ಕಾಣೆಯಾಗಿರುವ ರೋಲರ್ ವಾಪಸ್ಸು ಕೊಡುವಂತೆ ಕಾಶ್ಮೀರ ಮತ್ತು ಭಾರತದ ಮಾಜಿ ಕ್ರಿಕೆಟರ್ ಪರ್ವೇಜ್ ರಸೂಲ್ಗೆ ನೋಟೀಸ್
ಜೆಕೆಸಿಎ ಆಡಳಿತವನ್ನು ಬಿಸಿಸಿಐ ನಿರ್ವಹಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಹೈಕೋಟ್ ಆದೇಶಿಸಿದ ನಂತರ ಜೂನ್ನಲ್ಲಿ ಉಪಸಮಿತಿ ಆಸ್ತಿತ್ವಕ್ಕೆ ಬಂದಿದೆ. ಗುಪ್ತಾ ಅವರೊಂದಿಗೆ ಕ್ರಿಕೆಟರ್ ಮಿಥುನ್ ಮನ್ಹಾಸ್ ಮತ್ತು ವಕೀಲ ಸುನೀಲ್ ಸೇಠಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಕಾಣೆಯಾಗಿರುವ ಒಂದು ಪಿಚ್ ರೋಲರ್ನಿಂದಾಗಿ ಭಾರತದ ಮಾಜಿ ಆಟಗಾರ ಪರ್ವೇಜ್ ರಸೂಲ್ ಅವರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯೊಂದಿಗೆ (ಜೆಕೆಸಿಎ) ಒಂದು ವಿಚಿತ್ರ ಕಲಹಕ್ಕಿಳಿಯುವಂತಾಗಿದೆ. ಜೆಕೆಸಿಎ, ರಸೂಲ್ಗೆ ನೋಟೀಸೊಂದನ್ನು ಕಳಿಸಿ ರೋಲರ್ ಅನ್ನು ವಾಪಸ್ಸು ಮಾಡದಿದ್ದರೆ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ನೋಟೀಸಿಗೆ ಉತ್ತರ ನೀಡಿರುವ ರಸೂಲ್ ತಾನು ರೋಲರ್ ತೆಗೆದುಕೊಂಡಿಲ್ಲವೆಂದು ಹೇಳಿರುವುದಲ್ಲದೆ, ಜಮ್ಮು ಮತ್ತು ಕಾಶ್ಮೀರ್ ಕ್ರಿಕೆಟ್ಗೆ ಪ್ರಾಣವನ್ನೇ ಮುಡುಪಾಗಿಟ್ಟ ಒಬ್ಬ ಅಂತರರಾಷ್ಟ್ರೀಯ ಆಟಗಾರರನನ್ನು ನಡೆಸಿಕೊಳ್ಳುವ ರೀತಿಯೇ ಇದು ಸಂಸ್ಥೆಯ ಆಡಳಿತ ವರ್ಗವನ್ನು ಪ್ರಶ್ನಿಸಿದ್ದಾರೆ.
