AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಆಟಗಾರರ ಹುಮ್ಮಸ್ಸು ಟೀಮ್ ಇಂಡಿಯಾಗೆ ಓವರ್ಸೀಸ್ ಟೆಸ್ಟ್​​ಗಳನ್ನು ಗೆಲ್ಲಲು ನೆರವಾಗುತ್ತಿದೆ: ಇಂಜಮಾಮ್ ಉಲ್ ಹಕ್

ಭಾರತ ಸಾಧಿಸಿದ ಭರ್ಜರಿ ಜಯ ಇಂಜಮಾಮ್ ಅವರಿಗೆ ಭಾರಿ ಖುಷಿ ನೀಡಿದೆ. ಒಂದು ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅವರ ತಂಡ ಅಲ್ಲಿಂದ ಪುಟಿದೆದ್ದು ಅಂತಿಮವಾಗಿ ಪಂದ್ಯ ಗೆಲ್ಲುವಲ್ಲಿ ತೋರಿದ ಧೋರಣೆ ಅಪ್ರತಿಮವಾದದ್ದು ಎಂದು ಅವರು ಹೇಳಿದ್ದಾರೆ.

ಯುವ ಆಟಗಾರರ ಹುಮ್ಮಸ್ಸು ಟೀಮ್ ಇಂಡಿಯಾಗೆ ಓವರ್ಸೀಸ್ ಟೆಸ್ಟ್​​ಗಳನ್ನು ಗೆಲ್ಲಲು ನೆರವಾಗುತ್ತಿದೆ: ಇಂಜಮಾಮ್ ಉಲ್ ಹಕ್
ಇಂಜಮಾಮ್​ ಉಲ್​ ಹಕ್​
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Aug 18, 2021 | 1:53 AM

Share

ಸೋಮವಾರ ಲಂಡನ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 151 ರನ್ಗಳ ಭಾರೀ ಮತ್ತು ಅಧಿಕಾರಯುತ ಜಯ ಸಾಧಿಸಿದ ವಿರಾಟ್ ಕೊಹ್ಲಿ ಅವರ ಟೀಮ್ ಇಂಡಿಯಾವನ್ನು ಪಾಕಿಸ್ತಾನದ ಮಾಜಿ ನಾಯಕ ಹಾಗೂ ತನ್ನ ಜಮಾನಾದ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದಇಂಜಮಾಮ್ ಉಲ್ ಹಕ್ ಅವರು ಮನಸಾರೆ ಕೊಂಡಾಡಿದ್ದಾರೆ. ಪ್ರಸಕ್ತ 5-ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ನ ಕೊನರು ದಿನ ಕ್ರೀಡೆಯ ಎಲ್ಲ ವಿಭಾಗಗಳಲ್ಲಿ ಎದರಾಳಿ ಆಂಗ್ಲರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ಸ್ಮರಣಿಯ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಇಂಡಿಯದ ಟೇಲ್ ಎಂಡರ್​ಗಳು ಅಸಾಧಾರಣ ಬ್ಯಾಟಿಂಗ್ ಕೌಶಲ್ಯವನ್ನು ಮೆರೆದು ಭಾರತವನ್ನು ಸುಸ್ಥಿತಿಗೆ ಕೊಂಡ್ಯೊಯ್ದರು. ಪಂದ್ಯದ ಕೊನೆಯ ದಿನದಾಟದ ಅರಂಭದಲ್ಲೇ ಇಂಗ್ಲೆಂಡ್ ಬೌಲರ್​ಗಳು ಎರಡು ವಿಕೆಟ್ ಪಡೆದು ಮೇಲುಗೈ ಸಾಧಿಸಿದರು. ಆದರೆ ಮೊಹಮ್ಮದ್ ಶಮಿ ಮತ್ರು ಜಸ್ಪ್ರೀತ್ ಬುಮ್ರಾ ಮುರಿಯದ 9 ನೇ ವಿಕೆಟ್ ಜೊತೆಯಾಟದಲ್ಲಿ 89 ಅಮೂಲ್ಯ ರನ್ ಸೇರಿಸಿದರು. ಗೆಲ್ಲ್ಲಲು 272 ರನ್​ಗಳ ಗುರಿ ನೀಡಿ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಅದಕ್ಕೆ ಉತ್ತರವಾಗಿ ಭಾರತದ ಮಾರಕ ಬೌಲಿಂಗ್ ಎದುರು ತತ್ತರಿಸಿದ ಅತಿಥೇಯರು ಕೇವಲ 120 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡರು.

ಭಾರತ ಸಾಧಿಸಿದ ಭರ್ಜರಿ ಜಯ ಇಂಜಮಾಮ್ ಅವರಿಗೆ ಭಾರಿ ಖುಷಿ ನೀಡಿದೆ. ಒಂದು ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಅವರ ತಂಡ ಅಲ್ಲಿಂದ ಪುಟಿದೆದ್ದು ಅಂತಿಮವಾಗಿ ಪಂದ್ಯ ಗೆಲ್ಲುವಲ್ಲಿ ತೋರಿದ ಧೋರಣೆ ಅಪ್ರತಿಮವಾದದ್ದು ಎಂದು ಅವರು ಹೇಳಿದ್ದಾರೆ.

‘ಇಂಡಿಯ ನಿಸ್ಸಂದೇಹವಾಗಿ ಒಂದು ಅಮೋಘ ಗೆಲುವನ್ನು ದಾಖಲಿಸಿದೆ. ಇಂಥ ಗೆಲುವುಗಳು ಅಪರೂಪಕ್ಕೊಮ್ಮೆ ನೋಡಲು ಸಿಗುತ್ತವೆ,’ ಎಂದು ತಮ್ಮ ಯೂಟ್ಯೂಬ್​​ನಲ್ಲಿ ಇಂಜಮಾಮ್ ಹೇಳಿದ್ದಾರೆ.

