ICC Test Rankings: ಟಾಪ್-3 ಗೆ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಎಂಟ್ರಿ

|

Updated on: Jul 25, 2024 | 7:15 AM

ICC Test Rankings: ಐಸಿಸಿ ಟೆಸ್ಟ್​ ಬ್ಯಾಟರ್​ಗಳ ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಯುವ ಸ್ಪೋಟಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು ಎಂಬುದು ವಿಶೇಷ. ಹಾಗೆಯೇ ಇಂಗ್ಲೆಂಡ್​ ತಂಡದ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಈ ಬಾರಿ 4 ಸ್ಥಾನ ಜಿಗಿತ ಕಂಡಿದ್ದಾರೆ.

ICC Test Rankings: ಟಾಪ್-3 ಗೆ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಎಂಟ್ರಿ
Harry Brook
Follow us on

ಐಸಿಸಿ ಟೆಸ್ಟ್ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್​ನ ಸ್ಪೋಟಕ ಬ್ಯಾಟ್ಸಮನ್ ಹ್ಯಾರಿ ಬ್ರೂಕ್ ಈ ಸಲ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ 64 ಎಸೆತಗಳಲ್ಲಿ ಬಿರುಸಿನ ಅರ್ಧಶತಕ ಬಾರಿಸಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್​ನಲ್ಲಿ 132 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ 109 ರನ್​ಗಳ ಭರ್ಜರಿ ಶತಕ ಸಿಡಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಹ್ಯಾರಿ ಬ್ರೂಕ್ ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲೇರಿದ್ದಾರೆ.

ಅಗ್ರ ಹತ್ತರಲ್ಲಿ ಭಾರತೀಯರು:

ಟಾಪ್-10 ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟರ್​ಗಳು ಸ್ಥಾನ ಪಡೆದಿದ್ದಾರೆ. ಆದರೆ ಯಾರೂ ಕೂಡ ಟಾಪ್-5 ನಲ್ಲಿಲ್ಲ ಎಂಬುದು ವಿಶೇಷ. ಅದರಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 7ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಯಶಸ್ವಿ ಜೈಸ್ವಾಲ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಈ ಬಾರಿ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಟೆಸ್ಟ್​ ಬ್ಯಾಟರ್​ನ ನೂತನ ಶ್ರೇಯಾಂಕ ಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?

ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿ:

  • 1- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 859 ರೇಟಿಂಗ್
  • 2- ಜೋ ರೂಟ್ (ಇಂಗ್ಲೆಂಡ್)- 852 ರೇಟಿಂಗ್
  • 3- ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 771 ರೇಟಿಂಗ್
  • 4- ಬಾಬರ್ ಆಝಂ (ಪಾಕಿಸ್ತಾನ್)- 768 ರೇಟಿಂಗ್
  • 5- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 768 ರೇಟಿಂಗ್
  • 6- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 757 ರೇಟಿಂಗ್
  • 7- ರೋಹಿತ್ ಶರ್ಮಾ (ಭಾರತ)- 751 ರೇಟಿಂಗ್
  • 8- ಯಶಸ್ವಿ ಜೈಸ್ವಾಲ್ (ಭಾರತ)- 740 ರೇಟಿಂಗ್
  • 9- ದಿಮುತ್ ಕರುಣರತ್ನೆ (ಶ್ರೀಲಂಕಾ)- 739 ರೇಟಿಂಗ್
  • 10- ವಿರಾಟ್ ಕೊಹ್ಲಿ (ಭಾರತ)- 737 ರೇಟಿಂಗ್

 

Published On - 7:13 am, Thu, 25 July 24