AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ತಿಂಗಳ ನಂತರ ಪತ್ನಿ ತನ್ನನ್ನು ಸೇರಿಕೊಂಡ ಸಂತೋಷಕ್ಕೆ ಲಂಡನ್ ಬೀದಿಗಳಲ್ಲಿ ಆಕೆಯೊಂದಿಗೆ ಕುಣಿದ ಸೂರ್ಯಕುಮಾರ್ ಯಾದವ್!

ಕಳೆದ ವರ್ಷ ಯು ಎ ಈ ಯಲ್ಲಿ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಸೀಸನ್ ನಲ್ಲಿ ದೇವಿಶಾ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಬಯೋ-ಬಬಲ್ ನಲ್ಲಿದ್ದರು. ಹಾಗೆಯೇ, ಕೇವಲ ಅರ್ಧದಷ್ಟು ಮಾತ್ರ ನಡೆದು ಸ್ಥಗಿತಗೊಂಡ 14ನೇ ಸೀಸನ್ನಲ್ಲೂ ಅವರು ಟೀಮಿನೊಂದಿಗಿದ್ದರು.

ಎರಡು ತಿಂಗಳ ನಂತರ ಪತ್ನಿ ತನ್ನನ್ನು ಸೇರಿಕೊಂಡ ಸಂತೋಷಕ್ಕೆ ಲಂಡನ್ ಬೀದಿಗಳಲ್ಲಿ ಆಕೆಯೊಂದಿಗೆ ಕುಣಿದ ಸೂರ್ಯಕುಮಾರ್ ಯಾದವ್!
ಪತ್ನಿಯೊಂದಿಗೆ ಸೂರ್ಯಕುಮಾರ ಯಾದವ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 20, 2021 | 8:45 PM

Share

ಸಚಿನ್ ತೆಂಡೂಲ್ಕರ್ ನಂತರ ಯಾರು ಎಂಬ ನಮ್ಮ ಆತಂಕ ಶಮನಗೊಂಡು ಹೆಚ್ಚು ಕಡಿಮೆ ಒಂದು ದಶಕ ಕಳೆದಿದೆ. ಕ್ರಿಕೆಟ್ ಪ್ರೇಮಿಗಳು ತಮ್ಮ ಮೇಲಿಟ್ಟಿದ್ದ ವಿಶ್ವಾಸವನ್ನು ವಿರಾಟ್ ಕೊಹ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗ ವಿರಾಟ್ ನಂತರ ಯಾರು ಎಂಬ ಆತಂಕ ಮೂಡೋದು ಸಹಜವೇ. ಈ ಆತಂಕವೂ ಬೇಗ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಆಫ್ಕೋರ್ಸ್ ಕೊಹ್ಲಿ ಇನ್ನೂ ಕನಿಷ್ಟ 5 ವರ್ಷ ಭಾರತಕ್ಕೆ ಆಡಲಿದ್ದಾರೆ ಅನ್ನೋದು ಬೇರೆ ವಿಷಯ. ಓಕೆ, ಈ ಪ್ರಶ್ನೆ ಹುಟ್ಟಿಕೊಂಡಿರುವುದಕ್ಕೆ ಕಾರಣವಿದೆ. ಕೊಹ್ಲಿ ನಿರ್ಭೀತಿ ಧೋರಣೆಯ ಬ್ಯಾಟ್ಸ್ಮನ್. ಅವರ ಹಾಗೆಯೇ, ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಮುಂಬೈನ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ. ಸೂರ್ಯನನ್ನು ಕೊಹ್ಲಿಗೆ ಹೋಲಿಕೆ ಮಾಡುವ ಪ್ರಯತ್ನ ಖಂಡಿತ ಇದಲ್ಲ. ಕೊಹ್ಲಿ ಈಸ್ ಕ್ಲಾಸ್ ಅಪಾರ್ಟ್!

ಸೂರ್ಯ ಬಿಳಿ ಚೆಂಡಿನ ಕ್ರಿಕೆಟ್ ಆವೃತ್ತಿಗಳಲ್ಲಿ ಮಿಂಚುತ್ತಿದ್ದಾರೆ. ಶಿಖರ್ ಧವನ್ ನೇತೃತ್ವದ ಭಾರತದ ತಂಡ ಇತ್ತೀಚಿಗೆ ಶ್ರೀಲಂಕಾ ಪ್ರವಾಸ ತೆರಳಿದ್ದಾಗ ಸೂರ್ಯ ಮತ್ತು ಪೃಥ್ವಿ ಶಾಗೆ ಇಂಗ್ಲೆಂಡ್ನಿಂದ ಬುಲಾವಾ ಬಂದಿದ್ದರಿಂದ ಅವರಿಬ್ಬರು ಲಂಕಾ ಟೂರ್ ಕೊನೆಗೊಳ್ಳುವ ಮೊದಲೇ ನೇರವಾಗಿ ಕೊಲಂಬೋದಿಂದ ಲಂಡನ್ಗೆ ಹಾರಿ ಕೊಹ್ಲಿ ಪಡೆ ಸೇರಿಕೊಂಡರು. ಲಂಕಾ ಮತ್ತು ಯುಕೆಯಲ್ಲಿ ಅವರು ಕೊವಿಡ್-19 ಸಂಬಂಧಿಸಿದ ನಿಯಮಾವಳಿಗಳನ್ನು ಪಾಲಿಸಿದ್ದು ಎಲ್ಲರಿಗೂ ಗೊತ್ತಿದೆ.

