ಆಗಸ್ಟ್ 18, 2022ರ ಬುಧವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2027ರವರೆಗಿನ ಕ್ರಿಕೆಟ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ 5 ಪಂದ್ಯಗಳು ಈ ವೇಳಾಪಟ್ಟಿಯ ಪ್ರಮುಖ ಅಂಶವಾಗಿದೆ. 30 ವರ್ಷಗಳ ನಂತರ ಐಸಿಸಿ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಾಂಪ್ರದಾಯಿಕ ಟೆಸ್ಟ್ ಸರಣಿಯ ಸ್ವರೂಪವನ್ನು ಮರಳಿ ತಂದಿದೆ. 5 ವರ್ಷಗಳ ಅವಧಿಯಲ್ಲಿ (2023-2027), 12 ದೇಶಗಳು ವಿವಿಧ ದ್ವಿಪಕ್ಷೀಯ ಮತ್ತು ICC ಈವೆಂಟ್‌ಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ICC ಯ ಭವಿಷ್ಯದ ಪ್ರವಾಸ ಕಾರ್ಯಕ್ರಮಗಳ (FTP) ವೇಳಾಪಟ್ಟಿಯ ಪ್ರಕಾರ, 173 ಟೆಸ್ಟ್, 281 ಏಕದಿನ ಮತ್ತು 323 T20 ಪಂದ್ಯಗಳು ಒಳಗೊಂಡಂತೆ ಒಟ್ಟು 777 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗುತ್ತದೆ. ಹೀಗಾಗಿ ಇದುವರೆಗೆ ಇದ್ದ 694 ಅಂತರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಗಿಂತ, ಈಗಿನ ವೇಳಾಪಟ್ಟಿಯಲ್ಲಿ ಪಂದ್ಯಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
Men’s Future Tour Program for 2023-27 announced ?
Details ?https://t.co/33MN4USU6L
— ICC (@ICC) August 17, 2022
30 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 5 ಟೆಸ್ಟ್ ಪಂದ್ಯಗಳು
ಆಡಲಿರುವ ಎಲ್ಲಾ ದ್ವಿಪಕ್ಷೀಯ ಸರಣಿಗಳ ಹೊರತಾಗಿ ICC ಕೆಲವು ಪ್ರಮುಖ ಯೋಜನೆಗಳು ಮತ್ತು ಪಂದ್ಯಾವಳಿಗಳನ್ನು ಘೋಷಣೆ ಮಾಡಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯೊಂದಿಗೆ ಮುಂದಿನ FTP ಪ್ರಾರಂಭವಾಗುತ್ತದೆ. ಬಾರ್ಡರ್-ಗಾವಸ್ಕರ್ ಸರಣಿ ಈ ಬಾರಿ 5 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರುವುದರಿಂದ ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಎರಡೂ ದೇಶಗಳು ತಮಗೆ ನಿಗದಿಪಡಿಸಿದ ಆಯಾ ಸಮಯದಲ್ಲಿ ಸರಣಿಯನ್ನು ಆಯೋಜಿಸುತ್ತವೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಮತ್ತು ಭಾರತ ಮುಖಾಮುಖಿಯಾಗುತ್ತಿರುವುದು 30 ವರ್ಷಗಳ ನಂತರ ಇದೇ ಮೊದಲು. ಇದಕ್ಕೂ ಮುನ್ನ 1992ರಲ್ಲಿ ಎರಡೂ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು.
Five-Test series between Australia and India feature heavily in the ICC’s new Future Tours Program.
More: https://t.co/AKz7uXJ2CU pic.twitter.com/0CV5szJC2S
— cricket.com.au (@cricketcomau) August 17, 2022
ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ, ಭಾರತ ಮತ್ತು ಇಂಗ್ಲೆಂಡ್ ಕೂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಟ್ಟು 63 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಇಂಗ್ಲೆಂಡ್ 22 ಟೆಸ್ಟ್, ಆಸ್ಟ್ರೇಲಿಯಾ 21 ಟೆಸ್ಟ್ ಮತ್ತು ಭಾರತ 20 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
Australia will tour India five times before the end of the next Future Tours Program.
Every men’s series by opponent listed: https://t.co/HGVOEosyzE
— cricket.com.au (@cricketcomau) August 17, 2022
ಎರಡು T20 ವಿಶ್ವಕಪ್
ವೆಸ್ಟ್ ಇಂಡೀಸ್ ಮತ್ತು ಯುಎಸ್ಎ 2024 ರ T20 ವಿಶ್ವಕಪ್ ಅನ್ನು ಆಯೋಜಿಸಲಿವೆ. 2025 ರ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸುವ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ವಹಿಸಲಾಗಿದೆ. ಹಾಗೆಯೇ ಭಾರತ ಮತ್ತು ಶ್ರೀಲಂಕಾ 2026 ರ ICC T20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಅಲ್ಲದೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು 2027 ರಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ.
Published On - 4:24 pm, Wed, 17 August 22