ICC T20I Rankings: 90ನೇ ಸ್ಥಾನದಿಂದ ಒಮ್ಮೆಲೆ 2ನೇ ರ‍್ಯಾಂಕಿಂಗ್​ಗೆ ಜಿಗಿದ ಫಿಲ್ ಸಾಲ್ಟ್​..!

| Updated By: ಝಾಹಿರ್ ಯೂಸುಫ್

Updated on: Dec 28, 2023 | 3:27 PM

ICC T20I Rankings: ಟಿ20 ಬ್ಯಾಟರ್​​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದಾರೆ. ಕಳೆದ ಸೀಸನ್​ನಲ್ಲಿ ಸಾಲ್ಟ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಕಾಣಿಸಿಕೊಂಡಿದ್ದರು.

ICC T20I Rankings: 90ನೇ ಸ್ಥಾನದಿಂದ ಒಮ್ಮೆಲೆ 2ನೇ ರ‍್ಯಾಂಕಿಂಗ್​ಗೆ ಜಿಗಿದ ಫಿಲ್ ಸಾಲ್ಟ್​..!
Phil Salt
Follow us on

ಐಸಿಸಿ ನೂತನ ಟಿ20 ರ‍್ಯಾಂಕಿಂಗ್ (ICC T20I Rankings) ಪಟ್ಟಿಯನ್ನು ಪ್ರಕಟಿಸಿದೆ. ಬ್ಯಾಟರ್​ಗಳ ಪಟ್ಟಿಯಲ್ಲಿ ಈ ಬಾರಿ ಕೂಡ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಇಂಗ್ಲೆಂಡ್ ಬ್ಯಾಟ್ಸ್​ಮನ್ ಫಿಲ್ ಸಾಲ್ಟ್​ 2ನೇ ಸ್ಥಾನಕ್ಕೇರಿದ್ದಾರೆ. ಅದು ಕೂಡ 88 ಸ್ಥಾನಗಳ ಜಿಗಿತದೊಂದಿಗೆ ಎಂಬುದು ವಿಶೇಷ.

ಅಂದರೆ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಗೂ ಮುನ್ನ ಫಿಲ್​ ಸಾಲ್ಟ್​ 90ನೇ ರ‍್ಯಾಂಕಿಂಗ್​ನಲ್ಲಿದ್ದರು. ಆದರೆ ವಿಂಡೀಸ್ ವಿರುದ್ಧದ ಸರಣಿಯಲ್ಲಿ 2 ಭರ್ಜರಿ ಶತಕದೊಂದಿಗೆ ಒಟ್ಟು 331 ರನ್ ಬಾರಿಸಿ ಮಿಂಚಿದ್ದ ಸಾಲ್ಟ್ ಇದೀಗ ಟಿ20 ಬ್ಯಾಟರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಇನ್ನು ಟಿ20 ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ದ್ವಿತೀಯ ಸ್ಥಾನದಲ್ಲಿ ರಶೀದ್ ಖಾನ್ ಕಾಣಿಸಿಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾ ಸ್ಪಿನ್ನರ್ ರವಿ ಬಿಷ್ಣೋಯ್ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿ:

  1. ಸೂರ್ಯಕುಮಾರ್ ಯಾದವ್ (ಭಾರತ)- 887 ಅಂಕಗಳು
  2. ಫಿಲ್ ಸಾಲ್ಟ್ (ಇಂಗ್ಲೆಂಡ್)- 802 ಅಂಕಗಳು
  3. ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 787 ಅಂಕಗಳು
  4. ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 755 ಅಂಕಗಳು
  5. ಬಾಬರ್ ಆಝಂ (ಪಾಕಿಸ್ತಾನ್)- 734 ಅಂಕಗಳು
  6. ರಿಲೀ ರೊಸ್ಸೊವ್ (ಸೌತ್ ಆಫ್ರಿಕಾ)- 689 ಅಂಕಗಳು
  7. ಜೋಸ್ ಬಟ್ಲರ್ (ಇಂಗ್ಲೆಂಡ್)- 680 ಅಂಕಗಳು
  8. ರುತುರಾಜ್ ಗಾಯಕ್ವಾಡ್ (ಭಾರತ)- 674 ಅಂಕಗಳು
  9. ರೀಝ ಹೆಂಡ್ರಿಕ್ಸ್​ (ಸೌತ್ ಆಫ್ರಿಕಾ)- 660 ಅಂಕಗಳು
  10. ಡೇವಿಡ್ ಮಲಾನ್ (ಇಂಗ್ಲೆಂಡ್)- 657 ಅಂಕಗಳು

ಟಿ20 ಬೌಲರ್​ಗಳ ಶ್ರೇಯಾಂಕ ಪಟ್ಟಿ:

  1. ಆದಿಲ್ ರಶೀದ್ (ಇಂಗ್ಲೆಂಡ್)- 726 ಅಂಕಗಳು
  2. ರಶೀದ್ ಖಾನ್ (ಅಫ್ಘಾನಿಸ್ತಾನ್)- 692 ಅಂಕಗಳು
  3. ರವಿ ಬಿಷ್ಣೋಯ್ (ಭಾರತ)- 685 ಅಂಕಗಳು
  4. ಅಕೇಲ್ ಹೊಸೈನ್ (ವೆಸ್ಟ್ ಇಂಡೀಸ್)- 683 ಅಂಕಗಳು
  5. ವನಿಂದು ಹಸರಂಗ (ಶ್ರೀಲಂಕಾ)- 679 ಅಂಕಗಳು
  6. ಮಹೀಶ್ ತೀಕ್ಷಣ (ಶ್ರೀಲಂಕಾ)- 677 ಅಂಕಗಳು
  7. ಫಝಲ್ಹಕ್ ಫಾರೂಖಿ (ಅಫ್ಘಾನಿಸ್ತಾನ್)- 657 ಅಂಕಗಳು
  8. ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 656 ಅಂಕಗಳು
  9. ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 654 ಅಂಕಗಳು
  10. ರೀಸ್ ಟೋಪ್ಲಿ (ಇಂಗ್ಲೆಂಡ್)- 643 ಅಂಕಗಳು

ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

IPL 2024 ರ ಹರಾಜಿನಲ್ಲಿ ಸಾಲ್ಟ್​ ಅನ್​ಸೋಲ್ಡ್​:

ಟಿ20 ಬ್ಯಾಟರ್​​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದಾರೆ. ಕಳೆದ ಸೀಸನ್​ನಲ್ಲಿ ಸಾಲ್ಟ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿ ಸಾಲ್ಟ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಇದೀಗ ಐಸಿಸಿ ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಫಿಲ್ ಸಾಲ್ಟ್ ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.