Breaking News: 2024ರ ಟಿ20 ವಿಶ್ವಕಪ್ ದಿನಾಂಕ ಬಹಿರಂಗ! ಅಮೇರಿಕಾ- ವಿಂಡೀಸ್ ಆತಿಥ್ಯ

|

Updated on: Jul 29, 2023 | 7:54 AM

T20 World Cup 2024: ವಾಸ್ತವವಾಗಿ ಕಳೆದೆರಡು ಟಿ20 ವಿಶ್ವಕಪ್ ಆವೃತ್ತಿಗಳನ್ನು ಅಕ್ಟೋಬರ್ ತಿಂಗಳಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಚುಟುಕು ವಿಶ್ವ ಸಮರವನ್ನು ನಡೆಸಲಾಗುತ್ತಿದೆ.

Breaking News: 2024ರ ಟಿ20 ವಿಶ್ವಕಪ್ ದಿನಾಂಕ ಬಹಿರಂಗ! ಅಮೇರಿಕಾ- ವಿಂಡೀಸ್ ಆತಿಥ್ಯ
ಟಿ20 ವಿಶ್ವಕಪ್ 2024
Follow us on

ಈ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್‌ (ODI World Cup 2023) ನಡೆದರೆ, ಮುಂದಿನ ವರ್ಷ ಅಂದರೆ, 2024ರಲ್ಲಿ ಟಿ20 ವಿಶ್ವಕಪ್ (T20 World Cup 2024) ನಡೆಯಲ್ಲಿದೆ. ಈ ಚುಟುಕು ವಿಶ್ವ ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ (USA And West Indies) ಜಂಟಿಯಾಗಿ ಆತಿಥ್ಯವಹಿಸುತ್ತಿದ್ದು, ಇದೀಗ ಈ ಚುಟುಕು ಸಮರದ ದಿನಾಂಕ ಹೊರಬಿದ್ದಿದೆ. ESPNcricinfo ಹಾಗೂ ಇನ್​ಸೈಡ್​ ಸ್ಫೋರ್ಟ್​ ವೆಬ್‌ಸೈಟ್‌ಗಳ ವರದಿಯ ಪ್ರಕಾರ, 2024ರ ಟಿ20 ವಿಶ್ವಕಪ್ ಮುಂದಿನ ವರ್ಷ ಜೂನ್ 4 ರಿಂದ 30 ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಕಳೆದೆರಡು ಟಿ20 ವಿಶ್ವಕಪ್ ಆವೃತ್ತಿಗಳನ್ನು ಅಕ್ಟೋಬರ್ ತಿಂಗಳಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಜೂನ್ ತಿಂಗಳಲ್ಲಿ ಚುಟುಕು ವಿಶ್ವ ಸಮರವನ್ನು ನಡೆಸಲು ತೀರ್ಮಾನಿಸಲಾಗಿದೆ.

ಕೆಲವು ಸ್ಥಳಗಳ ಶಾರ್ಟ್‌ಲಿಸ್ಟ್

ವರದಿಯ ಪ್ರಕಾರ , ಐಸಿಸಿ ಅಧಿಕಾರಿಗಳು ಯುಎಸ್​ಎಯಲ್ಲಿ ಟಿ20 ವಿಶ್ವಕಪ್​ಗೆ ಆತಿಥ್ಯವಹಿಸುವಂತಹ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿದ್ದು, ಕೆಲವು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ. ಅಮೆರಿಕ ಮೊದಲ ಬಾರಿಗೆ ಗ್ಲೋಬಲ್ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್​ಎಯ 10 ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲ್ಲಿದ್ದು, ಯುನೈಟೆಡ್ ಸ್ಟೇಟ್ಸ್, ಮೋರಿಸ್ವಿಲ್ಲೆ, ಡಲ್ಲಾಸ್, ನ್ಯೂಯಾರ್ಕ್ ಜೊತೆಗೆ ಫ್ಲೋರಿಡಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಏಷ್ಯಾಕಪ್, ವಿಶ್ವಕಪ್​ಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಬ್ಬರು ಪಾಕ್ ಕ್ರಿಕೆಟಿಗರು..!

ಸ್ವರೂಪದಲ್ಲಿ ಬದಲಾವಣೆ

ಕಳೆದ ಕೆಲವು ಆವೃತ್ತಿಗಳಿಗಿಂತ ಭಿನ್ನವಾಗಿ, 2024 ರ ಟಿ20 ವಿಶ್ವಕಪ್ ಅನ್ನು ನಡೆಸಲಾಗುತ್ತಿದೆ. 2024ರ ವಿಶ್ವಕಪ್​ನಲ್ಲಿ 16 ತಂಡಗಳ ಬದಲಿಗೆ 20 ತಂಡಗಳು ಕಣಕ್ಕಿಳಿಯಲ್ಲಿವೆ. ಎಲ್ಲಾ 20 ತಂಡಗಳನ್ನು ತಲಾ 5 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ರೌಂಡ್‌ಗೆ ಅರ್ಹತೆ ಪಡೆಯುತ್ತವೆ. ಇಲ್ಲಿ ಎಂಟು ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

ಆ ಬಳಿಕ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್‌ನಲ್ಲಿ ಗೆದ್ದ ತಂಡವೂ ಫೈನಲ್‌ನಲ್ಲಿ ಆಡಲಿದೆ. ಪ್ರಸ್ತುತ ಇಂಗ್ಲೆಂಡ್ ತಂಡ ಚುಟುಕು ಸಮರದ ಹಾಲಿ ಚಾಂಪಿಯನ್ ಆಗಿದ್ದು, ಕಳೆದ ಆವೃತ್ತಿಯಲ್ಲಿ ಜೋಸ್ಟ್ ಬಟ್ಲರ್ ನೇತೃತ್ವದ ಆಂಗ್ಲ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು.

ಕಣಕ್ಕೆ ಅಮೇರಿಕಾ

ಈ ವಿಶ್ವಕಪ್‌ನ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, 2024ರ ಟಿ20 ವಿಶ್ವಕಪ್​ನಲ್ಲಿ ಅಮೆರಿಕದ ಕ್ರಿಕೆಟ್ ತಂಡವೂ ಆಡಲಿದೆ. ಈ ತಂಡ ಆತಿಥೇಯರಾಗಿ ಅರ್ಹತೆ ಪಡೆದಿದೆ. ಅಮೆರಿಕಕ್ಕೆ ಆತಿಥ್ಯ ವಹಿಸಲು ಅನುವು ಮಾಡಿಕೊಡುವುದರೊಂದಿಗೆ ಐಸಿಸಿ, ಹೊಸ ದೇಶಗಳಲ್ಲಿ ಕ್ರಿಕೆಟ್ ಅನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:37 am, Sat, 29 July 23