AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH ತಂಡದಿಂದ ವಾರ್ನರ್​ ಕೈಬಿಡಲು ಕಾರಣವೇ ಬೇರೆ ಎಂದ ಕೋಚ್

IPL 2021: ಈ ಬಾರಿಯ ಐಪಿಎಲ್​​ನ ಮೊದಲಾರ್ಧದ ಅವಧಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ವಾರ್ನರ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಇದಾಗ್ಯೂ ಯುಎಇನಲ್ಲಿ ನಡೆದ ದ್ವಿತಿಯಾರ್ಧದಲ್ಲೂ ವಾರ್ನರ್ ಕಾಣಿಸಿಕೊಂಡಿದ್ದರು.

SRH ತಂಡದಿಂದ ವಾರ್ನರ್​ ಕೈಬಿಡಲು ಕಾರಣವೇ ಬೇರೆ ಎಂದ ಕೋಚ್
David Warner
TV9 Web
| Edited By: |

Updated on: Nov 16, 2021 | 3:02 PM

Share

ಐಪಿಎಲ್​ 2021ರಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದ ಡೇವಿಡ್ ವಾರ್ನರ್ ಟಿ20 ವಿಶ್ವಕಪ್​ನಲ್ಲಿ ಅಬ್ಬರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಚೊಚ್ಚಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ವಾರ್ನರ್ ಯಶಸ್ವಿಯಾಗಿದ್ದರು. ಇದೀಗ ಸನ್​ರೈಸರ್ಸ್​ ಹೈದರಾಬಾದ್​ ತಂಡದಿಂದ ವಾರ್ನರ್ ಅವರನ್ನು ಕೈಬಿಟ್ಟಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ವಾರ್ನರ್ ಅವರನ್ನು ತಂಡದಿಂದ ಕೈಬಿಡದಿರಲು ಅಸಲಿ ಕಾರಣವೇನು ಎಂಬುದನ್ನು ಎಸ್​ಆರ್​ಹೆಚ್​ ತಂಡದ ಸಹಾಯಕ ಕೋಚ್ ಬ್ರಾಡ್ ಹಡ್ಡಿನ್ ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಹಡ್ಡಿನ್, ಕಳಪೆ ಫಾರ್ಮ್‌ನಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ಆಡುವ XI ನಿಂದ ವಾರ್ನರ್ ಅವರನ್ನು ಕೈಬಿಡಲಿಲ್ಲ ಎಂದಿದ್ದಾರೆ. ಅವರನ್ನು ಆಡುವ ಇಲೆವೆನ್‌ನಿಂದ ಹೊರಗಿಡಲು ಕಾರಣ ಬೇರೆಯದೇ ಇದೆ ಎಂದು ತಿಳಿಸಿದ್ದಾರೆ. ಇದಾಗ್ಯೂ ಆ ಕಾರಣವೇನು ಎಂಬುದನ್ನು ಬಹಿರಂಗಪಡಿಸಲು ಹಡ್ಡಿನ್ ನಿರಾಕರಿಸಿದರು. ಹಡ್ಡಿನ್ ಅವರ ಈ ಹೇಳಿಕೆಯು, ವಾರ್ನರ್ ಅವರನ್ನು ತೆಗೆದುಹಾಕುವ ನಿರ್ಧಾರವನ್ನು SRH ಮಾಲೀಕರು ತೆಗೆದುಕೊಂಡಿರಬಹುದು ಎಂಬುದನ್ನು ಸೂಚಿಸಿದೆ.

“ಡೇವಿ (ವಾರ್ನರ್) ಫಾರ್ಮ್​ನಿಂದ ಹೊರಗಿರಲಿಲ್ಲ. ಅವರು ಅಭ್ಯಾಸ ಮಾಡಿರಲಿಲ್ಲ ಅಷ್ಟೇ. ಕೋವಿಡ್-19 ಕಾರಣದಿಂದಾಗಿ ಅವರು ಸುದೀರ್ಘ ವಿರಾಮದಲ್ಲಿದ್ದರು. ಅವರು ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಸರಣಿಯಲ್ಲಿ ಭಾಗವಹಿಸಿರಲಿಲ್ಲ. ದೀರ್ಘಾವಧಿಯ ವಿರಾಮದ ಬಳಿಕ ಅವರು ಅಭ್ಯಾಸ ಕೊರತೆ ಅನುಭವಿಸಿದ್ದರು. ಅವರಿಗೆ ಎಂದಿನಂತೆ ಬ್ಯಾಟ್ ಬೀಸಲು ಕೆಲವು ಪಂದ್ಯಗಳು ಬೇಕಾಗಿದ್ದವು. T20 ವಿಶ್ವಕಪ್‌ನಲ್ಲಿ ನೋಡಿದಂತೆ, ವಾರ್ನರ್ ಕೆಲವು ಪಂದ್ಯಗಳ ನಂತರ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಎಂದು ಹಡ್ಡಿನ್ ತಿಳಿಸಿದರು.

ಈ ಬಾರಿಯ ಐಪಿಎಲ್​​ನ ಮೊದಲಾರ್ಧದ ಅವಧಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವು ವಾರ್ನರ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದರು. ಇದಾಗ್ಯೂ ಯುಎಇನಲ್ಲಿ ನಡೆದ ದ್ವಿತಿಯಾರ್ಧದಲ್ಲೂ ವಾರ್ನರ್ ಕಾಣಿಸಿಕೊಂಡಿದ್ದರು. ಆದರೆ ಅವರನ್ನು 2 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲಾಗಿತ್ತು. ಆ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಆದರೆ ಐಪಿಎಲ್​ ಮುಕ್ತಾಯದ ಬೆನ್ನಲ್ಲೇ ಶುರುವಾದ ಟಿ20 ವಿಶ್ವಕಪ್​ನಲ್ಲಿ ವಾರ್ನರ್ 7 ಪಂದ್ಯಗಳಿಂದ 289 ರನ್ ಕಲೆಹಾಕಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್​: ಚಾಂಪಿಯನ್​ ಪಟ್ಟಕ್ಕೇರಿದ 6 ತಂಡಗಳು

ಇದನ್ನೂ ಓದಿ:  Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!

(Why was David Warner dropped during IPL 2021? SRH coach Brad Haddin reveals!)