ಮೊಹಮ್ಮದ್ ಸಿರಾಜ್ಗೆ ಇಂಗ್ಲೆಂಡ್ ಮಾಜಿ ಆರಂಭ ಆಟಗಾರ ಜೆಫ್ರಿ ಬಾಯ್ಕಾಟ್ ರೂಪದಲ್ಲಿ ಮತ್ತೊಬ್ಬ ಅಭಿಮಾನಿ ಹುಟ್ಟಿಕೊಂಡಿದ್ದಾನೆ!
ಟೀಮ್ ಇಂಡಿಯಾದಲ್ಲಿ ಅಸ್ತಿತ್ವದಲ್ಲಿರುವ ವಾತಾವಾರಣದ ಬಗ್ಗೆ ಬಾಯ್ಕಾಟ್ ಮಾತಾಡಿದ್ದಾರೆ. ತಂಡವನ್ನು ಆವರಿಸಿರುವ ಪಾಸಿಟಿವಿಟಿ ದಿಗ್ಭ್ರಮೆ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ (4/94 ಮತ್ತು 4/32) ಪಡೆದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಮೊಹಮ್ಮದ ಸಿರಾಜ್ ಅವರನ್ನು ಹಾಲಿ ಮತ್ತು ಮಾಜಿ ಆಟಗಾರರು ಕೊಂಡಾಡುತ್ತಿದ್ದಾರೆ. ತಮ್ಮ ಜಮಾನಾದಲ್ಲಿ ವಿಶ್ವದ ಅತ್ಯುತ್ತಮ ಆರಂಭ ಆಟಗಾರ ಅನಿಸಿಕೊಂಡಿದ್ದ ಜೆಫ್ರಿ ಬಾಯ್ಕಾಟ್ ಹೈದರಾಬಾದ ಹುಡುಗನ ಬೌಲಿಂಗ್ನಿಂದ ಬಹಳ ಇಂಪ್ರೆಸ್ ಆಗಿದ್ದಾರೆ. ಹಾಗೆ ನೋಡಿದರೆ, ಬಾಯ್ಕಾಟ್ ಅಪರೂಪಕ್ಕೊಮ್ಮೆ ಬೇರೆ ದೇಶದ ಆಟಗಾರರನ್ನು ಹೊಗಳುತ್ತಾರೆ. ಸಿರಾಜ್ ಟೆಸ್ಟ್ ಕ್ರಿಕೆಟ್ ಆಡಲಾರಂಭಿಸಿ ಇನ್ನೂ ಒಂದು ವರ್ಷ ಸಹ ಆಗಿಲ್ಲ ಅದರೆ ಟೀಮ್ ಇಂಡಿಯಾಗೆ ಅವರು ದೊಡ್ಡ ಅಸೆಟ್ ಆಗಲಿದ್ದಾರೆ ಎಂದು ಬಾಯ್ಕಾಟ್ ಹೇಳಿದ್ದಾರೆ.