ಪರಿಸ್ಥಿತಿ ಯಾವ ಸ್ಥಿತಿ ತಲುಪಿದೆಯೆಂದರೆ, ಜೆಕೆಸಿಎ ಅನ್ನು ನಡೆಸಲು ಬಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ರಚಿಸಿರುವ ಉಪ ಸಮಿತಿಯ ಮೂವರು ಸದಸ್ಯರಲ್ಲಿ ಒಬ್ಬರಾಗಿರುವ ಬಿಜೆಪಿಯ ಬಾತ್ಮೀದಾರ ಬ್ರಿಗೇಡಿಯರ್ (ನಿವೃತ್ತ) ಅನಿಲ್ ಗುಪ್ತಾ ಅವರು, ರಸೂಲ್ ವಿರುದ್ದ ಕ್ರಮ ಜರುಗಿಸಲು ಸಾಕ್ಷಾಧ್ಯಾರಗಳಿವೆಯೇ ಎಂದು ತಮ್ಮ ಈಮೇಲ್ನಲ್ಲಿ ಬರೆದಿದ್ದಾರೆ. ತಮ್ಮ ಮೇಲ್ ಅನ್ನು ಗುಪ್ತಾ ಅವರು ಇತರ ಆಡಳಿತಾಧಿಕಾರಿಗಳ ಜೊತೆಗೆ ರಸೂಲ್ಗೂ ಮಾರ್ಕ್ ಮಾಡಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತಾಡಿರುವ ಗುಪ್ತಾ ಅವರು ವಿಷಯವನ್ನು ವಿನಾಕಾರಣ ಹೈಪ್ ಮಾಡಲಾಗುತ್ತಿದೆ, ಜಿಲ್ಲಾ ಕ್ರಿಕೆಟ್ ಸಂಸ್ಥೆಗಳ ವಿಳಾಸ ಲಭ್ಯವಿರಲಿಲ್ಲ ಮತ್ತು ರಸೂಲ್ ಅವರ ಅಡ್ರೆಸ್ ಜೆಕೆಸಿಎನಲ್ಲಿದ್ದ ಕಾರಣ ಅವರಿಗೆ ಮೇಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಸೂಲ್ ಅವರು ಅನಂತನಾಗ್ ಜಿಲ್ಲೆಯ ಬಿಜ್ಬೆಹಾರಾ ಪ್ರಾಂತ್ಯದವರಾಗಿದ್ದಾರೆ. ಜೆಕೆಸಿಎ ಮೊದಲಿಗೆ ಬಿಜ್ಬೆಹಾರಾದ ಮಹಮ್ಮದ್ ಶಫಿ ಅವರಿಗೆ ನೋಟೀಸ ಕಳಿಸಿ ನಂತರ ರಸೂಲ್ ಅವರಿಗೆ ಕಳಿಸಿದೆ. ಸಂಸ್ಥೆಯ ದಾಖಲೆಗಳಲ್ಲಿ ರಸೂಲ್ ವಿಳಾಸ ಇದ್ದ ಕಾರಣ ಅವರಿಗೆ ನೋಟೀಸ್ ಕಳಿಸಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.
‘ನಾವು ಕೇವಲ ರಸೂಲ್ಗೆ ಮಾತ್ರ ನೋಟೀಸ್ ಕಳಿಸಿಲ್ಲ, ಶ್ರೀನಗದಿಂದ ಜೆಕೆಸಿಇಯ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿರುವ ಎಲ್ಲ ಜಿಲ್ಲಾ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಗಳಿಗೆ ಯಾವುದೇ ವೋಚರ್ ಇಲ್ಲದೆ ಮಶೀನರಿಯನ್ನು ವಿತರಿಸಲಾಗಿದೆ. ಮೇಲಿಂಗ್ ಅಡ್ರೆಸ್ ಇಲ್ಲದ ಜಿಲ್ಲಾ ಕೇಂದ್ರಗಳಿಗೆ ಅಲ್ಲಿನ ಉಸ್ತುವಾರಿಯಾಗಿರುವವರಿಗೆ ಪತ್ರಗಳನ್ನು ಬರೆಯಲಾಗಿದೆ. ತನಗೆ ಮೇಲ್ ಕಳಿಸಿದ್ದನ್ನು ರಸೂಲ್ ಅಪರಾಧವೆಂದು ಭಾವಿಸಿದ್ದಾರೆ,’ ಎಂದು ಗುಪ್ತಾ ಹೇಳಿದ್ದಾರೆ.
