Mohammad Rizwan: ನಾನು ಆಸ್ಪತ್ರೆ ತಲುಪುವುದು 20 ನಿಮಿಷ ತಡವಾಗಿದ್ದರೆ…: ಬೆಚ್ಚಿ ಬೀಳಿಸುವ ನೈಜ್ಯ ಘಟನೆ ತೆರೆದಿಟ್ಟ ಮೊಹಮ್ಮದ್ ರಿಜ್ವಾನ್

Mohammad Rizwan, T20 World Cup: ನನ್ನ ಎರಡು ಟ್ಯೂಬ್‌ಗಳು ಸಹ ಸ್ಥಗಿತಗೊಂಡಿವೆ ಎಂಬ ಬಗ್ಗೆ ತಿಳಿಸಿದ್ದರು. ನಾನು 20 ನಿಮಿಷ ತಡವಾಗಿದ್ದರೆ, ಅನಾಹುತವೇ ಆಗುತ್ತಿತ್ತು ಎಂದು ಪಾಕಿಸ್ತಾನ ತಂಡದ ಆಟಗಾರ ಮೊಹಮ್ಮ್ ರಿಜ್ವಾನ್ ಹೇಳಿದ್ದಾರೆ.

Mohammad Rizwan: ನಾನು ಆಸ್ಪತ್ರೆ ತಲುಪುವುದು 20 ನಿಮಿಷ ತಡವಾಗಿದ್ದರೆ...: ಬೆಚ್ಚಿ ಬೀಳಿಸುವ ನೈಜ್ಯ ಘಟನೆ ತೆರೆದಿಟ್ಟ ಮೊಹಮ್ಮದ್ ರಿಜ್ವಾನ್
Mohammad Rizwan
Follow us
TV9 Web
| Updated By: Vinay Bhat

Updated on: Nov 16, 2021 | 12:39 PM

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (T20 World Cup) ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (Pakistan vs Australia) ತಂಡ ಸೋತು ಟೂರ್ನಿಯಿಂದ ಹೊರಬಿದ್ದರೂ ತಂಡದ ಆಟಗಾರ ಮೊಹಮ್ಮದ್ ರಿಜ್ವಾನ್ (Mohammad Rizwan) ಎಲ್ಲರ ಮನ ಗೆದ್ದಿದ್ದರು. ಪಂದ್ಯ ಆರಂಭದ ಹಿಂದಿನ ರಾತ್ರಿಯ ವರೆಗೂ ಐಸಿಯುನಲ್ಲಿ ಇದ್ದರೂ ಮಹತ್ವದ ದಿನ ದೇಶಕ್ಕಾಗಿ ಆಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಸುದ್ದಿ ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಈಗ ಸ್ವತಃ ರಿಜ್ವಾನ್ ಅವರೇ ಈ ಘಟನೆ ಕುರಿತು ಇಂಚಿಂಚು ಮಾಹಿತಿ ಹೊರಹಾಕಿದ್ದಾರೆ. ನಾನು ಅವತ್ತು ಆಸ್ಪತ್ರೆಗೆ 20 ನಿಮಿಷ ತಡವಾಗಿ ತಲುಪಿದ್ದರೆ ಅನಾಹುತವೇ ಆಗುತ್ತಿತ್ತು ಎಂದು ಹೇಳಿದ್ದಾರೆ. ತಂಡಕ್ಕಾಗಿ ಪ್ರದರ್ಶನ ನೀಡಲು ನಾನು ನಿರ್ಧರಿಸಿದರ ಪರಿಣಾಮವೇ ಆದಷ್ಟು ಬೇಗ ಚೇತರಿಕೆ ಕಾಣಲು ನೆರವಾಯಿತು ಎಂಬುದು ರಿಜ್ವಾನ್ ನಂಬಿಕೆ.

”ಸೆಮಿ ಫೈನಲ್ ಪಂದ್ಯ ಆರಂಭಕ್ಕೂ ಎರಡು ದಿನ ಮೊದಲು ನನಗೆ ಹುಷಾರಿರಲಿಲ್ಲ, ನಾನು ಆಸ್ಪತ್ರೆಗೆ ಹೋಗುತ್ತಿದ್ದೆ. ನನ್ನ ಜೊತೆ ನನ್ನ ಕುಟುಂಬ ಹೋಟೆಲ್‌ನಲ್ಲಿತ್ತು. ಮೊದಲಿಗೆ ನಾನು ಹೋಟೆಲ್‌ನಲ್ಲಿ ಇಸಿಜಿಗಾಗಿ ಕೆಳಗೆ ಹೋಗಿದ್ದಾಗ, ಆಸ್ಪತ್ರೆಗೆ ತೆರಳಬೇಕಾಯಿತು. ಆ ಸಂದರ್ಭ ನನಗೆ ಉಸಿರಾಡಲು ಕೂಡ ಕಷ್ಟವಾಗುತ್ತಿತ್ತು. ಈ ವಿಚಾರವನ್ನು ನಾನು ಅವರಿಗೆ ಹೇಳಿದೆ. ಆದರೆ, ವೈದ್ಯರು ನನಗೆ ಏನಾಯಿತು ಎಂದು ಪೂರ್ತಿ ಮಾಹಿತಿ ಹೇಳುತ್ತಿರಲಿಲ್ಲ. ನನ್ನ ಎರಡು ಟ್ಯೂಬ್‌ಗಳು ಸಹ ಸ್ಥಗಿತಗೊಂಡಿವೆ ಎಂಬ ಬಗ್ಗೆ ತಿಳಿಸಿದ್ದರು. ನಾನು 20 ನಿಮಿಷ ತಡವಾಗಿದ್ದರೆ, ಅನಾಹುತವೇ ಆಗುತ್ತಿತ್ತು ಎಂದು ನರ್ಸ್​ನ ಬಳಿ ಕೇಳಿದಾಗ ಅವರು ಹೇಳಿದರು.”