ಆದರೆ ಗೊತ್ತಿರದ ವಿಚಾರವೆಂದರೆ, ಸೂರ್ಯ 65 ದಿನಗಳ ನಂತರ ತಮ್ಮ ಪತ್ನಿಯನ್ನು ನೋಡಿದ್ದು. ಇಂಗ್ಲೆಂಡ್ಗೆ ಹಾರಿರುವ ಸೂರ್ಯನ ಪತ್ನಿ ದೇವಿಶಾ ಶೆಟ್ಟಿ ಕ್ವಾರಂಟೀನ್ ಅವಧಿ ತೀರಿಸಿ ಪತಿಯನ್ನು ಸೇರಿಕೊಂಡಿದ್ದಾರೆ. ಸುದೀರ್ಘ ಇಂಗ್ಲಿಷ್ ಪ್ರವಾಸದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಟಗಾರರಿಗೆ ಪತ್ನಿ, ಪಾರ್ಟ್ನರ್, ಗರ್ಲ್ಫ್ರೆಂಡ್ ಕರೆಸಿಕೊಳ್ಳುವ ಅನುಮತಿ ನೀಡಿದೆ.

ಎರಡು ತಿಂಗಳ ನಂತರ ಹೆಂಡತಿಯ ಮುಖ ನೋಡಿದ ಸೂರ್ಯನಿಗೆ ಸಂತೋಷವನ್ನು ಅದುಮಿಟ್ಟುಕೊಳ್ಳಲಾಗಿಲ್ಲ. ದೇವಿಶಾಗೂ ಅಷ್ಷೇ. ತಮ್ಮ ಆನಂದವನ್ನು ದಂಪತಿ ಲಂಡನ್ ಬೀದಿಯೊಂದರಲ್ಲಿ ಕುಣಿಯವ ಮೂಲಕ ಪ್ರಕಟಿಸಿದ್ದಾರೆ. ಸೂರ್ಯನ ಇನ್ಸ್ಟಾಗ್ರಾಮ್ ಪೋಸ್ಟ್ ನೀವೇ ನೋಡಿ. ತಮ್ಮ ಪೋಸ್ಟ್ ನಲ್ಲಿ ಅವರು, 65 ದಿನಗಳ ನಂತರ ಲಂಡನ್ನಿನ ಬೀದಿಗಳಲ್ಲಿ ನನ್ನೊಲವಿನ @devishashetty_” ಅಂತ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಯು ಎ ಈ ಯಲ್ಲಿ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಸೀಸನ್ ನಲ್ಲಿ ದೇವಿಶಾ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಬಯೋ-ಬಬಲ್ ನಲ್ಲಿದ್ದರು. ಹಾಗೆಯೇ, ಕೇವಲ ಅರ್ಧದಷ್ಟು ಮಾತ್ರ ನಡೆದು ಸ್ಥಗಿತಗೊಂಡ 14ನೇ ಸೀಸನ್ನಲ್ಲೂ ಅವರು ಟೀಮಿನೊಂದಿಗಿದ್ದರು.

ಸೂರ್ಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಬಗ್ಗೆ ಮಾತಾಡುವುದಾದರೆ, ಪ್ರಸ್ತುತ ಸರಣಿಯ ಮೂರನೇ ಟೆಸ್ಟ್ನಲ್ಲಿ ಅವರು ತಂಡದ ಅಡುವ ಇಲೆವೆನ್ನಲ್ಲಿ ಸೇರುವ ಅವಕಾಶಗಳು ನಗಣ್ಯವೆಂದೇ ಹೇಳಬೇಕು.

ಎರಡನೇ ಟೆಸ್ಟ್ ಎರಡನೇ ಇನ್ನಿಂಗ್ಸ್ನಲ್ಲಿ ದಿಟ್ಟತನದ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಮುಂದಿನ ಟೆಸ್ಟ್ಗೆ ತಮ್ಮ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಅವರಿಬ್ಬರಲ್ಲಿ ಒಬ್ಬರನ್ನು ಡ್ರಾಪ್ ಮಾಡುವ ನಿರ್ಧಾರವನ್ನು ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡರೂ ಮೊದಲು ಹನುಮ ವಿಹಾರಿಯನ್ನು ಆ ಸ್ಥಾನಕ್ಕೆ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಅವರು, ಪ್ರವಾಸ ಆರಂಭವಾದಾಗಿನಿಂದ ಟೀಮಿನ ಜೊತೆಗಿದ್ದಾರೆ.

ಏನೇ ಆದರೂ, ಎರಡನೇ ಟೆಸ್ಟ್ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದ ತಂಡದಲ್ಲಿ ಕೊಹ್ಲಿ ಬದಲಾವಣೆ ಮಾಡುವ ಯೋಚನೆ ಮಾಡಲಾರರು. ಕೇವಲ ಗಾಯದ ಸಮಸ್ಯೆ ಅಂಥದೊಂದು ಸನ್ನಿವೇಶವನ್ನು ಸೃಷ್ಟಿಸಬಹುದು.

ಎರಡು ತಂಡಗಳ ನಡುವೆ ಮೂರನೇ ಟೆಸ್ಟ್ ಲೀಡ್ಸ್, ಹೆಡಿಂಗ್ಲೀಯಲ್ಲಿ ಆಗಸ್ಟ್ 25 ರಿಂದ ಆರಂಭವಾಗಲಿದೆ. 5-ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ,

ಇದನ್ನೂ ಓದಿ: Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು