನ್ನು 4 ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಯಲಿದೆ.
ಕಾಂಗರೂಗಳ ನಾಡಿನ ಅಡಿಲೇಡ್, ಬ್ರಿಸ್ಬೇನ್, ಗಿಲಾಂಗ್, ಹೋಬರ್ಟ್, ಮೆಲ್ಬರ್ನ್, ಪರ್ತ್ ಹಾಗೂ ಸಿಡ್ನಿಯಲ್ಲಿ ಅ. 16ರಿಂದ ನ. 13ರ ವರೆಗೆ ಒಟ್ಟು 45 ಹಣಾಹಣಿ ನಡೆಯಲಿವೆ. ಸಿಡ್ನಿ ಮತ್ತು ಅಡಿಲೇಡ್ ಕ್ರೀಡಾಂಗಣಗಳಲ್ಲಿ ನವೆಂಬರ್ 9 ಮತ್ತು 10ರಂದು ಸೆಮಿಫೈನಲ್ಸ್ ನಿಗದಿ ಮಾಡಲಾಗಿವೆ. 2020 ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಮೆಲ್ಬೋರ್ನ್ನಲ್ಲಿ ನಡೆದಿದ್ದು 86,174 ರ ದಾಖಲೆಯ ಪ್ರೇಕ್ಷಕರು ಈ ಪಂದ್ಯವನ್ನು ವೀಕ್ಷಿಸಿದ್ದರು.
The world’s attention turns to Australia for the 2022 ICC Men’s #T20WorldCup
Register now for priority access to tickets ? https://t.co/RKL9QWr8HR pic.twitter.com/seoBojqgXH
— ICC (@ICC) November 16, 2021
ಇನ್ನು 2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್–ಅಪ್ ನ್ಯೂಜಿಲೆಂಡ್ ಜೊತೆಗೆ ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್–12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಉಳಿದ ನಾಲ್ಕು ತಂಡಗಳು ಗುಂಪು ಹಂತದಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಲಿವೆ.
ಈ ಪೈಕಿ 2012 ಮತ್ತು 2016ರಲ್ಲಿ ಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ, 2021ರ ಟೂರ್ನಿಯ ಸೂಪರ್-12 ಹಂತದಲ್ಲಿ ಆಡಿರುವ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಗುಂಪು–1ರಲ್ಲಿ ಸೆಣಸಲಿವೆ.
India vs New Zealand: ಭಾರತ ವಿರುದ್ಧದ ಟಿ20 ಸರಣಿ: ನ್ಯೂಜಿಲೆಂಡ್ಗೆ ದೊಡ್ಡ ಆಘಾತ: ನಾಯಕನಿಂದ ಮಹತ್ವದ ತೀರ್ಮಾನ
(ICC has confirmed the dates and venues for T20 World Cup 2022 will be held seven cities in Australia)