‘ನಾವು ಆಡಿಟ್ ರಿಫೋರ್ಟ್ ತಯಾರಿಸಬೇಕಿರುವ ಕಾರಣ ನೋಟೀಸ್ಗಳನ್ನು ಕಳಿಸಿದ್ದೇವೆ. ಲೆಜರ್ನಲ್ಲಿರುವ ಎಲ್ಲ ದಾಖಳೆಗಳನ್ನು ನಾವು ಒದಗಿಸಬೇಕಾಗುತ್ತದೆ. ಆದರೆ ಹಲವಾರು ವರ್ಷಗಳಿಂದ ಜೆಕೆಸಿಎನಲ್ಲಿ ಯಾವುದೇ ದಾಖಲೆಯನ್ನು ಮೆಂಟೇನ್ ಮಾಡಿಲ್ಲ. ಕೋರ್ಟ್ ಅದೇಶದ ಮೇರೆಗೆ ನಾವು ಆಡಳಿತವವನ್ನು ಕೈಗೆತ್ತಿಕೊಂಡಾಗ ಯಂತ್ರೋಪಕರಣಗಳು ಇಲ್ಲದಿರುವುದು ಗಮನಕ್ಕೆ ಬಂತು, ಎಂದು ಗುಪ್ತಾ ಹೇಳಿದ್ದಾರೆ.
ಜೆಕೆಸಿಎ ಆಡಳಿತವನ್ನು ಬಿಸಿಸಿಐ ನಿರ್ವಹಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಹೈಕೋಟ್ ಆದೇಶಿಸಿದ ನಂತರ ಜೂನ್ನಲ್ಲಿ ಉಪಸಮಿತಿ ಆಸ್ತಿತ್ವಕ್ಕೆ ಬಂದಿದೆ. ಗುಪ್ತಾ ಅವರೊಂದಿಗೆ ಕ್ರಿಕೆಟರ್ ಮಿಥುನ್ ಮನ್ಹಾಸ್ ಮತ್ತು ವಕೀಲ ಸುನೀಲ್ ಸೇಠಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ರಸೂಲ್ಗೆ ಕಳಿಸಿರುವ ಮೇಲ್ನಲ್ಲಿ ಜೆಕೆಸಿಎ ಸಮಿತಿ ಸದಸ್ಯರು ಎಂದು ಸಹಿ ಮಾಡಲಾಗಿದ್ದು ಅದರಲ್ಲಿ ಪೊಲೀಸ್ ಕ್ರಮದ ಬಗ್ಗೆ ಎಚ್ಚರಿಸಲಾಗಿದೆ.
‘ಜೆಕೆಸಿಎ ಮಶೀನರಿ ನಿಮ್ಮಲ್ಲಿ ಇಟ್ಟುಕೊಂಡಿರುವಿರಿ. ಸಂಸ್ಥೆಯೊಂದಿಗಿನ ನಿಮ್ಮ ಸಂಬಂಧ ಹಾಳಾಗದಂತಿಬೇಕಾದರೆ ಮತ್ತು ಸಂಸ್ಥೆಯು ನಿಮ್ಮ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬಾರದೆಂದು ನೀವು ಅಂದುಕೊಳ್ಳುವುದಾದರೆ ಕೂಡಲೇ ಸಂಸ್ಥೆಯ ಮಶೀನರಿಯನ್ನು ಒಂದು ವಾರದೊಳಗಾಗಿ ಕೂಡಲೇ ಹಿಂತಿರುಗಿಸಿರಿ ತಪ್ಪಿದರೆ ಜೆಕೆಸಿಎ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ, ಎಂದು ಹೇಳಲಾಗಿದೆ.
ಜಿಲ್ಲಾ ಸಂಸ್ಥೆಗಳಿಗೆ ಕಳಿಸಿರುವ ಎರಡನೇ ನೋಟೀಸ್ನಲ್ಲಿ ಪೊಲೀಸ್ ಕ್ರಮದ ಬಗ್ಗೆ ಎಚ್ಚರಿಸಲಾಗಿದೆ, ಯಾಕೆಂದರೆ, ಕೆಲ್ಲ ಜಿಲ್ಲಾ ಸಂಸ್ಥೆಗಳು ಮೊದಲ ನೋಟೀಸ್ ಸ್ವೀಕರಿಸಿದ ನಂತರ ಅದು ತಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ, ಎಂದು ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 13 ವರ್ಷ ಪೂರೈಸಿದ ಕಿಂಗ್ ಕೊಹ್ಲಿ! ವಿರಾಟ್ ವೃತ್ತಿ ಬದುಕು ಹೀಗಿದೆ