Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 13 ವರ್ಷ ಪೂರೈಸಿದ ಕಿಂಗ್ ಕೊಹ್ಲಿ! ವಿರಾಟ್ ವೃತ್ತಿ ಬದುಕು ಹೀಗಿದೆ

13 Years of Virat Kohli:ಕೊಹ್ಲಿ ಇದುವರೆಗೆ 94 ಟೆಸ್ಟ್ ಪಂದ್ಯಗಳಲ್ಲಿ 7609 ರನ್ ಗಳಿಸಿದ್ದಾರೆ, ಇದರಲ್ಲಿ 27 ಶತಕಗಳು ಮತ್ತು 25 ಅರ್ಧ ಶತಕಗಳು ಸೇರಿವೆ. 254 ಏಕದಿನ ಪಂದ್ಯಗಳಲ್ಲಿ, ಅವರು 43 ಶತಕಗಳು ಮತ್ತು 62 ಅರ್ಧ ಶತಕಗಳ ಸಹಾಯದಿಂದ 12169 ರನ್ ಗಳಿಸಿದ್ದಾರೆ.

Virat Kohli: ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 13 ವರ್ಷ ಪೂರೈಸಿದ ಕಿಂಗ್ ಕೊಹ್ಲಿ! ವಿರಾಟ್ ವೃತ್ತಿ ಬದುಕು ಹೀಗಿದೆ
ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Aug 18, 2021 | 3:23 PM

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 13 ವರ್ಷಗಳನ್ನು ಪೂರೈಸಿದ್ದಾರೆ. ಈ ದಿನದಂದು 13 ವರ್ಷಗಳ ಹಿಂದೆ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದರು. 18 ಆಗಸ್ಟ್ 2018 ರಂದು, ವಿರಾಟ್ ಕೊಹ್ಲಿ 19 ನೇ ವಯಸ್ಸಿನಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಿದರು. ಆ ಪಂದ್ಯದಲ್ಲಿ ಕೊಹ್ಲಿ ಕೇವಲ 12 ರನ್ ಗಳಿಸಿದರು, ಆದರೆ ಅದರ ನಂತರ ಮುಂದಿನ ದಶಕದಲ್ಲಿ ಅವರು ಶತಕದ ಮೇಲೆ ಶತಕ ಗಳಿಸಿ ವಿಶ್ವದಾದ್ಯಂತ ಕ್ರಿಕೆಟ್ ಮೈದಾನದಲ್ಲಿ ತನ್ನ ಅಬ್ಬರ ಆರಂಭಿಸಿದರು.

ಕೊಹ್ಲಿಯ ನಾಯಕತ್ವದಲ್ಲಿ, ಭಾರತ ತಂಡವು 2008 ರ ಅಂಡರ್ -19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂದಿನಿಂದ, ಅವರು ಪ್ರವರ್ಧಮಾನಕ್ಕೆ ಬಂದಿದ್ದಲದೆ, ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದರು. ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕವು ಈಗಾಗಲೇ ದೈತ್ಯರಿಂದ ತುಂಬಿದ್ದರೂ, ಸರಣಿ ಆರಂಭವಾಗುವ ಮುನ್ನವೇ ತಂಡದ ಆರಂಭಿಕರಾದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಗಾಯಗೊಂಡರು, ಇದರಿಂದಾಗಿ ಕೊಹ್ಲಿಗೆ ಆರಂಭಿಕ ಹಂತದಲ್ಲಿ ಅವಕಾಶ ನೀಡಲಾಯಿತು. ಅವರು ಸರಣಿಯ ನಾಲ್ಕನೇ ಪಂದ್ಯದಲ್ಲಿ ಮೊದಲ ಅರ್ಧಶತಕ ಗಳಿಸಿದರು ಮತ್ತು 66 ಎಸೆತಗಳಲ್ಲಿ 54 ರನ್ ಗಳಿಸಿದರು. ಕೊಹ್ಲಿ ಇಡೀ ಸರಣಿಯ 5 ಪಂದ್ಯಗಳಲ್ಲಿ 159 ರನ್ ಗಳಿಸಿದರು.

ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಜೇಯ 79 ರನ್ ಇದರ ನಂತರ, ಕೊಹ್ಲಿ ಒಂದು ವರ್ಷ ತಂಡದಿಂದ ಹೊರಗುಳಿದರು ಮತ್ತು ಸೆಪ್ಟೆಂಬರ್ 2009 ರಲ್ಲಿ ತಂಡಕ್ಕೆ ಮರಳಿದರು. ಜೋಹಾನ್ಸ್‌ಬರ್ಗ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಜೇಯ 79 ರನ್​ಗಳ ಸಹಾಯದಿಂದ ಪಂದ್ಯದ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಕೇವಲ 3 ತಿಂಗಳ ನಂತರ, ಡಿಸೆಂಬರ್ 2009 ರಲ್ಲಿ, ಕೊಹ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೊದಲ ಶತಕ ಗಳಿಸಿದರು. ಇಲ್ಲಿಂದ, ಕೊಹ್ಲಿ ಟೀಮ್ ಇಂಡಿಯಾದ ನಿಯಮಿತ ಸದಸ್ಯರಾಗಿ ನಂತರದ ದಿನಗಳಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಆದರು.

ಏಕದಿನ ಯಶಸ್ಸಿನ ನಂತರ, ವಿರಾಟ್‌ಗೆ ಟಿ 20 ತಂಡದಲ್ಲಿ ಸ್ಥಾನ ನೀಡಲಾಯಿತು. 12 ಜೂನ್ 2010 ರಂದು, ಜಿಂಬಾಬ್ವೆ ಪ್ರವಾಸದಲ್ಲಿ, ಕೊಹ್ಲಿ ತನ್ನ ಮೊದಲ ಟಿ 20 ಪಂದ್ಯವನ್ನು ಆಡಿದರು. ಅಲ್ಲಿ 21 ಎಸೆತಗಳಲ್ಲಿ ಔಟಾಗದೆ 26 ರನ್ ಗಳಿಸಿದರು. ಕೊಹ್ಲಿ ಟಿ 20 ಯಲ್ಲಿ ಮೊದಲ ಅರ್ಧಶತಕವು ಎರಡು ವರ್ಷಗಳ ನಂತರ ಬಂದಿತು. 2012 ರ ಅಕ್ಟೋಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಪಲ್ಲೇಕಲ್‌ನಲ್ಲಿ 48 ಎಸೆತಗಳಲ್ಲಿ 68 ರನ್ ಗಳಿಸಿದರು.

ಟೆಸ್ಟ್ ಪಂದ್ಯಕ್ಕಾಗಿ 3 ವರ್ಷ ಕಾಯಬೇಕಾಯಿತು ವಿರಾಟ್ ತನ್ನ ಮೊದಲ ಟೆಸ್ಟ್ ಪಂದ್ಯಕ್ಕಾಗಿ 3 ವರ್ಷ ಕಾಯಬೇಕಾಯಿತು. 2011 ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸದಸ್ಯರಾಗಿದ್ದ ಕೊಹ್ಲಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಶೀಘ್ರದಲ್ಲೇ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದಾಗ್ಯೂ, ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ, ಅವರು ಎರಡೂ ಇನ್ನಿಂಗ್ಸ್‌ನಲ್ಲಿ ಕೇವಲ 4 ಮತ್ತು 15 ರನ್ ಗಳಿಸಿದರು. ಆದಾಗ್ಯೂ, 6 ತಿಂಗಳು ಮತ್ತು 7 ಪಂದ್ಯಗಳ ನಂತರ, ಕೊಹ್ಲಿ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಅಡಿಲೇಡ್​ನಲ್ಲಿ ನಡೆದ ಕೊನೆಯ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 112 ರನ್ ಗಳಿಸಿದ್ದರು.

ಕಳೆದ 13 ವರ್ಷಗಳಲ್ಲಿ, ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್‌ನಿಂದ ನಾಯಕನಾಗಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದ್ದಾರೆ. ಜೊತೆಗೆ ಅನೇಕ ಹಳೆಯ ದಾಖಲೆಗಳನ್ನು ಮುರಿದಿದ್ದಾರೆ ಮತ್ತು ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೊಹ್ಲಿ ಇದುವರೆಗೆ 94 ಟೆಸ್ಟ್ ಪಂದ್ಯಗಳಲ್ಲಿ 7609 ರನ್ ಗಳಿಸಿದ್ದಾರೆ, ಇದರಲ್ಲಿ 27 ಶತಕಗಳು ಮತ್ತು 25 ಅರ್ಧ ಶತಕಗಳು ಸೇರಿವೆ. ಅದೇ ಸಮಯದಲ್ಲಿ, 254 ಏಕದಿನ ಪಂದ್ಯಗಳಲ್ಲಿ, ಅವರು 43 ಶತಕಗಳು ಮತ್ತು 62 ಅರ್ಧ ಶತಕಗಳ ಸಹಾಯದಿಂದ 12169 ರನ್ ಗಳಿಸಿದ್ದಾರೆ. ಟಿ 20 ಮಾದರಿಯಲ್ಲಿ ಕೊಹ್ಲಿಗೆ ಯಾವುದೇ ಶತಕ ಗಳಿಸಲು ಸಾಧ್ಯವಾಗಲಿಲ್ಲ, ಆದರೆ 90 ಪಂದ್ಯಗಳಲ್ಲಿ 28 ಅರ್ಧ ಶತಕಗಳ ನೆರವಿನಿಂದ 3159 ರನ್ ಗಳಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಮೂರು ಮಾದರಿಗಳಲ್ಲಿ 50 ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ.