‘ಯುವ ಆಟಗಾರರು ಇಂಡಿಯ ಟೀಮಿನ ಭಾಗವಾದ ನಂತರ ಅವರು ಮೈದಾನದಲ್ಲಿ ತೋರುತ್ತಿರುವ ಹುಮ್ಮಸ್ಸು ಮತ್ತು ಗೆಲ್ಲುವ ತುಡಿತದಿಂದಾಗಿ ಟೀಮ್ ಇಂಡಿಯ ಬೇರೆ ದೇಶಗಳಲ್ಲೂ ಯಶ ಕಾಣಲಾರಂಭಿಸಿದೆ. ಯಾವುದೇ ದೇಶ ಹೊರಗಿನ ದೇಶಗಳಲ್ಲೂ ಪಂದ್ಯಗಳನ್ನು ಗೆಲ್ಲುತ್ತಿದ್ದರೆ ಅದು ಬಹಳ ಪ್ರಬಲ ತಂಡವೆಂದೇ ಆರ್ಥ. ಸ್ವದೇಶದ ಪಿಚ್ಗಳ ಮೇಲೆ ಗೆಲ್ಲುವುದು ದೊಡ್ಡ ಸಂಗತಿಯೇನಲ್ಲ. ಆದರೆ, ಎದುರಾಳಿಯನ್ನು ಅದರ ನೆಲದಲ್ಲೇ ಸೋಲಿಸುವುದು ಶ್ರೇಷ್ಠ ತಂಡದ ಕುರುಹಾಗಿದೆ,’ ಎಂದು ಇಂಜಮಾಮ್ ಹೇಳಿದ್ದಾರೆ.

‘ಯಾವುದೇ ಒಂದು ತಂಡದ ಬಲ ಅದರ ಟೇಲ್ ಎಂಡರ್​ಗಳು ಬ್ಯಾಟ್ ಮಾಡುವ ಮತ್ತು ರನ್ ಗಳಿಸುವ ಸಾಮರ್ಥ್ಯದ ಮೇಲೆ ಗೊತ್ತಾಗುತ್ತದೆ. ಅವರು ಹೋರಾಟ ನಡೆಸಿದಾಗಲೇ ಟೀಮಿನ ಕ್ಷಮತೆ ಬಹಿರಂಗವಾಗುತ್ತದೆ. ತನ್ನ ಮೇಲಿನ ಕ್ರಮಾಂಕದ ಆಟಗಾರರು ಕಡಿಮೆ ಸ್ಕೋರ್ ಗಳಿಸಿ ಔಟಾದರೂ ಶಮಿ 50 ರನ್ ಗಳಿಸಿ ಟೀಮಿಗೆ ಆಸರೆಯಾದರು ಬುಮ್ರಾ ಅವರೊಂದಿಗೆ ಶಮಿಯ ಜೊತೆಗಾರಿಕೆ ಪಂದ್ಯದಲ್ಲಿ ನಿರ್ಣಾಯಕವಾಯಿತು ಮತ್ತು ಇಂಗ್ಲೆಂಡ್ ಟೀಮಿನ ಬೆನ್ನೆಲುಬು ಮುರಿಯಲು ನೆರವಾಯಿತು,’ ಎಂದು ಇಂಜಮಾಮ್ ಹೇಳಿದ್ದಾರೆ.

‘ನಾಟಿಂಗ್​ಹ್ಯಾಮ್​ನಲ್ಲಿ ನಡೆದ ಮೊದಲ ಟೆಸ್ಟ್ ಗೆಲ್ಲುವ ಅತ್ಯುತ್ತಮ ಅವಕಾಶ ಇಂಡಿಯಾಗಿತ್ತು. ಆದರೆ ಟೆಸ್ಟ್ನ ಕೊನೆಯ ಮಳೆ ಇಂಡಿಯ ಗೆಲುವಿಗೆ ಅಡ್ಡಿಯಾಯಿತು. ಆ ಗೆಲುವನ್ನು ಮಿಸ್ ಮಾಡಿಕೊಂಡ ಕೊಹ್ಲಿ ಪಡೆಗೆ ಪುರಸ್ಕಾರದ ರೂಪದಲ್ಲಿ ಎರಡನೇ ಟೆಸ್ಟ್ನಲ್ಲಿ ಜಯ ದಕ್ಕಿದೆ. ಟೆಸ್ಟ್​ಗಳಲ್ಲಿ​ ಸೋಲು ಗೆಲುವು ಇದ್ದೇ ಇರುತ್ತದೆ. ಅದು ಮುಖ್ಯವಲ್ಲ, ಮುಖ್ಯವಾದದ್ದು ಅಂದರೆ ಅಪ್ರೋಚ್ ಮತ್ತು ಆಕ್ರಮಣಶೀಲತೆ,’ ಎಂದು ಇಂಜಮಾಮ್ ಹೇಳಿದ್ದಾರೆ.

ಇದನ್ನೂ ಓದಿ: India vs England: ಟೀಮ್ ಇಂಡಿಯಾ ವೇಗಿಗಳ ಪರಾಕ್ರಮ: ಇಂಗ್ಲೆಂಡ್ ಆರಂಭಿಕರಿಗೆ ಕ್ರಿಕೆಟ್ ಕೆರಿಯರ್ ಅಂತ್ಯವಾಗುವ ಭಯ

Published On - 1:53 am, Wed, 18 August 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