‘ಈ ಹುಡುಗ ಸಿರಾಜ್ ನನಗೆ ಬಹಳ ಇಷ್ಟವಾಗಿದ್ದಾನೆ. ಅವನು ಅಪರಿಮಿತವಾದ ಎನರ್ಜಿ ಹೊಂದಿದ್ದು ಹುಮ್ಮಸ್ಸಿನಿಂದ ಪುಟಿಯುತ್ತಿರುತ್ತಾನೆ. ಅವನ ಯಾವುದೇ ಪ್ರವೃತ್ತಿಗೆ ಲಗಾಮು ಹಾಕುವ ಪ್ರಯತ್ನ ಯಾರೂ ಮಾಡಬಾರದು. ಅವನ ಪಾಡಿಗೆ ಅವನನ್ನು ಬಿಟ್ಟಿಬಿಡಿ, ಟೆಸ್ಟ್ ಕ್ರಿಕೆಟ್ ಅವನು ತೀರ ಹೊಸಬನಾದದೂ ಟೀಮ್ ಇಂಡಿಯಾಗೆ ದೊಡ್ಡ ಅಸೆಟ್ ಆಗಲಿದ್ದಾನೆ,’ ಎಂದು ಭಾರತೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಯ್ಕಾಟ್ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಅಸ್ತಿತ್ವದಲ್ಲಿರುವ ವಾತಾವಾರಣದ ಬಗ್ಗೆ ಬಾಯ್ಕಾಟ್ ಮಾತಾಡಿದ್ದಾರೆ. ತಂಡವನ್ನು ಆವರಿಸಿರುವ ಪಾಸಿಟಿವಿಟಿ ದಿಗ್ಭ್ರಮೆ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಲಾರ್ಡ್ಸ್ ಪಂದ್ಯದ ಕೊನೆಯ ದಿನ ಮೊಹಮ್ಮದ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಮುರಿಯದ 9 ನೇ ವಿಕೆಟ್ಗೆ 89 ರನ್ ಸೇರಿಸಿ ಲಂಚ್ ವಿರಾಮದ ವೇಳೆ ಪೆವಿಲಿಯನ್ಗೆ ಮರಳಿದಾಗ ಬಾಲ್ಕನಿಯಲ್ಲಿ ಕುಳಿತಿದ್ದ ಭಾರತದ ಉಳಿದೆಲ್ಲ ಆಟಗಾರರು ಡ್ರೆಸಿಂಗ್ ರೂಮಿಗೆ ಹೋಗಿ ಚಪ್ಪಾಳೆ ಬಾರಿಸುತ್ತ ಅವರನ್ನು ಅಭಿನಂದಿಸಿದ್ದು ಅಟಗಾರರ ನಡುವೆ ಇರುವ ಕಾಮರಾಡರೀಯನ್ನು ತೋರಿಸುತ್ತದೆ ಎಂದು ಬಾಯ್ಕಾಟ್ ಹೇಳಿದ್ದಾರೆ.
‘ಇಂಡಿಯದ ಆಟಗಾರರು ಪರಸ್ಪರ ಪ್ರೋತ್ಸಾಹಿಸುವುದು, ಅಬಿನಂದಿಸುವುದು ಮತ್ತು ಅವರು ನಡುವೆ ಇರುವ ವಿಶ್ವಾಸ-ಪ್ರೀತಿ ನನಗೆ ಬಹಳ ಇಷ್ಟವಾಗುತ್ತದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ಬ್ಯಾಟಿಂಗ್ ಮಾಡುತ್ತಿದ್ದಾಗ ಇಡೀ ತಂಡ ಬಾಲ್ಕನಿಯಲ್ಲಿ ನಿಂತು ಕೂಗಾಡುತ್ತಾ ಅವರನ್ನು ಹುರಿದುಂಬಿಸುತಿತ್ತು. ಅವರಿಬ್ಬರು ಪೆವಿಲಿಯನ್ಗೆ ವಾಪಸ್ಸು ಬಂದಾಗ ಎಲ್ಲರು ಓಡಿ ಹೋಗಿ ಅವರನ್ನು ಸ್ವಾಗತಿಸಿದರು. ಇಂಥ ಸಂಗತಿಗಳು ತಂಡದ ಐಕ್ಯತೆ ಮತ್ತು ಸಮಗ್ರತೆಯನ್ನು ಹೆಚ್ಚಿಸುತ್ತವೆ, ಎಂದು ಬಾಯ್ಕಾಟ್ ಹೇಳಿದ್ದಾರೆ.
ಇದನ್ನೂ ಓದಿ: India vs England: 3 ವರ್ಷಗಳ ಬಳಿಕ ತಂಡ ಸೇರಿದ ಸ್ಟಾರ್ ಬ್ಯಾಟ್ಸ್ಮನ್: 3ನೇ ಟೆಸ್ಟ್ಗೆ ಇಂಗ್ಲೆಂಡ್ ಮಾಸ್ಟರ್ ಪ್ಲಾನ್