India vs New Zealand: ಭಾರತ ವಿರುದ್ಧದ ಟಿ20 ಸರಣಿ: ನ್ಯೂಜಿಲೆಂಡ್​ಗೆ ದೊಡ್ಡ ಆಘಾತ: ನಾಯಕನಿಂದ ಮಹತ್ವದ ತೀರ್ಮಾನ

India vs New Zealand: ಭಾರತ ವಿರುದ್ಧದ ಟಿ20 ಸರಣಿ: ನ್ಯೂಜಿಲೆಂಡ್​ಗೆ ದೊಡ್ಡ ಆಘಾತ: ನಾಯಕನಿಂದ ಮಹತ್ವದ ತೀರ್ಮಾನ
Kane Williamson India vs New Zealand

Kane Williamson to miss T20 series vs India: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಇವರ ಬದಲು ತಂಡವನ್ನು ಟಿಮ್ ಸೌಥೀ ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿದ್ದಾರೆ.

TV9kannada Web Team

| Edited By: Vinay Bhat

Nov 16, 2021 | 11:08 AM

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿ (T20 Series) ಆರಂಭಕ್ಕೆ ಇನ್ನೇನು ಒಂದು ದಿನವಷ್ಟೆ ಬಾಕಿಯಿದೆ. ನವೆಂಬರ್ 17 ಬುಧವಾರದಂದು ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಆದರೆ, ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್ ಪಡೆಗೆ ದೊಡ್ಡ ಆಘಾತ ಉಂಟಾಗಿದೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಭಾರತ ವಿರುದ್ಧದ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಇವರ ಬದಲು ತಂಡವನ್ನು ಟಿಮ್ ಸೌಥೀ (Tim Southee) ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿದ್ದಾರೆ. ”ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಕೇನ್ ವಿಲಿಯಮ್ಸನ್ ಅಲಭ್ಯರಾಗಲಿದ್ದಾರೆ. ಈ ಪಂದ್ಯ ಬುಧವಾರ, ಶುಕ್ರವಾರ ಮತ್ತು ಭಾನುವಾರ ನಡೆಯಲಿದೆ. ಇದು ಅವರ ವೈಕ್ತಿಕ ನಿರ್ಧಾರವಾಗಿದೆ. ಟಿ20 ಸರಣಿ ಬಳಿಕ ನಡೆಯಲಿರುವ ಟೆಸ್ಟ್ ಸರಣಿ ಮೇಲೆ ಹೆಚ್ಚು ಗಮನ ಹರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ ನ್ಯೂಜಿಲೆಂಡ್​ಗೆ ಮತ್ತೊಂದು ಆಘಾತ ಉಂಟಾಗಿತ್ತು. ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್ವೆ ಟಿ20 ವಿಶ್ವಕಪ್ ಸೆಮಿಫೈನಲ್​ ಪಂದ್ಯದ ವೇಳೆ ಔಟಾದ ಹತಾಶೆಯಲ್ಲಿ ತಮ್ಮ ಬ್ಯಾಟ್​ಗೆ ಜೋರಾಗಿ ಗುದ್ದಿದ್ದರಿಂದ ಬಲಗೈ ಕಿರು ಬೆರಳಿನ ಮೂಳೆ ಮುರಿದಿತ್ತು. ಇದರಿಂದ ಇವರು ಫೈನಲ್ ಪಂದ್ಯ ಆಡಲಿಲ್ಲ. ಅಲ್ಲದೆ ಭಾರತ ವಿರುದ್ಧದ ಸರಣಿಯಿಂದಲೂ ಹೊರಗುಳಿಯಬೇಕಾಯಿತು. ಇವರ ಬದಲಿಗೆ ಡೇರಿಲ್ ಮಿಚೆಲ್ ಅವರು ಸ್ಥಾನ ಪಡೆದಿದ್ದಾರೆ.

ಭಾರತ ವಿರುದ್ಧ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳೊಂದಿಗೆ ಕಿವೀಸ್​ ಪ್ರವಾಸವನ್ನು ಆರಂಭಿಸಲಿದ್ದು, ಈಗಾಗಲೇ ಭಾರತಕ್ಕೆ ಬಂದಿಳಿದಿದೆ. ಮೊದಲ ಟಿ20 ನವೆಂಬರ್ 17ರಂದು ಜೈಪುರ, ಬಳಿಕ 19ರಂದು ರಾಂಚಿ ಮತ್ತು 21ರಂದು ಕೋಲ್ಕತ್ತಾದಲ್ಲಿ ಇನ್ನೆರಡು ಪಂದ್ಯಗಳು ನಡೆಯಲಿವೆ. ತದನಂತರ ಎರಡು ಟೆಸ್ಟ್​ ಪಂದ್ಯಗಳ ಸರಣಿಯ ಮೊದಲ ಪಂದ್ಯ ನವೆಂಬರ್ 25ರಿಂದ ಕಾನ್ಪುರ ಹಾಗೂ ಡಿಸೆಂಬರ್ 3ರಿಂದ ಮುಂಬೈನಲ್ಲಿ ಎರಡನೇ ಟೆಸ್ಟ್ ಪಂದ್ಯವು ಆಯೋಜನೆಗೊಂಡಿದೆ.

ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಕ್ವಾಡ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿ.ಕೀ.), ರಿಷಭ್ ಪಂತ್ (ವಿ.ಕೀ.), ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಆರ್ ಅಶ್ವಿನ್, ಯುಜವೇಂದ್ರ ಚಹಲ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್.

ನ್ಯೂಜಿಲೆಂಡ್ ಟಿ20 ತಂಡ: ಟಿಮ್ ಸೌಥೀ (ನಾಯಕ), ಟಾಡ್ ಆಸ್ಲೆ, ಮಾರ್ಟಿನ್ ಗಪ್ಟಿಲ್, ಡರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚಲ್ ಸ್ಯಾಂಟ್ನರ್, ಟಿಮ್ ಸೇಫರ್ಟ್, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲಾಕೀ ಫರ್ಗೂಸನ್, ಅಡಮ್ ಮಿಲ್ನೆ, ಈಶ್ ಸೋಧಿ.

Hardik Pandya: 5 ಕೋಟಿ ರೂ. ವಾಚ್ ಏರ್ಪೋರ್ಟ್​ನಲ್ಲಿ ಜಪ್ತಿ: ಟ್ವಿಟ್ಟರ್​ನಲ್ಲಿ ಖಡಕ್ ಆಗಿ ಸ್ಪಷ್ಟನೆ ಕೊಟ್ಟ ಹಾರ್ದಿಕ್ ಪಾಂಡ್ಯ

Yuzvendra Chahal: ಟಿ20 ವಿಶ್ವಕಪ್​ಗೆ ಆಯ್ಕೆಯಾಗದ ಬಗ್ಗೆ ಮೌನ ಮುರಿದ ಯುಜ್ವೇಂದ್ರ ಚಹಾಲ್: ಏನಂದ್ರು ಗೊತ್ತೇ?

(Kane Williamson will miss the three-match T20I series against India Tim Southee to captain)

Follow us on

Related Stories

Most Read Stories

Click on your DTH Provider to Add TV9 Kannada