ಮಾತು ಮುಂದುವರೆಸಿದ ಅವರು, “ನನಗೆ ವೈದ್ಯರ ಮಾತುಗಳು ಇನ್ನೂ ನೆನಪಿದೆ. ನಾನು ಪಾಕಿಸ್ತಾನಕ್ಕಾಗಿ ಸೆಮಿಫೈನಲ್‌ನಲ್ಲಿ ಆಡಬೇಕೆಂದು ಅವರು ಬಯಸುತ್ತಾರೆ ಎಂದು ಹೇಳಿದರು. ಆದರೆ ನಿಮ್ಮ ಸ್ಥಿತಿ ಚೆನ್ನಾಗಿಲ್ಲ ಅಂತ ಅವರು ಹೇಳಿದಾಗ ಪಂದ್ಯದ ನಂತರ ನನಗೆ ಏನಾದರೂ ಸಂಭವಿಸಿದರೆ, ನಾನು ನಿರಾಶೆಗೊಳ್ಳುವುದಿಲ್ಲ ಏಕೆಂದರೆ ಎಲ್ಲವೂ ಪಾಕಿಸ್ತಾನಕ್ಕಾಗಿ ಎಂದು ನಾನು ಅವರಿಗೆ ಹೇಳಿದೆ. ಇದು ಅವರಿಗೂ ಉತ್ತೇಜನ ನೀಡಿತು ಮತ್ತು ನಂತರ ಅವರು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುವ ಕೆಲಸಗಳನ್ನು ಮಾಡಿದರು” ಎಂದು ಮೊಹಮ್ಮದ್ ರಿಜ್ವಾನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ರಿಜ್ವಾನ್‌ ಅವರಿಗೆ ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಭಾರತ ಮೂಲದ ವೈದ್ಯ ಶಹೀರ್ ಸೈನಾಲಬ್ದಿನ್. ಅವರು ಅಷ್ಟು ಬೇಗನೆ ಚೇತರಿಸಿಕೊಂಡ ಬಗ್ಗೆ ಸ್ವತಃ ಶಹೀರ್ ಅವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ರಿಜ್ವಾನ್ ಅವರು 35 ಗಂಟೆಗಳ ಕಾಲ ಐಸಿಯುನಲ್ಲೇ ಇದ್ದರು ಎಂದು ಹೇಳಿದ್ದರು. ಇದೇವೇಳೆ ನಾನು ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ನನಗೆ ಅವರು ಪಾಕಿಸ್ತಾನದ ಜೆರ್ಸಿ ಮೇಲೆ ಸಹಿ ಮಾಡಿ ಉಡುಗೊರೆಯಾಗಿ ನೀಡಿದರು ಎಂದು ವೈದ್ಯರು ಹೇಳಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್(67) ಹಾಗೂ ಫಖರ್ ಜಮಾನ್(55) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು 176 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಆದರೆ, ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿ ಫೈನಲ್‌ಗೆ ಲಗ್ಗೆಯಿಟ್ಟು, ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

T20 World Cup 2022: ಆಸ್ಟ್ರೇಲಿಯಾನ್ನರ ನಾಡಿನಲ್ಲಿ 2022ರ ಟಿ20 ವಿಶ್ವಕಪ್​: ದಿನಾಂಕ ಪ್ರಕಟಿಸಿದ ಐಸಿಸಿ, ನ. 13ಕ್ಕೆ ಮೆಲ್ಬರ್ನ್​ನಲ್ಲಿ ಫೈನಲ್

India vs New Zealand: ಭಾರತ ವಿರುದ್ಧದ ಟಿ20 ಸರಣಿ: ನ್ಯೂಜಿಲೆಂಡ್​ಗೆ ದೊಡ್ಡ ಆಘಾತ: ನಾಯಕನಿಂದ ಮಹತ್ವದ ತೀರ್ಮಾನ

(Pakistan Cricketer Mohammad Rizwan has shared details of the unforgattable horrible ICU experience)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್