ಮೋದಿ ಬೆಂಗಾವಲು ವಾಹನ ರಿಹರ್ಸಲ್ ಮಾಡುತ್ತಿದ್ದ ರಸ್ತೆಯಲ್ಲಿ ಅಡ್ಡ ಬಂದ ಸೈಕಲ್
ಮೋದಿ ಬೆಂಗಾವಲು ವಾಹನ ರಿಹರ್ಸಲ್ ಮಾಡುತ್ತಿದ್ದ ರಸ್ತೆಯಲ್ಲಿ ಅಡ್ಡ ಬಂದ ಸೈಕಲ್
ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಸಮರ್ಥಿಸಿಕೊಂಡ ಡಿಸಿಎಂ
ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಸಮರ್ಥಿಸಿಕೊಂಡ ಡಿಸಿಎಂ
ಯುವತಿ ಜತೆ ಬೈಕ್​ನಲ್ಲಿ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್​
ಯುವತಿ ಜತೆ ಬೈಕ್​ನಲ್ಲಿ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್​
ಎಲ್ಲರಲ್ಲೂ ದೇವರಿದ್ದಾನೆ, ಎಲ್ಲರಿಗೂ ಒಳ್ಳೇದು ಮಾಡುತ್ತಾನೆ: ಸಿಟಿ ರವಿ
ಎಲ್ಲರಲ್ಲೂ ದೇವರಿದ್ದಾನೆ, ಎಲ್ಲರಿಗೂ ಒಳ್ಳೇದು ಮಾಡುತ್ತಾನೆ: ಸಿಟಿ ರವಿ
VIDEO: ನೀ ನಿನ್ ಕೆಲ್ಸ ನೋಡ್ಕೊ... ಹರ್ಮನ್​ಪ್ರೀತ್ ಕೌರ್ ಆವಾಜ್
VIDEO: ನೀ ನಿನ್ ಕೆಲ್ಸ ನೋಡ್ಕೊ... ಹರ್ಮನ್​ಪ್ರೀತ್ ಕೌರ್ ಆವಾಜ್
ಸರಿಗಮಪ ವೇದಿಕೆ ಮೇಲೆ 28 ವರ್ಷಗಳ ಬಳಿಕ ತಮ್ಮದೇ ಚಿತ್ರದ ಹಾಡು ಕೇಳಿದ ರಮೇಶ್
ಸರಿಗಮಪ ವೇದಿಕೆ ಮೇಲೆ 28 ವರ್ಷಗಳ ಬಳಿಕ ತಮ್ಮದೇ ಚಿತ್ರದ ಹಾಡು ಕೇಳಿದ ರಮೇಶ್
ಚಿಕಿತ್ಸೆ ಬೇಕಂದ್ರೆ ಇಲಿಗಳ ಜತೆ ಮಲಗುವುದು ಅನಿವಾರ್ಯ
ಚಿಕಿತ್ಸೆ ಬೇಕಂದ್ರೆ ಇಲಿಗಳ ಜತೆ ಮಲಗುವುದು ಅನಿವಾರ್ಯ
ಮನೆಯಲ್ಲಿನ ಆರತಿಯ ಮಹತ್ವ ಮತ್ತು ಪದ್ಧತಿಗಳು ತಿಳಿಯಿರಿ
ಮನೆಯಲ್ಲಿನ ಆರತಿಯ ಮಹತ್ವ ಮತ್ತು ಪದ್ಧತಿಗಳು ತಿಳಿಯಿರಿ
Daily Horoscope: ಶನಿವಾರ, ಈ ದಿನ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily Horoscope: ಶನಿವಾರ, ಈ ದಿನ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಸಾರಾ ಗೋವಿಂದು ಕಡೆಯವರಿಂದ ನಿರ್ಮಾಪಕ ನರಸಿಂಹ ರಾಜು ಮೇಲೆ ಅಟ್ಯಾಕ್?
ಸಾರಾ ಗೋವಿಂದು ಕಡೆಯವರಿಂದ ನಿರ್ಮಾಪಕ ನರಸಿಂಹ ರಾಜು ಮೇಲೆ ಅಟ್ಯಾಕ್?