T20 World Cup: ಟಿ-20 ವಿಶ್ವಕಪ್​ನಲ್ಲಿ ಈ ಮೂವರು ಆಟಗಾರರು ಅಪಾಯಕಾರಿ ಎಂದ ದಿನೇಶ್ ಕಾರ್ತಿಕ್

| Updated By: Vinay Bhat

Updated on: Aug 20, 2021 | 11:17 AM

ಸದ್ಯ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್‌ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಬಲ್ಲ ಪ್ರಮುಖ 3 ಆಟಗಾರರು ಯಾರೆಂಬುದನ್ನು ಆಯ್ಕೆ ಮಾಡಿದ್ದಾರೆ.

T20 World Cup: ಟಿ-20 ವಿಶ್ವಕಪ್​ನಲ್ಲಿ ಈ ಮೂವರು ಆಟಗಾರರು ಅಪಾಯಕಾರಿ ಎಂದ ದಿನೇಶ್ ಕಾರ್ತಿಕ್
Dinesh Karthik
Follow us on

ಐಸಿಸಿ ಟಿ-20 ವಿಶ್ವಕಪ್ (T20 World Cup) ಟೂರ್ನಿಯ ಆರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಎರಡು ದಿನಗಳ ಹಿಂದೆಯಷ್ಟೆ ಐಸಿಸಿ ವೇಳಾಪಟ್ಟಿಯನ್ನು ಕೂಡ ಪ್ರಕಟಮಾಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಕೆಲ ತಂಡಗಳು ಈಗಾಗಲೇ ಆಟಗಾರರ ಹೆಸರನ್ನು ಕೂಡ ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ ಮೊದಲ ವಾರದಲ್ಲಿ 15 ಮಂದಿ ಸದಸ್ಯರ ಹೆಸರನ್ನು ಬಹಿರಂಗ ಪಡಿಸಲಿದೆ. ಹೀಗಿರುವಾಗ ಟಿ-20 ವಿಶ್ವಕಪ್ ಕುರಿತ ಚರ್ಚೆಗಳು ಶುರು ಆಗಿದೆ.

ಸದ್ಯ ಟೀಮ್ ಇಂಡಿಯಾದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್‌ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಬಲ್ಲ ಪ್ರಮುಖ 3 ಆಟಗಾರರು ಯಾರೆಂಬುದನ್ನು ಆಯ್ಕೆ ಮಾಡಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾಜಿ ಮಹಿಳಾ ಕ್ರಿಕೆಟರ್‌ ಇಸಾ ಗುಹಾ ಮತ್ತು ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಡರೆನ್‌ ಸಾಮಿ ಅವರೊಟ್ಟಿಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿನೇಶ್‌ ಕಾರ್ತಿಕ್, ವೆಸ್ಟ್‌ಇಂಡೀಸ್‌ನ ನಿಕೋಲಸ್‌ ಪೂರನ್‌, ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ ಮತ್ತು ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

“ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಆ ಕ್ರಮಾಂಕದಲ್ಲಿದ್ದಾಗ ಅವರು ಯಾವಾಗಲೂ ತಂಡದ ಗೆಲುವಿಗೆ ನಿರ್ಣಾಯಕ ಪಾತ್ರವಹಿಸುತ್ತಾರೆ. ಆತ ಉಸಿರು ಬಿಗಿಹಿಡಿದುಕೊಳ್ಳುವ ರೀತಿಯಲ್ಲಿ ಪಂದ್ಯವನ್ನು ಎದುರಾಳಿ ಕಡೆಯಿಂದ ತನ್ನತ್ತ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಂತಾ ಅದ್ಭುತವಾದ ಆಟಗಾರ ಆತ” ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರೆ.

“ನನ್ನ ಪ್ರಕಾರ ನಿಕೋಲಸ್‌ ಪೂರನ್‌ ಕೂಡ ಅತ್ಯಂತ ವಿಶೇಷ ಆಟಗಾರ. ಅವರ ಬ್ಯಾಟಿಂಗ್‌ ಕಂಡರೆ ವೃತ್ತಿ ಬದುಕು ಅಂತ್ಯಗೊಳಿಸುವ ಹೊತ್ತಿಗೆ ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರನಾಗಿ ಬೆಳೆದಿರುತ್ತಾನೆ ಎಂದು ಹೇಳಬಹುದು. ಈತನಲ್ಲಿ ಬ್ಯಾಟ್ ಬೀಸುವ ಅದ್ಭುತ ಕಲೆಗಾರಿಕೆ ಇದೆ. ಎಲ್ಲರಿಗಿಂತಲೂ ದೂರಕ್ಕೆ ಚೆಂಡನ್ನು ಬಡಿದಟ್ಟಬಲ್ಲರು. ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ,” ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಪ್ರಬಲ ತಂಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಹದಿನಾಲ್ಕು ಆವೃತ್ತಿಯ ಐಪಿಎಲ್ ಪಂದ್ಯಗಳು ನಡೆದಿದೆ. ಇಂತಾ ಸಂದರ್ಭದಲ್ಲಿ ನಮ್ಮ ತಂಡದಲ್ಲಿ ಸಾಕಷ್ಟು ಮಂದಿ ಟಿ20 ಕ್ರಿಕೆಟ್‌ನ ಅಪಾರ ಅನುಭವವನ್ನು ಹೊಂದಿದವರಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

IPL 2021: ಆರ್​ಸಿಬಿಗೆ ಬಿಗ್ ಶಾಕ್: ತಂಡದ ಸ್ಟಾರ್ ಆಟಗಾರ ಐಪಿಎಲ್ 2021 ರಿಂದಲೇ ಹೊರಕ್ಕೆ

IND vs ENG 3rd Test: ಮೂರನೇ ಟೆಸ್ಟ್​ನಲ್ಲಿ ಚೇತೇಶ್ವರ್ ಪೂಜಾರ ಬದಲು ಕಣಕ್ಕಿಳಿಯುವ ಆಟಗಾರ ಇವರೇ ನೋಡಿ

(ICC T20 World Cup 2021 Dinesh Karthik names his picks for top three players to watch out for at T20 World Cup)