IND vs ENG 3rd Test: ಮೂರನೇ ಟೆಸ್ಟ್‌ನಲ್ಲಿ ಚೇತೇಶ್ವರ್ ಪೂಜಾರ ಬದಲು ಕಣಕ್ಕಿಳಿಯುವ ಆಟಗಾರ ಇವರೇ ನೋಡಿ
Cheteshwar Pujara: ಇಂಗ್ಲೆಂಡ್ನಲ್ಲಿ ಪೂಜಾರ ಬ್ಯಾಟ್ ಈವರೆಗೆ ಅಷ್ಟೊಂದು ಸದ್ದು ಮಾಡಿಲ್ಲ. ಆಡಿದ 12 ಟೆಸ್ಟ್‌ನಲ್ಲಿ ಇವರು ಗಳಿಸಿದ್ದು ಒಟ್ಟು 593 ರನ್ಗಳನ್ನಷ್ಟೆ. ಇವರ ಸರಾಸರಿ 27ಕ್ಕಿಂತಲೂ ಕಮ್ಮಿಯಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಟೆಸ್ಟ್ ಗೆದ್ದು ಬೀಗಿರುವ ಭಾರತ (India) 1-0 ಯಿಂದ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ವಿಶ್ವಾಸದಲ್ಲಿರುವ ಭಾರತ ಮುಂದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ತಂಡಗಳಿಗೆ ಮೂರನೇ ಪಂದ್ಯ ಮುಖ್ಯವಾಗಿರುವುದರಿಂದ ಕೊಹ್ಲಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವುದು ಖಚಿತ. ಹೀಗಾಗಿ ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ ಚೇತೇಶ್ವರ್ ಪೂಜಾರ (Cheteshwar Pujara) ಅವರನ್ನು ಕೈಬಿಡುವ ಸಾಧ್ಯತೆ ಇದೆ. ಇವರ ಜಾಗಕ್ಕೆ ಮೂವರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ.
ಇಂಗ್ಲೆಂಡ್ನಲ್ಲಿ ಪೂಜಾರ ಬ್ಯಾಟ್ ಈವರೆಗೆ ಅಷ್ಟೊಂದು ಸದ್ದು ಮಾಡಿಲ್ಲ. ಆಡಿದ 12 ಟೆಸ್ಟ್‌ನಲ್ಲಿ ಇವರು ಗಳಿಸಿದ್ದು ಒಟ್ಟು 593 ರನ್ಗಳನ್ನಷ್ಟೆ. ಇವರ ಸರಾಸರಿ 27ಕ್ಕಿಂತಲೂ ಕಮ್ಮಿಯಿದೆ. ಎರಡನೇ ಟೆಸ್ಟ್‌ನಲ್ಲಿ 206 ಎಸೆತಗಳಲ್ಲಿ 45 ರನ್ ಕಲೆಹಾಕಿದರಾದರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಇದು ಸಹಾಯ ಮಾಡುವುದು ಅನುಮಾನ. ಹೀಗಾಗಿ ಇವರ ಜಾಗಕ್ಕೆ ಮೂವರು ಆಟಗಾರರು ಸಜ್ಜಾಗಿ ನಿಂತಿದ್ದಾರೆ. ಅವರು ಯಾರು ಎಂಬುದನ್ನು ನೋಡುವುದಾದರೆ…
ಸೂರ್ಯಕುಮಾರ್ ಯಾದವ್:
ದೇಶೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಸದ್ಯ ಸೀಮಿತ ಓವರ್ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ತೋರಿರುವ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿಯೇ ಅರ್ಧ ಶತಕ ಸಿಡಿಸಿ ಭರ್ಜರಿ ಆಗಮನ ಸಾರಿರುವ ಸೂರ್ಯಕುಮಾರ್ ಬಳಿಕ ಶ್ರೀಲಂಕಾದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 77 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಇವರು 44.01ರ ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿ ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಇವರು ಆಯ್ಕೆಯಾಗುವ ಸಾಧ್ಯತೆ ಇದೆ.
ಹನುಮ ವಿಹಾರಿ:
ಇನ್ನೂ ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಸದಸ್ಯನಾಗಿದ್ದ ಹನುಮ ವಿಹಾರಿಗೆ ಮೊದಲೆರಡು ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಆದರೆ ಹನುಮ ವಿಹಾರಿ ತಂಡದ ಅಗತ್ಯಕ್ಕೆ ತಕ್ಕಂತೆ ಆಡಲು ಸಾಮರ್ಥ್ಯವನ್ನು ಹೊಂದಿರುವಂತಾ ಆಟಗಾರ. ಯಾವುದೇ ಕ್ರಮಾಂಕದಲ್ಲಿಯಾದರೂ ವಿಹಾರಿ ಬ್ಯಾಟಿಂಗ್ ನಡೆಸಬಲ್ಲವರಾಗಿದ್ದಾರೆ. 2018-19ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಹನುಮ ವಿಹಾರಿ ಆರಂಬಿಕನಾಗಿಯೂ ಕಣಕ್ಕಿಳಿದಿದ್ದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅಗತ್ಯ ಬಿದ್ದರೆ ಈ ಆಟಗಾರ ಖಂಡಿತಾ ಅದಕ್ಕೆ ಸೂಕ್ತ ಎನಿಸುವುದರಲ್ಲಿ ಅನುಮಾನವಿಲ್ಲ.
ಮಯಾಂಕ್ ಅಗರ್ವಾಲ್:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಮಯಾಂಕ್ ಭರ್ಜರಿ ಆಟವಾಡಿದ್ದರು. ಚೇತೇಶ್ವರ್ ಪೂಜಾರ ಕಣಕ್ಕಿಳಿಯುವ ಮೂರನೇ ಕ್ರಮಾಂಕಕ್ಕೆ ಹೆಚ್ಚು ಸೂಕ್ತವೆನಿಸಬಲ್ಲ ಆಟಗಾರ ಎಂದರೆ ಅದು ಮಯಾಂಕ್ ಅಗರ್ವಾಲ್. ಟೀಮ್ ಇಂಡಿಯಾದ ಆರಂಭಿಕನಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದ ಮಯಾಂಕ್ ಅಗರ್ವಾಲ್ ಅಭ್ಯಾಸದ ವೇಳೆ ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಚೆಂಡು ತಲೆಗೆ ಬಡಿದಿತ್ತು. ಹೀಗಾಗಿ ಕನ್ಕೂಶನ್‌ಗೆ ಒಳಗಾಗಿದ್ದ ಮಯಾಂಕ್ ಅಗರ್ವಾಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದರು.
India vs England: ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ಗೆ ಶಾಕ್ ಮೇಲೆ ಶಾಕ್: ಕೊಹ್ಲಿ ಪಡೆ ಫುಲ್ ಖುಷ್
ಅಫ್ಘಾನಿಸ್ತಾನದಲ್ಲಿ ವಿಮಾನದಿಂದ ಬಿದ್ದು ಸತ್ತಿರುವುದು ಖ್ಯಾತ ಫುಟ್ಬಾಲ್ ಆಟಗಾರ
(India vs England 3rd Test These Three players who can replace Cheteshwar Pujara in Leeds Test)